ಇಂದು ಕರಿಮನೆ ಬ್ಯಾಂಕ್ ವಾರ್ಷಿಕ ಸಭೆ: ಗೋಪಾಲಕೃಷ್ಣ

| Published : Sep 20 2024, 01:33 AM IST

ಇಂದು ಕರಿಮನೆ ಬ್ಯಾಂಕ್ ವಾರ್ಷಿಕ ಸಭೆ: ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಸೆ.೨೦ರ ಬೆಳಗ್ಗೆ ೧೧ಕ್ಕೆ ಶ್ರೀ ರಾಮ ಸೇವಾ ಸಹಕಾರಿ ಕರಿಮನೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ೨೦೨೩-೨೪ನೇ ಸಾಲಿನ ೯೪ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಕರೆದಿರುವುದಾಗಿ ಬ್ಯಾಂಕ್‌ ಅಧ್ಯಕ್ಷ ಎನ್.ಟಿ.ಗೋಪಾಲಕೃಷ್ಣ ತಿಳಿಸಿದರು.

ಪ್ರಸಕ್ತ ವರ್ಷ ₹೧೭೭.೮೭ ಲಕ್ಷ ನಿವ್ವಳ ಲಾಭ

ಕನ್ನಡಪ್ರಭ ವಾರ್ತೆ ಕೊಪ್ಪ

ಸೆ.೨೦ರ ಬೆಳಗ್ಗೆ ೧೧ಕ್ಕೆ ಶ್ರೀ ರಾಮ ಸೇವಾ ಸಹಕಾರಿ ಕರಿಮನೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ೨೦೨೩-೨೪ನೇ ಸಾಲಿನ ೯೪ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಕರೆದಿರುವುದಾಗಿ ಬ್ಯಾಂಕ್‌ ಅಧ್ಯಕ್ಷ ಎನ್.ಟಿ.ಗೋಪಾಲಕೃಷ್ಣ ತಿಳಿಸಿದರು.

ಬುಧವಾರ ಲೋಕನಾಥಪುರದ ಬ್ಯಾಂಕ್‌ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು ಬ್ಯಾಂಕ್ ಪ್ರಸಕ್ತ ವರ್ಷ ₹೧೭೭.೮೭ ಲಕ್ಷ ನಿವ್ವಳ ಲಾಭಗಳಿಸಿರುವುದು ಅತ್ಯಂತ ಸಂತಸದ ವಿಚಾರ ಎಂದರು. ಪ್ರಸಕ್ತ ವರ್ಷ ಬ್ಯಾಂಕಿನ ಸದಸ್ಯರಿಗೆ ನಬಾರ್ಡ್ ವಿಭಾಗ ಹಾಗೂ ಸ್ವಂತ ಬಂಡವಾಳ ವಿಭಾಗದಿಂದ ಒಟ್ಟು ₹೫೫೫.೨೫ ಲಕ್ಷ ಸಾಲ ವಿತರಿಸಿದ್ದು, ₹೩೯೧.೭೦ ಲಕ್ಷ ನಿಶ್ಚಿತ ಠೇವಣಿ ಸಂಗ್ರಹಿಸಿ, ₹೩ ಕೋಟಿ ಮೊತ್ತದ ರಸಗೊಬ್ಬರ ಖರೀದಿಮಾಡಿ ವ್ಯಾಪಾರ ಮಾಡಿದೆ. ಬ್ಯಾಂಕಿನ ಅಭಿವೃದ್ಧಿಗೆ ಮುಖ್ಯ ಕಾರಣ ಈ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ಹಾಗೂ ನಮ್ಮ ಆಡಳಿತ ಮಂಡಳಿ ಒಗ್ಗಟ್ಟು, ಸಹಕಾರ, ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಪರಿಶ್ರಮ ಎಂದರು.

ನಮ್ಮ ಬ್ಯಾಂಕ್‌ ನಬಾರ್ಡ್ ಸಹಕಾರದೊಂದಿಗೆ ಸದಸ್ಯರಿಗೆ ದೀರ್ಘಾವಧಿ ಕೃಷಿ ಮತ್ತು ಕೃಷಿಯೇತರ ಸಾಲ ನೀಡುವುದಲ್ಲದೇ, ಸ್ವಂತ ಬಂಡವಾಳ ಕ್ರೋಢಿಕರಿಸಿ ಅಡಕೆ ಚೇಣಿ ಸಾಲ, ರಸಗೊಬ್ಬರ ಖರೀದಿ ಸಾಲ ಹಾಗೂ ಇತರೇ ಉದ್ದೇಶಗಳಿಗೆ ಸಾಲ ನೀಡುತ್ತಿದ್ದು, ರಸಗೊಬ್ಬರ ವ್ಯಾಪಾರದ ಜೊತೆಯಲ್ಲಿ ಪ್ರಸ್ತುತ ರಾಸಾಯನಿಕ ಔಷಧಿಗಳ ಮಾರಾಟ ಪ್ರಾರಂಭಿಸಲಾಗಿದೆ. ಸಾರ್ವಜನಿಕರಿಗೆ ಬ್ಯಾಂಕಿನ ಅಮೃತ ಮಹೋತ್ಸವ ಸಭಾಂಗಣವನ್ನು ಬಾಡಿಗೆಗೆ ನೀಡಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಎ.ಸಿ. ಅಶ್ವತ್‌ಕುಮಾರ್, ವಿಷಯ ಪರಿಣಿತ ನಿರ್ದೇಶಕ ಎಚ್.ಎಂ.ನಟರಾಜ್, ನಿರ್ದೇಶಕರಾದ ಸಿ.ಎಸ್.ಲಕ್ಷ್ಮೀನಾರಾಯಣ, ಎ.ಸಿ.ಶ್ರೀನಿವಾಸ್, ಎಸ್.ಕಿರಣ್ ಹೆಬ್ಬಾರ್, ಡಿ.ಸಿ.ವಿನಯ, ಎಂ.ಎಸ್.ಪ್ರವೀಣ್ ಕುಮಾರ್, ನಾಗರತ್ನ, ಎಚ್.ಎಸ್.ಸುಧಾಮಣಿ, ಎಂ.ಎಸ್.ವೆಂಕಟೇಶ್, ಎಚ್.ಎಸ್.ಅನಿಲ್, ಬಿ.ಆರ್.ಉಮೇಶ್ ಹಾಗೂ ವ್ಯವಸ್ಥಾಪಕ ವಿಕ್ಟೋರಿಯ ಕಾರ್ವಾಲ್‌ ಹಾಜರಿದ್ದರು.