ಕಾರ್ಕಳ: ವಿಜೇತ ವಿಶೇಷ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ

| Published : Feb 27 2024, 01:31 AM IST

ಕಾರ್ಕಳ: ವಿಜೇತ ವಿಶೇಷ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ವಿಜೇತ ವಿಶೇಷ ಶಾಲಾ ಮಕ್ಕಳು, ಅವರ ಹೆತ್ತವರು ಹಾಗೂ ಸಿಬ್ಬಂದಿ, ಸಾರ್ವಜನಿಕರು ಸುಮಾರು ೨೧೨ಕ್ಕಿಂತಲೂ ಹೆಚ್ಚು ಮಂದಿ ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಮುಖ್ಯವಾಗಿ ಶಾಲೆಯ ವಿಶೇಷ ಮಕ್ಕಳಿಗೆ ಈ ಸಂದರ್ಭದಲ್ಲಿ ಅಗತ್ಯ ಔಷಧ - ಚಿಕಿತ್ಸೆಗಳನ್ನು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳಇಲ್ಲಿನ ಅಯ್ಯಪ್ಪನಗರದ ವಿಶೇಷ ಮಕ್ಕಳ ಆಶ್ರಯ ವಿಜೇತ ಶಾಲೆಯಲ್ಲಿ ಇಲ್ಲಿ ಮಂಗಳೂರಿನ ಆಲ್‌ ಕಾರ್ಗೋ ಟರ್ಮಿನಲ್ಸ್ ಲಿಮಿಟೆಡ್ ಮತ್ತು ಯೇನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಅಂಕೋಲೊಜಿ ಜಂಟಿ ಸಹಯೋಗದೊಂದಿಗೆ ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ದಂತ ಚಿತಿತ್ಸೆ, ಕಣ್ಣಿನ ಪರೀಕ್ಷೆ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಯಿತು.ವಿಜೇತ ವಿಶೇಷ ಶಾಲಾ ಮಕ್ಕಳು, ಅವರ ಹೆತ್ತವರು ಹಾಗೂ ಸಿಬ್ಬಂದಿ, ಸಾರ್ವಜನಿಕರು ಸುಮಾರು ೨೧೨ಕ್ಕಿಂತಲೂ ಹೆಚ್ಚು ಮಂದಿ ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಮುಖ್ಯವಾಗಿ ಶಾಲೆಯ ವಿಶೇಷ ಮಕ್ಕಳಿಗೆ ಈ ಸಂದರ್ಭದಲ್ಲಿ ಅಗತ್ಯ ಔಷಧ - ಚಿಕಿತ್ಸೆಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಆಲ್‌ಕಾರ್ಗೋ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ಸಿಎಸ್‌ಆರ್ ವಿಭಾಗದ ಹಿರಿಯ ನಿರ್ವಾಹಕ ಸವಿಸ್ತಾರ್ ಆಳ್ವ, ಯೇನೆಪೋಯ ವಿವಿಯ ನಿರ್ದೇಶಕಿ ಡಾ.ಅಶ್ವಿನಿ ಶೆಟ್ಟಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಡಾ.ಅಬ್ರಹಾರ್, ಔಷಧೀಯ ವಿಭಾಗದ ಡಾ.ಮ್ಯಾನ್‌ವಲ್, ದಂತ ತಜ್ಞ ಡಾ.ಲಿಡಿಯಾ, ದೈಹಿಕಶಾಸ್ತ್ರ ತಜ್ಞ ಡಾ.ವೆನ್ಸಿಟಾ ಪ್ರಿಯಾಂಕ ಆರಾನ್ಹಾ, ಶಿಹಿರ ಸಂಯೋಜಕ ರಜಾಕ್, ಕಾರ್ಕಳ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರು ಹಾಗೂ ವಿಜೇತ ವಿಶೇಷ ಶಾಲಾ ಅಧ್ಯಕ್ಷರಾದ ರತ್ನಾಕರ ಅಮೀನ್, ಶ್ರೀ ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ, ವಿಜೇತ ವಿಶೇಷ ಶಾಲಾ ಆಡಳಿತ ವಿಶ್ವಸ್ಥ ಹರೀಶ್ ಉಪಸ್ಥಿತರಿದ್ದರು.

ವಿಶೇಷ ಶಾಲಾ ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ವಿಜೇತ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು.