ಕುದುರೆಗುಂಡಿಯಲ್ಲಿ ಸಂಭ್ರಮದ ಕಪಿಲಾ ಜಾತ್ರೆ

| Published : Jan 13 2024, 01:34 AM IST

ಕುದುರೆಗುಂಡಿಯಲ್ಲಿ ಸಂಭ್ರಮದ ಕಪಿಲಾ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಪಿಲಾ ಜಾತ್ರೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ಟಿ.ಡಿ.ರಾಜೇಗೌಡರಿಗೆ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು. ಕುದುರೆಗುಂಡಿ ಮುಖ್ಯ ರಸ್ತೆಯಿಂದ ಕಪಿಲೇಶ್ವರ ದೇವಸ್ಥಾನವರೆಗೆ 10 ಲಕ್ಷ ರು. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಯನ್ನು ಮಾಡಿಸಿಕೊಟ್ಟ ಶಾಸಕರಿಗೆ ಗೌರವಿಸಲಾಯಿತು.

- ಕಪಿಲೇಶ್ವರಗೆ ವಿಶೇಷ ಪೂಜೆ । ಶಾಸಕ ಟಿ.ಡಿ.ರಾಜೇಗೌಡರಿಗೆ ಸನ್ಮಾನಕನ್ನಡಪ್ರಭವಾರ್ತೆ, ನರಸಿಂಹರಾಜಪುರಎಳ್ಳಮಾಸ್ಯೆಯ ಪ್ರಯುಕ್ತ ಪುರಾಣ ಪ್ರಸಿದ್ಧ ಕುದುರೆಗುಂಡಿ ಕಪಿಲಾ ತಟದ ಕಪಿಲೇಶ್ವರ ದೇವಸ್ಥಾನದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಪಿಲಾ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಕಪಿಲೇಶ್ವರ ಸ್ವಾಮಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಕುಂಕಮಾರ್ಚನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಬೆಳಿಗ್ಗೆಯಿಂದ ಭಕ್ತರು ಕಪಿಲೇಶ್ವರ ದೇವಸ್ಥಾನಕ್ಕೆ ಆಗಮಿಸಿ ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಕಪಿಲೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಹಣ್ಣು ಕಾಯಿ ಮಾಡಿಸಿದರು. ವಿಶೇಷವಾಗಿ ಈ ವರ್ಷದಿಂದ ತೀರ್ಥಸ್ನಾನದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕುದುರೆ ಗುಂಡಿ ಯುವಕ ಸಂಘ, ಯುವತಿ ಮಂಡಳಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕರ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.ಶಾಸಕರಿಗೆ ಸನ್ಮಾನ: ಕಪಿಲಾ ಜಾತ್ರೆಗೆ ಶಾಸಕ ಟಿ.ಡಿ.ರಾಜೇಗೌಡ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಕುದುರೆಗುಂಡಿ ಮುಖ್ಯ ರಸ್ತೆಯಿಂದ ಕಪಿಲೇಶ್ವರ ದೇವಸ್ಥಾನವರೆಗೆ 10 ಲಕ್ಷ ರು. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಮಾಡಿಸಿಕೊಟ್ಟ ಶಾಸಕ ಟಿ.ಡಿ.ರಾಜೇಗೌಡರಿಗೆ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕಪಿಲೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಖಾಂಡ್ಯ ಶಿವರಾಜ್‌, ಜಾತ್ರಾ ಸಮಿತಿ ಅಧ್ಯಕ್ಷ ಡಾಕಪ್ಪ ಗೌಡರು, ಮುಖಂಡರಾದ ಎಚ್.ಎಲ್‌.ದೀಪಕ್‌, ಹೇಮಂತಕುಮಾರ್‌, ರತ್ನಾಕರ್‌, ಶಾಂತಕುಮಾರ್‌, ನಾಗೇಶ ನಾಯಕ್, ನುಗ್ಗಿ ಮಂಜುನಾಥ್, ಎನ್‌.ಪಿ.ರಮೇಶ್ ಮುಂತಾದವರಿದ್ದರು.