ಕಾರ್ಗಿಲ್‌ ವಿಜಯೋತ್ಸವ ಆಚರಣೆ

| Published : Jul 29 2025, 02:06 AM IST / Updated: Jul 29 2025, 02:07 AM IST

ಸಾರಾಂಶ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಕಾರ್ಗಿಲ್‌ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಕಾರ್ಗಿಲ್ ವಿಜಯೋತ್ಸವ ಆಚರಿಸಿದರು.ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಜಿಲ್ಲಾ ಉಪಾಧ್ಯಕ್ಷರಾದ ಸುಧೀರ್, ಸಂಚಾಲಕ ವಾಸು, ರಂಜಿತ್, ಅಶೋಕ್ ಅವರ ನೇತೃತ್ವದಲ್ಲಿ ಸೇರಿ ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಪುಲಿಯಂಡ ಚಂಗಪ್ಪ, ಎಲ್ತಂಡ ರಂಜಿತ್, ಕಾವೇರಪ್ಪ, ಇನ್ನರ್ ವೀಲ್ ಅಧ್ಯಕ್ಷರಾದ ರೇಷ್ಮಾ, ಚೈತ್ರ ಮತ್ತಿತರರು ಇದ್ದರು.