ತುಮಕೂರು ಜಿಲ್ಲೆಯ ಗೂಳೂರು ಸಮೀಪದ ಬೇವಿನಮರದಮ್ಮ ದೇವಸ್ಥಾನದ ಬಳಿ ಬಿ.ಎಲ್.ಒ ಅವರ ಸಾವಿನ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು. ಎಸ್‌ಐಆರ್ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿರುವ ಬಿ.ಎಲ್.ಒ.ಗಳ ಮೇಲೆ ಅನಗತ್ಯ ಆಡಳಿತಾತ್ಮಕ ಒತ್ತಡ ಹೇರಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತುಮಕೂರು ಜಿಲ್ಲೆಯ ಗೂಳೂರು ಸಮೀಪದ ಬೇವಿನಮರದಮ್ಮ ದೇವಸ್ಥಾನದ ಬಳಿ ಬಿ.ಎಲ್.ಒ ಅವರ ಸಾವಿನ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು. ಎಸ್‌ಐಆರ್ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿರುವ ಬಿ.ಎಲ್.ಒ.ಗಳ ಮೇಲೆ ಅನಗತ್ಯ ಆಡಳಿತಾತ್ಮಕ ಒತ್ತಡ ಹೇರಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಆಗ್ರಹಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾ.ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡಬೇಕಾಗಿರುವುದು ಎಲ್ಲರ ಕರ್ತವ್ದವಾಗಿದೆ. ಆದರೆ ಇತ್ತೀಚಿನ ಘಟನೆಗಳನ್ನು ನೋಡಿದಾಗ ಹಿರಿಯ ಅಧಿಕಾರಿಗಳು ಕಿರಿಯರನ್ನು ಗೌರವದಿಂದ ಕಾಣದೇ ಇರುವುದು ಹಾಗೂ ವಿನಾಕಾರಣ ಅವರನ್ನು ಬಲಿಪಶು ಮಾಡುತ್ತಿರುವುದು ಸಾಕಷ್ಟು ಚರ್ಚೆಯಾಗಿದೆ. ಬಿ.ಎಲ್.ಒ.ಗಳೂ ಕುಟುಂಬದ ಜವಾಬ್ದಾರಿ ಹೊಂದಿರುವ ಸರ್ಕಾರಿ ನೌಕರರು. ಅವರಿಗೆ ಕರ್ತವ್ಯ ನಿರ್ವಹಿಸಲು ಸೂಕ್ತ ಸಮಯ ಹಾಗೂ ಒತ್ತಡರಹಿತ ವಾತಾವರಣ ಕಲ್ಪಿಸಬೇಕು. ತುಮಕೂರಿನಲ್ಲಿ ನಡೆದ ದುರಂತ ಘಟನೆ ಮರುಕಳಿಸದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಗೌರವಾಧ್ಯಕ್ಷರು ಹರೀಶ್ ಬಾಬು, ಪ್ರಧಾನ ಕಾರ್ಯದರ್ಶಿ ಕೃ?ಮೂರ್ತಿ, ಉಪಾಧ್ಯಕ್ಷರು ರವಿಕುಮಾರ್, ನಟರಾಜು, ಶ್ರೀನಿವಾಸ್, ಕಾರ್ಯದರ್ಶಿ, ಹನುಮೇಶ್, ನಗರ ಉಪಾಧ್ಯಕ್ಷ ಮೂರ್ತಿ, ಸಂಘಟನಾ ಕಾರ್ಯದರ್ಶಿ ಪುಟ್ಟರಾಜು, ರಮೇಶ್, ಸಂಚಾಲಕರು ಲೋಕೇಶ್, ಸದಸ್ಯರಾದ ಪ್ರಸನ್ನ ಕುಮಾರ್, ತೇಜಸ್ ಸೇರಿದಂತೆ ಇತರರು ಇದ್ದರು.