ಸಾರಾಂಶ
ಬಾದಾಮಿ: ವಿಶ್ವಚೇತನ ಬಾದಾಮಿ ವತಿಯಿಂದ ನಾಟ್ಯರಂಗ ಪ್ರದರ್ಶಕ ಕಲಾ ಕೇಂದ್ರ ಶಿರ್ಶಿ ಇವರ ಸಹಯೋಗದಲ್ಲಿ ರಾಧಾರಾಣಿ ಅಭಿನಯದ (ಸಲಹೆ- ಸತೀಶ ಕೊಳ್ಳೇಗಾಲ) ಕುವೆಂಪು ಅವರ ಕಾದಂಬರಿ ಕಾನೂರು ಸುಬ್ಬಮ್ಮ ಹೆಗ್ಗಡತಿ ಆಧಾರಿತ ಪಾತ್ರಾಭಿನಯ ಕಾರ್ಯಕ್ರಮ ಶನಿವಾರ ಪಟ್ಟಣದ ಕಾಲೇಜು ರಸ್ತೆಯ ಶಿವಯೋಗಮಂದಿರ ಶಾಖಾಮಠದ ಆವಣರದಲ್ಲಿ ಯಶಸ್ವಿಯಾಗಿ ಜರುಗಿತು.

ಕಾನೂರು ಹೆಗ್ಗಡತಿ ಸುಬ್ಬಮ್ಮ ಮಲೆನಾಡಿನ ಬದುಕು ಭವಣೆ ನೋಟದ ಅಭಿನಯ ಅನಾವರಣಗೊಂಡಿತು. ಕಾದಂಬರಿ ಓದುವ ಹವ್ಯಾಸಿಗರು ಏಕಪಾತ್ರಾಭಿನಯದ ಮೆಚ್ಚಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಬೆಂಬಲಿಸಿದರು. ಹೂವಯ್ಯನ ಕಲ್ಪನೆಯಲ್ಲಿನ ಅವನ ತಂದೆ ಚಂದ್ರೇಗೌಡ ಹೆಣ್ಣು ಕೇಳಿದ್ದರ ಅನುಭವ ಅಭಿನಯದ ಅನುಭಾವ ಮನ ತುಂಬಿತು.ಕಾರ್ಯಕ್ರಮದಲ್ಲಿ ಯುವಕರು, ರಂಗಾಸಕ್ತರು, ಮಹಿಳೆಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಉಜ್ವಲ ಬಸರಿ ಸ್ವಾಗತಿಸಿದರು. ಕಾರ್ಯದರ್ಶಿ ಇಷ್ಟಲಿಂಗ ಶಿರಶಿ ನಿರೂಪಿಸಿ, ವಂದಿಸಿದರು.