ಮುಂಡರಗಿ ಹಾಗೂ ಡಂಬಳ ಹೋಬಳಿ ವ್ಯಾಪ್ತಿಯ ಕಪ್ಪತಗುಡ್ಡದಂಚಿನ 31 ಗ್ರಾಮಗಳ ಯುವಕರಿಗೆ ಹಾಗೂ ಗ್ರಾಮಸ್ಥರಿಗೆ ಕಪ್ಪತಗುಡ್ಡ ವನ್ಯಜೀವಿಧಾಮವನ್ನು ಬೆಂಕಿಯಿಂದ ರಕ್ಷಣೆ ಮಾಡಲು ಜನಜಾಗೃತಿಗಾಗಿ ಮುಂಡರಗಿ ತಾಲೂಕು ಮಟ್ಟದ ಯುವಕರಿಗಾಗಿ ವಾಲಿಬಾಲ್ ಪಂದ್ಯಾವಳಿ ನಡೆಸಲಾಗುತ್ತಿದೆ.
ಡಂಬಳ: ಕಪ್ಪತಗುಡ್ಡದಂಚಿನ ಗ್ರಾಮಗಳ ಸಾರ್ವಜನಿಕರಿಗೆ ಅರಣ್ಯ ಜಾಗೃತಿ ಮೂಡಿಸಲು ನಮ್ಮ ಕಪ್ಪತಗುಡ್ಡ ಕಪ್ ವಾಲಿಬಾಲ್ ಪಂದ್ಯಾವಳಿ ಡಿ. 21, 25, 30ರಂದು ಆಯೋಜಿಸಲಾಗಿದೆ.
ಮುಂಡರಗಿ ಹಾಗೂ ಡಂಬಳ ಹೋಬಳಿ ವ್ಯಾಪ್ತಿಯ ಕಪ್ಪತಗುಡ್ಡದಂಚಿನ 31 ಗ್ರಾಮಗಳ ಯುವಕರಿಗೆ ಹಾಗೂ ಗ್ರಾಮಸ್ಥರಿಗೆ ಕಪ್ಪತಗುಡ್ಡ ವನ್ಯಜೀವಿಧಾಮವನ್ನು ಬೆಂಕಿಯಿಂದ ರಕ್ಷಣೆ ಮಾಡಲು ಜನಜಾಗೃತಿಗಾಗಿ ಮುಂಡರಗಿ ತಾಲೂಕು ಮಟ್ಟದ ಯುವಕರಿಗಾಗಿ ವಾಲಿಬಾಲ್ ಪಂದ್ಯಾವಳಿ ನಡೆಸಲಾಗುತ್ತಿದೆ.ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದಾಗ ಕಪ್ಪತಗುಡ್ಡದ ಅಂಚಿನ ಗ್ರಾಮಗಳ ಯುವಕರು, ಹಿರಿಯರು, ಮುಖಂಡರು ಒಂದೆಡೆ ಸೇರುವುದರಿಂದ ಒಂದೇ ವೇದಿಕೆಯಲ್ಲಿ ಕಪ್ಪತಗುಡ್ಡ ವನ್ಯಜೀವಿಧಾಮದ ಉದ್ದೇಶ, ಮಹತ್ವ ಹಾಗೂ ಬೆಂಕಿ ಹಚ್ಚುವುದರಿಂದ ಉಂಟಾಗುವ ಹಾನಿ ಕುರಿತು ಜನಜಾಗೃತಿ ಮೂಡಿಸಬಹುದು.ಈ ಕುರಿತು ತಿಳಿವಳಿಕೆ ನೀಡಲು ಗದಗ ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಮುಂಡರಗಿಯ ಕಪ್ಪತ್ತಗುಡ್ಡ ಅರಣ್ಯ ವಲಯದ ಆಶ್ರಯದಲ್ಲಿ ಯೋಜನೆ ಹಾಕಿಕೊಂಡಿದೆ. ಪ್ರಸಕ್ತ ವರ್ಷ ಗದಗ ಪ್ರಾದೇಶಿಕ ಅರಣ್ಯ ವಿಭಾಗವು ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಡಿ. 21ರಂದು ಡಂಬಳ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯ, ಬಾಗೇವಾಡಿಯ ಟಿ.ಎಸ್. ಪ್ರೌಢಶಾಲೆಯ ಆವರಣದಲ್ಲಿ ಡಿ. 25ರಂದು ಮುಂಡರಗಿ ಹೋಬಳಿ ಮಟ್ಟದ ಪಂದ್ಯಗಳನ್ನು ಆಯೋಜಿಸಿದೆ. ಡಿ. 30ರಂದು ಮುಂಡರಗಿ ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಆವರಣದಲ್ಲಿ ತಾಲೂಕು ಮಟ್ಟದ ಫೈನಲ್ ಪಂದ್ಯಗಳನ್ನು ಆಯೋಜಿಸಿದೆ.
ಆಟಗಾರರಿಗೆ ಅರಣ್ಯ ಇಲಾಖೆ ವತಿಯಿಂದಲೇ ಟೀಶರ್ಟ್ ವಿತರಿಸಲಾಗುವುದು. ಪ್ರಥಮ ಬಹುಮಾನವಾಗಿ ₹15,000, ದ್ವಿತೀಯ ₹10,000 ಹಾಗೂ ತೃತೀಯ ಬಹುಮಾನವಾಗಿ ₹5,000 ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ.23ರಂದು ಪಿಂಚಣಿ ಅದಾಲತ್ಗದಗ: ವಿಭಾಗ ಮಟ್ಟದ ಪಿಂಚಣಿ ಅದಾಲತ್ ಡಿ. 23ರಂದು ಬೆಳಗ್ಗೆ 11ಕ್ಕೆ ನಗರದ ಅಂಚೆ ಇಲಾಖೆಯ ಗದಗ ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ.ಅಂಚೆ ಪಿಂಚಣಿದಾರರ ಕುಂದುಕೊರತೆಗಳನ್ನು ಮಾತ್ರ ಪರಿಗಣಿಸಲಾಗುವುದು. ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ಮೇಲ್ ವಿಳಾಸ dogadag.ka@indiapost.gov.in ಕ್ಕೆ ಡಿ. 22ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗದಗ ವಿಭಾಗೀಯ ಅಂಚೆ ಕಚೇರಿಯ ಅಧೀಕ್ಷಕರ ಕಾರ್ಯಾಲಯವನ್ನು ಸಂಪರ್ಕಿಸಬಹುದು.