ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಪ್ಪ
ಕರಿಮನೆ ಭೂ ಬ್ಯಾಂಕ್ ಪ್ರಸಕ್ತ ವರ್ಷ ಮಾರ್ಚ್ ಅಂತ್ಯಕ್ಕೆ ಶೇ. ೬೦.೫ರಷ್ಟು ಸಾಲ ವಸೂಲಾತಿ ಸಾಧಿಸಿ, ರಾಜ್ಯ ಬ್ಯಾಂಕಿಗೆ ಶೇ.೧೦೦ರಷ್ಟು ಸಾಲ ಮರುಪಾವತಿಸಿದೆ. ಒಟ್ಟಾರೆ ಬ್ಯಾಂಕ್ ೧೧೭.೧೦ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಶ್ರೀರಾಮ ಸೇವಾ ಕರಿಮನೆ ಭೂ ಬ್ಯಾಂಕ್ ಅಧ್ಯಕ್ಷ ಎನ್.ಟಿ.ಗೋಪಾಲಕೃಷ್ಣ ಹೇಳಿದರು.ಶುಕ್ರವಾರ ನಡೆದ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು ದೀರ್ಘಾವಧಿ ಸಾಲ ಹಾಗೂ ₹ ೪೩೮.೧೫ ಲಕ್ಷ ಸ್ವಂತ ಬಂಡವಾಳ ಸಾಲ ನೀಡಲಾಗಿದೆ. ೨೦೨೧-೨೨ನೇ ಸಾಲಿನಿಂದ ಬ್ಯಾಂಕ್ ಅಡಕೆ ಚೇಣಿ ಮಾಡುವ ಬ್ಯಾಂಕಿನ ಸದಸ್ಯರಿಗೆ ಸಾಲ ನೀಡುತ್ತಿದ್ದು ೨೦೨೩-೨೪ನೇ ಸಾಲಿನಲ್ಲಿ ೨೦೫.೫೦ ಲಕ್ಷ ಸಾಲ ನೀಡಿದೆ. ನಿರಂತರವಾಗಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತಿರುವ ಶಾಸಕ ಟಿ.ಡಿ. ರಾಜೇಗೌಡರು, ರಾಜ್ಯ ಬ್ಯಾಂಕಿನ ಅಧ್ಯಕ್ಷ ಕೆ.ಷಡಕ್ಷರಿ ಹಾಗೂ ಜಿಲ್ಲಾ ನಿರ್ದೇಶಕ ಈ.ಆರ್. ಮಹೇಶ್, ರಾಜ್ಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಜಿಲ್ಲಾ ವ್ಯವಸ್ಥಾಪಕ ಎಚ್.ಎನ್. ಪುಟ್ಟರಾಜು ಬ್ಯಾಂಕಿನ ಆಡಳಿತ ಮಂಡಳಿ ವಿಷಯ ಪರಿಣಿತ ನಿರ್ದೇಶಕ ಎಚ್.ಎಂ. ನಟರಾಜ್, ಉಪಾಧ್ಯಕ್ಷ ಎ.ಸಿ. ಅಶೋಕ್ ಕುಮಾರ್, ಬ್ಯಾಂಕಿನ ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರು ಮತ್ತು ವ್ಯವಸ್ಥಾಪಕಿ ವಿಕ್ಟೋರಿಯಾ ಕಾರ್ವಾಲ್‌ರವರಿಗೂ, ಬ್ಯಾಂಕಿನ ಏಳಿಗೆಗೆ ಶ್ರಮಿಸಿದ ಎಲ್ಲಾ ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸಿದರು. ನಿರ್ದೇಶಕ ಲಕ್ಷ್ಮಿನಾರಾಯಣ ಮಾತನಾಡಿ ಸಂಕಷ್ಟದ ದಿನಗಳಲ್ಲಿ ಬ್ಯಾಂಕಿನ ಮೇಲೆ ನಂಬಿಕೆ ಇಟ್ಟು ನಿಶ್ಚಿತ ಠೇವಣಿ, ಪಿಗ್ಮಿ ಠೇವಣಿ, ಉಳಿತಾಯ ಠೇವಣಿ ಇರಿಸಿದ ಎಲ್ಲಾ ಗ್ರಾಹಕರು, ಸದಸ್ಯರಿಗೂ ಕೃತಜ್ಞತೆ ತಿಳಿಸಿದರು. ಬ್ಯಾಂಕಿನ ಆಡಳಿತ ಮಂಡಳಿ ವಿಷಯ ಪರಿಣಿತ ನಿರ್ದೇಶಕ ಎಚ್.ಎಂ. ನಟರಾಜ್ , ವ್ಯವಸ್ಥಾಪಕಿ ವಿಕ್ಟೋರಿಯಾ ಕಾರ್ವಾಲ್ಆ ಯವ್ಯಯ ಮಂಡಿಸಿದರು. ಹಿರಿಯ ಸಹಕಾರಿ ಡಾ. ಬಿ.ಎಸ್. ವಿಶ್ವನಾಥನ್ ಭಾವಚಿತ್ರ ಅನಾವರಣಗೊಳಿಸಲಾಯಿತು.
ಉಪಾಧ್ಯಕ್ಷ ಎ.ಸಿ. ಅಶ್ವಥ್ ಕುಮಾರ್, ನಿರ್ದೇಶಕರಾದ ಕಿರಣ್ ಹೆಬ್ಬಾರ್, ಎಂ.ಎಸ್. ಪ್ರವೀಣ್ ಕುಮಾರ್, ನಾಗರತ್ನ, ಎಂ.ಎಸ್. ವೆಂಕಟೇಶ್, ಎಚ್.ಎಸ್. ಸುಧಾಮಣಿ, ಎಚ್.ಎಸ್. ಅನಿಲ್, ಬಿ.ಆರ್.ಉಮೇಶ್ ಮುಂತಾದವರಿದ್ದರು.