ಕಾಂತರಾಜ ಆಯೋಗ ಜಾತಿಗಣತಿ ನಡೆಸಿಲ್ಲ

| Published : Nov 25 2023, 01:15 AM IST

ಸಾರಾಂಶ

ಸರ್ಕಾರವು ಈ ವರದಿ ಕುರಿತು ಸ್ಪಷ್ಟೀಕರಣ ನೀಡುವುದು ಅಗತ್ಯವಾಗಿದೆ. ಲಿಂಗಾಯತರು ಕೇವಲ 65 ಲಕ್ಷ ಜನರಿದ್ದಾರೆ ಎಂದು ಮಾಧ್ಯಮದಲ್ಲಿ ಬಿಂಬಿಸುತ್ತಿದ್ದು, ಅದು ಸರಿಯಲ್ಲ. ಲಿಂಗಾಯತರು ಸುಮಾರು 1.80 ಕೋಟಿ ಜನರಿದ್ದಾರೆ. ಈಗ ಹೇಳುತ್ತಿರುವದು ಆಧಾರ ರಹಿತ.

ಕನ್ನಡಪ್ರಭ ವಾರ್ತೆ ಕೆರೂರ

ಕಾಂತರಾಜ ಆಯೋಗವು ಜಾತಿಗಣತಿ ಸಮೀಕ್ಷೆ ಮಾಡಿಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಗುರುತಿಸುವ ಜವಾಬ್ದಾರಿ ನಿರ್ವಹಿಸಿದೆ. ಆದರೆ, ಈಗ ಕಾಂತರಾಜು ಸಮೀಕ್ಷೆಯ ವರದಿಯನ್ನು ಜಾತಿಗಣತಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ನಾಡಿನ ಎಲ್ಲ ಸಮುದಾಯದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿದವರಿದ್ದು ಅವರನ್ನು ಗುರುತಿಸಿ ಸೌಲಭ್ಯ ಒದಗಿಸಿದರೆ ಹಿಂದುಳಿದವರನ್ನು ಮೇಲೆತ್ತುವ ಸರ್ಕಾರದ ಗುರಿ ಸದ್ಬಳಕೆಯಾಗಿ ಜಾತ್ಯತೀತ ಪರಿಕಲ್ಪನೆಯ ಆಡಳಿತಕ್ಕೆ ಒತ್ತು ಕೊಟ್ಟಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಣಜಿಗರ ಸಂಘದ ಉಪಾಧ್ಯಕ್ಷ ಎನ್.ಬಿ.ಬನ್ನೂರ ಹೇಳಿದರು.

ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರವು ಈ ವರದಿ ಕುರಿತು ಸ್ಪಷ್ಟೀಕರಣ ನೀಡುವುದು ಅಗತ್ಯವಾಗಿದೆ. ಲಿಂಗಾಯತರು ಕೇವಲ 65 ಲಕ್ಷ ಜನರಿದ್ದಾರೆ ಎಂದು ಮಾಧ್ಯಮದಲ್ಲಿ ಬಿಂಬಿಸುತ್ತಿದ್ದು, ಅದು ಸರಿಯಲ್ಲ. ಲಿಂಗಾಯತರು ಸುಮಾರು 1.80 ಕೋಟಿ ಜನರಿದ್ದಾರೆ. ಈಗ ಹೇಳುತ್ತಿರುವದು ಆಧಾರ ರಹಿತ ಎಂದು ಹೇಳಿದರು.

ಸನ್ಮಾನ್ಯ ಕಾಂತರಾಜು ಅವರು ಸಲ್ಲಿಸಿದ ವರದಿಯ ಮೂಲಪ್ರತಿ ಕಳೆದುಹೋಗಿದೆ. ಅದಕ್ಕೆ ಹಿಂದಿನ ಕಾರ್ಯದರ್ಶಿಗಳು ಸಹಿ ಮಾಡಿಲ್ಲ ಎಂಬುದು ತಿಳಿದುಬಂದಿದೆ. ಈಗ ನೇಮಕವಾದ ಸನ್ಮಾನ್ಯ ಜಯಪ್ರಕಾಶ ಹೆಗಡೆಯವರು ಪೂರ್ಣವರದಿಯನ್ನು ಸಲ್ಲಿಸಲು ಹೇಗೆ ಸಾಧ್ಯ,ದತ್ತಾಂಶದ ಆಧಾರದ ಮೇಲೆ ವರದಿ ತಯಾರಿಸುವ ಪ್ರಯತ್ನ ನಡೆದಿದ್ದು, ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ಸರಕಾರಕ್ಕೆ ಕಾಳಜಿ ಇದ್ದರೆ ಹೊಸ ಆಯೋಗ ನೇಮಿಸಿ, ಬೇರುಮಟ್ಟದಿಂದ ಪ್ರತಿ ಕುಟುಂಬವನ್ನು ಸಂಪರ್ಕಿಸಿ ಸಮೀಕ್ಷೆ ಮಾಡಬೇಕು ಎಂದು ಬನ್ನೂರ ಆಗ್ರಹಿಸಿದ್ದಾರೆ.