ಸೌಹಾರ್ದತೆಯ ಸಂದೇಶ ಸಾರುವ ಕನ್ನಡ ತೇರು: ಜಿಲ್ಲಾ ಕಸಾಪ ಅಧ್ಯಕ್ಷ ಕೃಷ್ಣಪ್ಪ

| Published : Aug 09 2024, 12:34 AM IST

ಸೌಹಾರ್ದತೆಯ ಸಂದೇಶ ಸಾರುವ ಕನ್ನಡ ತೇರು: ಜಿಲ್ಲಾ ಕಸಾಪ ಅಧ್ಯಕ್ಷ ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನಾದ್ಯಂತ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ- ೫೦ ಜ್ಯೋತಿ ರಥವು ಕನ್ನಡ ನಾಡು, ಸಂಸ್ಕೃತಿ ಹಾಗೂ ವೈವಿಧ್ಯತೆ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು. ವಜಯಪುರಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದರು.

-ಜಿಲ್ಲಾ ಕಸಾಪ ಅಧ್ಯಕ್ಷ ಕೃಷ್ಣಪ್ಪ ಅಭಿಮತ -ಕರ್ನಾಟಕ ಸಂಭ್ರಮ- 50 ಜ್ಯೋತಿರಥಕ್ಕೆ ಅದ್ಧೂರಿ ಸ್ವಾಗತಕನ್ನಡಪ್ರಭ ವಾರ್ತೆ ವಿಜಯಪುರ

ಮೈಸೂರು ಎಂಬ ಹೆಸರು ಕರ್ನಾಟಕವೆಂದು ಮರು ನಾಮಕರಣವಾಗಿ ೫೦ ವರ್ಷ ಪೂರೈಸಿದ ಪ್ರಯುಕ್ತ ಕನ್ನಡ ನಾಡಿನಾದ್ಯಂತ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ- ೫೦ ಜ್ಯೋತಿ ರಥವು ಕನ್ನಡ ನಾಡು, ಸಂಸ್ಕೃತಿ ಹಾಗೂ ವೈವಿಧ್ಯತೆ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಕೋಲಾರ ಮುಖ್ಯರಸ್ತೆಯಿಂದ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಪುರಸಭೆ ಹಾಗೂ ಜಿಲ್ಲಾ ಕಸಾಪ, ಟೌನ್ ಕಸಾಪ ಸದಸ್ಯರು, ಕನ್ನಡಾಭಿಮಾನಿಗಳು ಸ್ವಾಗತಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡಿಗರಾದ ನಾವೆಲ್ಲರೂ ಒಂದೇ ಎಂಬ ಸೌಹಾರ್ದ ಸಂದೇಶ ಸಾರುವ ಈ ತೇರು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಕರ್ನಾಟಕದ ಎಲ್ಲರ ಮನೆ- ಮನ ಬೆಳಗಲಿದೆ. ಕರ್ನಾಟಕ ರಾಜ್ಯ ಉದಯವಾಗಿ ೫೦ ವರ್ಷ ಪುರೈಸಿರುವುದರಿಂದ ಕನ್ನಡ ನಾಡು, ನುಡಿಯ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಜೊತೆಗೆ ಸಂಭ್ರಮ ಆಚರಿಸಲು ಈ ರಥಯಾತ್ರೆಯನ್ನು ಸರ್ಕಾರ ಆಯೋಜಿಸಿದೆ. ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಕನ್ನಡ ನಾಡು- ನುಡಿ ಏಳಿಗೆಯ ಪಥದಲ್ಲಿ ಸಾಗಲು ಕನ್ನಡ ಭಾಷೆಯನ್ನು ಮಹೋನ್ನತ ಮಟ್ಟಕ್ಕೆ ಬೆಳೆಸಬೇಕು ಎಂದು ಕರೆ ನೀಡಿದರು.

ಟೌನ್ ಕಸಾಪ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಮಾತನಾಡಿ, ಕನ್ನಡ ನಮ್ಮ ಉಸಿರು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ ಕರ್ನಾಟಕ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಭವ್ಯ ಪರಂಪರೆ ಹೊಂದಿದೆ, ಅಂತಹ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದೆ ಈ ಕರ್ನಾಟಕ ಸಂಭ್ರಮ- ೫೦ರ ಆಶಯವಾಗಿದೆ ಎಂದು ಹೇಳಿದರು.

ರಥಯಾತ್ರೆ ಕಲಾತಂಡಗಳೊಂದಿಗೆ ಬೂದಿಗೆರೆ, ಚನ್ನರಾಯಪಟ್ಟಣದಿಂದ ಅದ್ಧೂರಿಯಾಗಿ ಸಾಗಿತು. ಮೆರವಣಿಗೆಯಲ್ಲಿ ಕಲಾವಿದರ ಡೊಳ್ಳುಕುಣಿತ, ಶಾಲಾ ಮಕ್ಕಳ ಬ್ಯಾಂಡ್ ವಾದನ, ಕೀಲುಗೊಂಬೆ ಕುಣಿತ ಸಾರ್ವಜನಿಕರ ಗಮನ ಸೆಳೆದವು.

ಈ ವೇಳೆ ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಪುರಸಭಾ ಸದಸ್ಯ ಎ.ಆರ್.ಹನೀಪುಲ್ಲಾ. ಪುರಸಭಾ ಮಾಜಿ ಉಪಾಧ್ಯಕ್ಷ ಎಂ.ಕೇಶವಪ್ಪ, ಪುರಸಭಾ ಸದಸ್ಯ ರಾಜಣ್ಣ, ಸಿ. ಎಂ. ರಾಮು, ಜೆಡಿಎಸ್ ಮುಖಂಡ ಎಸ್.ಆರ್.ಎಸ್. ಬಸವರಾಜ್, ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್, ಪರಿಸರ ಅಭಿಯಂತರ ಶೇಖರ್, ಆರೋಗ್ಯಾಧಿಕಾರಿ ಲಾವಣ್ಯ, ಸಹನಾ,ಪುರಸಭೆ ಸಿಬ್ಬಂದಿ ಅನಿಲ್, ನಾಗೇಗೌಡ, ಪವನ್ ಜೋಶಿ, ಹೇಮಾವತಿ, ಲಿಂಗಣ್ಣ, ಜನಾರ್ಧನ, ಸುನಿಲ್, ಮಂಜುನಾಥ್, ಪೃಥ್ವಿ, ಶಿವ, ಮೂರ್ತಿ, ವಿನೋದ್, ರವಿ, ಗೋಪಿಕೃಷ್ಣ , ಕುಮಾರ್, ಮಂಜ, ಬಸವರಾಜ್ ಕಲಾವಿದರ ಸಂಘದ ಅಧ್ಯಕ್ಷ ಮೋಹನ್, ಹೇಮಂತ್ ಕುಮಾರ್, ಶಿಕ್ಷಕ ಪರಮೇಶ್, ಕರವೇ ಚಂದ್ರಶೇಖರ್, ಮುನಿರಾಜ್, ಶರಣ ಹೀರೆಮಠ್, ರೈತ ಬಣದ ಅಧ್ಯಕ್ಷ ನಂಜುಂಡಸ್ವಾಮಿ, ವಿನೋದ್ ಗೌಡ, ಮುಖಂಡ ಪ್ರಕಾಶ್ ಕನ್ನಡ ಮತ್ತು ಸಂಸ್ಕೃತಿ ಕನ್ನಡ ಪರ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಸಾಹಿತಿಗಳು, ಕನ್ನಡ ಪ್ರೇಮಿಗಳು, ಪುರಸಭೆ ಪೌರಕಾರ್ಮಿಕರು ಸರ್ಕಾರಿ ಶಾಲೆಯ ಮಕ್ಕಳು ಭಾಗವಹಿಸಿದ್ದರು.