ಆ.3 ರಂದು ಕಾರ್ಗಿಲ್ ವಿಜಯೋತ್ಸವ : ಮುಕುಂದ ನಾಯಕ

| Published : Jul 31 2024, 01:01 AM IST / Updated: Jul 31 2024, 01:02 AM IST

ಆ.3 ರಂದು ಕಾರ್ಗಿಲ್ ವಿಜಯೋತ್ಸವ : ಮುಕುಂದ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

25ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ವೀರ ಯೋಧರಿಗೆ ಸನ್ಮಾನ ಸಮಾರಂಭ ಆ.3ರಂದು ನಗರದ ಗರುಡಾದ್ರಿ ಕಲಾಮಂದಿರದಲ್ಲಿ ದಿ. ನರೇಶ ಕುಮಾರ ಸೇವಾ ಸಂಸ್ಥೆ (ರಿ) ಸುರಪುರ ವತಿಯಿಂದ ನಡೆಯಲಿದೆ ಎಂದು ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

25ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ವೀರ ಯೋಧರಿಗೆ ಸನ್ಮಾನ ಸಮಾರಂಭ ಆ.3ರಂದು ನಗರದ ಗರುಡಾದ್ರಿ ಕಲಾಮಂದಿರದಲ್ಲಿ ದಿ. ನರೇಶ ಕುಮಾರ ಸೇವಾ ಸಂಸ್ಥೆ (ರಿ) ಸುರಪುರ ವತಿಯಿಂದ ನಡೆಯಲಿದೆ ಎಂದು ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ರಕ್ಷಣೆಗಾಗಿ ತಮ್ಮ ಪ್ರಾಣತೆತ್ತ ಸೈನಿಕರ ಸ್ಮರಿಸುವುದು ಮತ್ತು ಗೌರವಿಸುವುದು ಭಾರತೀಯರ ಕರ್ತವ್ಯ ಎಂದರು.

ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಸಂಯೋಜಕ ಸಚಿನ್‌ಕುಮಾರ ನಾಯಕ ಮಾತನಾಡಿ, ಆ.3ರಂದು ಬೆಳಗ್ಗೆ 9 ಗಂಟೆಗೆ ಹುತಾತ್ಮ ವೀರಯೋಧ ಶರಣಬಸವ ಕೆಂಗೂರಿ ವೃತ್ತದಿಂದ ಸುರಪುರ ಮುಖ್ಯ ರಸ್ತೆ, ಮಾರುಕಟ್ಟೆಯ ಮಾರ್ಗವಾಗಿ ದರಬಾರ ರಸ್ತೆ, ಗಾಂಧಿ ವೃತ್ತದ ಮೂಲಕ ಗರುಡಾದ್ರಿ ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ಪಿ. ವೇಣುಗೋಪಾಲ ಸಾನ್ನಿಧ್ಯ ವಹಿಸುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರ ನರಸಿಂಹ ನಾಯಕ (ರಾಜುಗೌಡ), ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಪಾಲ್ಗೊಳ್ಳುವರು.

ಚಿಂತಕ, ವಾಗ್ಮಿ ಕಿರಣ್‌ರಾಮ್ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸುವರು. ದಿ.ಶ್ರೀ ನರೇಶ ಕುಮಾರ ಸೇವಾ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯಕ ಅಧ್ಯಕ್ಷತೆ ವಹಿಸುವರು. ಮಾಜಿ ಸೈನಿಕ ಸಂಸ್ಥೆಯ ಅಧ್ಯಕ್ಷ ಭೀಮನಾಯಕ ಲಕ್ಷ್ಮಿಪುರ ಮಾತನಾಡಿದರು. ಮಂಜುನಾಥ ಪ್ಯಾಪಿ, ವಿನೋದ, ಚಂದ್ರು ಪ್ರಧಾನಿ, ಆದರ್ಶ ಪೂಜಾರಿ, ನರಸಪ್ಪ, ಕರೆಪ್ಪ, ಕಾಶಿನಾಥ, ಬಸಣ್ಣಗೌಡ, ಅಂಬ್ರೇಶ, ಬಸಯ್ಯ ಹಿರೇಮಠ, ಹಣಮಂತ್ರಾಯ, ಪರಮೇಶ ಇದ್ದರು.