ಇಲ್ಲಿನ ಸಾಣೂರಿನಲ್ಲಿ ಪ್ರಥಮ ಬಾರಿಗೆ ಅದ್ದೂರಿಯ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಶನಿವಾರ ಮತ್ತು ಭಾನುವಾರ ನಡೆಯಿತು. ಕಂಬಳದಲ್ಲಿ 200ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದವು.

ಕಾರ್ಕಳ: ಇಲ್ಲಿನ ಸಾಣೂರಿನಲ್ಲಿ ಪ್ರಥಮ ಬಾರಿಗೆ ಅದ್ದೂರಿಯ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಶನಿವಾರ ಮತ್ತು ಭಾನುವಾರ ನಡೆಯಿತು. ಕಂಬಳದಲ್ಲಿ 200ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಿದ್ದವು.

ಸೂಟರ್‌ಪೇಟೆಯ ಶ್ರೀ ಭುವನೇಶ್ವರಿ ದೇವಸ್ಥಾನದ ಪ್ರವೀಣ್ ಮಚ್ಚೇಂದ್ರನಾಥ ಕಂಬಳಕ್ಕೆ ಚಾಲನೆ ನೀಡಿದರು. ಕಾಂತಾವರದ ಬಾರಾಡಿ ಬೀಡು ಡಾ. ಜೀವಂಧರ ಬಲ್ಲಾಳ್ ದೀಪ ಪ್ರಜ್ವಲಿಸಿದರು. ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ ಇದ್ದರು.

ಅತ್ತೂರು ಬಸಿಲಿಕಾದ ರೆ. ಫಾ. ಆಲ್ಬನ್ ಡಿಸೋಜಾ, ಸಾಣೂರು ದರ್ಗಾದ ಖತೀಬರಾದ ಕೆ.ಎ. ಝದ್ ಬಾಹಸನಿ, ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇಮೂ ಶ್ರೀರಾಮ್ ಭಟ್, ಆನೆಕೆರೆಯ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ ಎಸ್. ಕೋಟ್ಯಾನ್ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು ಇದ್ದರು.

ಕಂಬಳ ಸಮಿತಿ ಸಂಚಾಲಕ ಉದಯ್ ಎಸ್. ಕೋಟ್ಯಾನ್, ಅಧ್ಯಕ್ಷ ಜಗದೀಶ ಪೂಜಾರಿ, ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಬಂಡಿಮಠ, ಪ್ರಧಾನ ಕಾರ್ಯದರ್ಶಿ ಸಂಪತ್ ಪೂಜಾರಿ ಇದ್ದರು.ಮಂಗಳಾಡಿ ರಕ್ಷಿತ್ ಶೆಟ್ಟಿಗೆ 3 ಪದಕ

ಹಗ್ಗ ಹಿರಿಯ: ಪ್ರಥಮ - ಕೊಳಕೆ ಇವರ್ತೂರು ಭಾಸ್ಕರ ಸುಬ್ರಯ್ಯ ಕೋಟ್ಯಾನರ ಕೋಣಗಳು (ಓಟಗಾರ ಕಕ್ಕಪದವು ಪೆರಂಗಲ್ ಕೃತಿಕ್ ಗೌಡ), ದ್ವಿತೀಯ - ಕೊಳಚೂರು ಕೊಂಡೋಟ್ಟು ಸುಕುಮಾರ್ ಶೆಟ್ಟರ ಕೋಣಗಳು (ಓಟಗಾರ ಮಂಗಳಾಡಿ ರಕ್ಷಿತ್ ಶೆಟ್ಟಿ) ಹಗ್ಗ ಕಿರಿಯ: ಪ್ರಥಮ - ಪೆರಾಡಿ ಪಂಬಡೋಟ್ಟು ದಯಾನಂದ ಪೂಜಾರಿಯವರ ಕೋಣಗಳು (ಓಟಗಾರ ಮಂಗಳಾಡಿ ರಕ್ಷಿತ್ ಶೆಟ್ಟಿ), ದ್ವಿತೀಯ - ಕಾನಡ್ಕ ಫ್ಲೇವಿ ಡಿ’ ಸೋಜಾರ ಕೋಣಗಳು (ಓಟಗಾರ ಕಾವೂರು ಸುದರ್ಶನ್).ನೇಗಿಲು ಕಿರಿಯ: ಪ್ರಥಮ - ಉಳೇಪಾಡಿ ಪುಲ್ಲೋಡಿಬೀಡು ಉದಯ್ ಶೆಟ್ಟಿರ ಬಿ ಕೋಣಗಳು (ಓಟಗಾರ ಬಾರಾಡಿ ನತೇಶ್ ಸಪಲಿಗ), ದ್ವಿತೀಯ - ಉಳೇಪಾಡಿ ಪುಲ್ಲೋಡಿ ಬೀಡು ಉದಯ್ ಶೆಟ್ಟರ ಎ ಕೋಣಗಳು (ಓಟಗಾರ ಸೂರಾಲು ಪ್ರದೀಪ್ ನಾಯ್ಕ್).

ನೇಗಿಲು ಹಿರಿಯ: ಪ್ರಥಮ - ಬೋಳದ ಗುತ್ತು ಸತೀಶ್ ಶೆಟ್ಟರ ಕೋಣಗಳು (ಓಟಗಾರ ಮಂಗಳಾಡಿ ರಕ್ಷಿತ್ ಶೆಟ್ಟಿ), ದ್ವಿತೀಯ - ಮಿಯಾರು ಬೋಳೇಟ್ತಿ ಅನುಗ್ರಹ ಪ್ರಥಮ್ ಪ್ರಭಾಕರ ಶೆಟ್ಟರ ಕೋಣಗಳು (ಓಟಗಾರ ಪೃಥ್ವಿರಾಜ್ ಪೂಜಾರಿ).

ಅಡ್ಡ ಹಲಗೆ: ಪ್ರಥಮ - ನಾರಾವಿ ಯುವರಾಜ್ ಜೈನರ ಕೋಣಗಳು (ಓಟಗಾರ ಭಟ್ಕಳ ಪಾಂಡು), ದ್ವಿತೀಯ - ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟರ ಕೋಣಗಳು (ಓಟಗಾರ ತೆಕ್ಕಟ್ಟೆ ಸುಧೀರ್ ದೇವಾಡಿಗ)