ಬನಹಟ್ಟಿಯಲ್ಲಿ ಕಾರ ಹುಣ್ಣಿಮೆಯ ಕರಿ ಹರಿಯುವ ಸಂಭ್ರಮ

| Published : Jun 23 2024, 02:01 AM IST

ಸಾರಾಂಶ

ಬನಹಟ್ಟಿ ನಗರದಲ್ಲಿ ಶುಕ್ರವಾರ ಹಾಗೂ ಶನಿವಾರ ಕಾರ ಹುಣ್ಣಿಮೆಯ ಅಂಗವಾಗಿ ಕರಿ ಹರಿಯುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಬನಹಟ್ಟಿ ನಗರದಲ್ಲಿ ಶನಿವಾರ ಸಂಜೆ ಕಾರ ಹುಣ್ಣಿಮೆಯ ಅಂಗವಾಗಿ ಕರಿ ಹರಿಯುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ರೈತರು ಕರಿ ಹರಿಯಲು ಓಡುವ ಎತ್ತುಗಳನ್ನು ವಿವಿಧ ಬಣ್ಣಗಳಿಂದ ಮತ್ತು ಬೇವಿನ ಎಲೆಗಳ ಮಾಲೆಗಳಿಂದ ಶೃಂಗರಿಸಿ ಮೆರವಣಿಗೆಯ ಮೂಲಕ ಎತ್ತುಗಳನ್ನು ಗಾಂಧಿ ವೃತ್ತದ ಬಳಿಗೆ ಕರೆತಂದರು.

ಊರಿನ ಗೌಡರಾದ ಸಿದ್ದನಗೌಡ ಪಾಟೀಲ ಎತ್ತುಗಳಿಗೆ ಪೂಜೆ ಸಲ್ಲಿಸಿ ಎತ್ತುಗಳ ಓಟಕ್ಕೆ ಚಾಲನೆ ನೀಡಲಾಯಿತು. ಒಟ್ಟು ನಾಲ್ಕು ಎತ್ತುಗಳು ಓಟದಲ್ಲಿ ಪಾಲ್ಗೊಂಡಿದ್ದವು. ಸಿದ್ದನಗೌಡ ಪಾಟೀಲ ಎತ್ತು ಪ್ರಥಮ, ರಾಜುಗೌಡ ಪಾಟೀಲ ಎತ್ತು ದ್ವಿತೀಯ, ಬಸಪ್ಪ ದೇಸಾರ ಎತ್ತು ತೃತೀಯ ಮತ್ತು ಗುರು ಗಾಣಿಗೇರ ಎತ್ತು ನಾಲ್ಕನೆಯ ಸ್ಥಾನ ಪಡೆದುಕೊಂಡವು.

ಊರಿನ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಶ್ರೀಶೈಲ ಧಬಾಡಿ, ಮಲ್ಲಿಕಾರ್ಜುನ ತುಂಗಳ, ಬಸವರಾಜ ಗುಂಡಿ, ಶ್ರೀಶೈಲ ಉಳ್ಳಾಗಡ್ಡಿ, ಸಿದ್ದಪ್ಪ ಅಕ್ಕಿಮಡ್ಡಿ, ಮಲ್ಲಣ್ಣ ಕಕಮರಿ, ಮುರಿಗೆಪ್ಪ ಆದರಗಿ, ಗುಂಡಿ, ಪಂಡಿತಪ್ಪ ಪಟ್ಟಣ, ಮಹಾಂತ ಶೆಟ್ಟಿ, ಭೀಮಶಿ ಪಾಟೀಲ, ಬಸವರಾಜ ಜಾಡಗೌಡ, ದಾನಪ್ಪ ಹುಲಜತ್ತಿ, ಶೇಖರ ಸಂಪಗಾಂವಿ, ರೈತರು ಮತ್ತು ಗೌಡರ, ಮಂಗಳವಾರ ಹಾಗೂ ಸೋಮವಾರ ಪೇಟೆ ಸಮಸ್ತ ದೈವ ಮಂಡಳಯ ಹಿರಿಯರು, ಸುತ್ತಮುತ್ತಲಿನ ಗ್ರಾಮದ ಹಿರಿಯರು ಇದ್ದರು.