ತಾಲೂಕಿನಾದ್ಯಂತ ಇರುವ ಎಲ್ಲಾ ಶಾಲಾ ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ನಿರೂಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪರಭಾಷೆ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು.
ಕನ್ನಡವಾರ್ತೆ ಚಿಂತಾಮಣಿ
ಸರ್ಕಾರಿ ಶಾಲೆಯ ಶಿಕ್ಷಕರು ಶಾಲಾ ಸಮಯದಲ್ಲೂ ತೆಲುಗು ಭಾಷೆಯಲ್ಲಿ ಸಂಭಾಷಣೆ ಮಾಡುವುದು ಹಾಗೂ ಮಕ್ಕಳೊಂದಿಗೆ ತೆಲುಗಿನಲ್ಲೇ ಸಂಬೋಧಿಸುವುದು. ಇದರಿಂದ ಮಕ್ಕಳಲ್ಲಿ ಕನ್ನಡ ಭಾಷೆಯ ಅವನತಿಗೆ ಕಾರಣವಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದ ಬಿಇಒಗಳು ಯಾವುದೇ ರೀತಿಯ ಸೂಚನೆಗಳನ್ನು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೆ ನೀಡದಿರುವುದು ಮತ್ತು ಕಡ್ಡಾಯವಾಗಿ ಶಿಕ್ಷಕರು ಕನ್ನಡ ಭಾಷೆಯನ್ನು ವ್ಯವಹಾರಿಸಲು ಆದೇಶಿಸಬೇಕೆಂದು ಕರವೇ ಪ್ರಕಾಶ್, ಅಗ್ರಹಾರ ಮೋಹನ್ ಒತ್ತಾಯಿಸಿದರು.ತಾಲೂಕು ಕಚೇರಿ ಮುಂಭಾಗದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ಗಾವಣೆ ಆಗ್ರಹಿಸಿ ಮಾತನಾಡಿ, ತಾಲೂಕಿನಾದ್ಯಂತ ಇರುವ ಎಲ್ಲಾ ಶಾಲಾ ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ನಿರೂಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪರಭಾಷೆ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಲ್ಲದೆ. ಅಶ್ಲೀಲ ನೃತ್ಯಗಳನ್ನು ಅಳವಡಿಸಿ ಕನ್ನಡ ನಾಡು-ನುಡಿ, ಸಾಂಸ್ಕೃತಿಕ ಅವಮಾನ ಮಾಡುತ್ತಿದ್ದರೂ ಅಂತಹ ಕಾರ್ಯಕ್ರಮಗಳಲ್ಲಿ ಸ್ವತಃ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸುತ್ತಿರುವುದು ಖಂಡನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಬೇಕಾದರೆ ಸಾಕಷ್ಟು ದಿನಗಳೇ ಕಾಯಬೇಕಾಗುವಂತಹ ಪರಿಸ್ಥಿತಿ ತಲೆದೂರಿದ್ದು, ಕಚೇರಿ ಮತ್ತು ದೂರವಾಣಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಯಾವುದೇ ಸಮಯದಲ್ಲೂ ಹೋದರು ಸಂಘ ಸಂಸ್ಥೆಗಳಿಗಾಗಲೀ, ಸಾರ್ವಜನಿಕರಿಗಾಗಲೀ ಸಿಗುವುದಿಲ್ಲ. ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಭೇಟಿ ಮಾಡಿ ಮಾಹಿತಿಗಳನ್ನು ಪರಿಶೀಲಿಸುವುದಾಗಲಿ ಸೂಚನೆಗಳು ನೀಡುವುದಾಗಲಿ ಮತ್ತು ವಿಚಾರಿಸುವುದಾಗಲಿ ಯಾವುದು ಮಾಡುವುದಿಲ್ಲ. ಆದ್ದರಿಂದ ಕೂಡಲೇ ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಯ್ಕೆ ಮಾಡುವಂತೆ ಒತ್ತಾಯಿಸಿ ಪ್ರಭಾರಿ ತಹಸೀಲ್ದಾರ್ ಶೋಭಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಶ್ರೀರಾಮನಗರ ಶಂಕರ್, ಆಸೀಫ್, ಪ್ರಕಾಶ್, ಧನಂಜಯ್, ನಾರಾಯಣಸ್ವಾಮಿ, ರಘು, ಜಗದೀಶ್, ಗುರುಪ್ರಸಾದ್, ಯೂನಸ್‌ಖಾನ್, ಟೈಲರ್ ಮಂಜು, ಸುರೇಶ್, ಉದಯ್ ಸಿಂಗ್, ಫಕ್ರುಲ್ಲಾ ಹಾಗೂ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.