ಸಾರಾಂಶ
ನಮ್ಮ ಭಾಷೆಯ ಮೇಲಿನ ವ್ಯಾಮೋಹ ಕಡಿಮೆಯಾಗಿ ಹೋದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಂಸ್ಕೃತ ಭಾಷೆಯಂತೆ ಕನ್ನಡ ಭಾಷೆಯೂ ಗ್ರಂಥಗಳಲ್ಲಿಯೇ ಉಳಿದು ಹೋಗಿ ನಶಿಸಿದ ಭಾಷೆ ಎಂದು ಕರೆಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ತುಮಕೂರು: ಕನ್ನಡದ ಅಸ್ಮಿತೆ ಉಳಿದುಕೊಳ್ಳಲು ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ ಕನ್ನಡದ ಸಾರಸ್ವತ ಲೋಕವನ್ನು ಪರಭಾಷಿಕರಿಗೂ ಪರಿಚಯ ಮಾಡಿಕೊಡಬೇಕು ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಾಲಿನಿ ಎಂ. ರವರು ತಿಳಿಸಿದರು. ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು, ನಮ್ಮ ಭಾಷೆಯ ಮೇಲಿನ ವ್ಯಾಮೋಹ ಕಡಿಮೆಯಾಗಿ ಹೋದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಂಸ್ಕೃತ ಭಾಷೆಯಂತೆ ಕನ್ನಡ ಭಾಷೆಯೂ ಗ್ರಂಥಗಳಲ್ಲಿಯೇ ಉಳಿದು ಹೋಗಿ ನಶಿಸಿದ ಭಾಷೆ ಎಂದು ಕರೆಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಒಂದು ಭಾಷೆ ಅಳಿವಾದರೆ ಅದು ಕೇವಲ ಭಾಷೆಗಾದ ನಷ್ಟವಲ್ಲ. ಅದು ಒಂದು ಸಂಸ್ಕಾರ, ಸಂಸ್ಕೃತಿಯ ಅವನತಿಯಾದಂತಾಗುತ್ತದೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ವೈದ್ಯರಾದ ಡಾ.ಚಂದ್ರಶೇಖರ್, ಡಾ.ಸುಮ, ಡಾ.ರಜನಿ, ಎಚ್. ಆರ್ ನಾಗಭೂಷಣ್, ಸುರೇಶ್, ಮಂಜುನಾಥ್ ಮುಂತಾದವರಿದ್ದರು.