ಸಾರಾಂಶ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕರೆಯಂತೆ ಮುಂಗಳವಾರ ನಡೆದ ಮುಷ್ಕರದ ಪರಿಣಾಮ, ಕಾರ್ಕಳ ಹಾಗು ಹೆಬ್ರಿ ತಾಲೂಕಿನಲ್ಲಿ ಯಾವುದೇ ಪರಿಣಾಮ ಕಂಡುಬಂದಿಲ್ಲ.
ಕನ್ನಡಪ್ರಭ ವಾರ್ತೆ ಕಾರ್ಕಳ
ರಾಜ್ಯದಾದ್ಯಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕರೆಯಂತೆ ಮುಂಗಳವಾರ ನಡೆದ ಮುಷ್ಕರದ ಪರಿಣಾಮ, ಕಾರ್ಕಳ ಹಾಗು ಹೆಬ್ರಿ ತಾಲೂಕಿನಲ್ಲಿ ಯಾವುದೇ ಪರಿಣಾಮ ಕಂಡುಬಂದಿಲ್ಲ. ಸಾರ್ವಜನಿಕರು ನಿತ್ಯದಂತೆ ತಮ್ಮ ಪ್ರಯಾಣವನ್ನು ನಿರ್ಬಂಧವಿಲ್ಲದೇ ಮುಂದುವರೆಸಿದ್ದಾರೆ.ಕಾರ್ಕಳ – ಉಡುಪಿ ಮಾರ್ಗದ ಗ್ರಾಮಾಂತರ ಬಸ್‌ಗಳು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸಂಚರಿಸಿದವು. ಕಾರ್ಕಳದಿಂದ ಕಣಂಜಾರು, ಹೆಬ್ರಿಯಿಂದ ನಾಡ್ಪಾಲು, ನೆಲ್ಲಿಕಟ್ಟೆ ಕಡೆಗೆ ತೆರಳುವ ಸರಕಾರಿ ಬಸ್‌ಗಳು ನಿಯಮಿತವಾಗಿ ಸಂಚಾರ ನಡೆಸಿದವು. ಹೆಬ್ರಿಯಿಂದ ಶಿವಮೊಗ್ಗದತ್ತ ಸಾಗುವ ಸರಕಾರಿ ಬಸ್‌ಗಳ ಸಂಚಾರ ಮಾತ್ರ ವಿರಳವಾಗಿತ್ತು.ಖಾಸಗಿ ಬಸ್‌ಗಳು ತಮ್ಮ ಸೇವೆ ಮುಂದುರಿಸಿರುವುದರಿಂದ, ಸ್ಥಳೀಯ ಜನರಿಗೆ ಯಾವುದೇ ತೊಂದರೆಯಾಗಿಲ್ಲ.
ಕಾರವಾರ, ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು, ಹುಬ್ಬಳ್ಳಿ, ಧಾರವಾಡ, ಧರ್ಮಸ್ಥಳ, ದಾಂಡೇಲಿ ಮುಂತಾದ ಸ್ಥಳಗಳಿಗೆ ಕಾರ್ಕಳ ಮೂಲಕ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಹಲವಾರು ಬಸ್‌ಗಳು ಸಂಚರಿಸಲೇ ಇಲ್ಲ.ಧರ್ಮಸ್ಥಳದಿಂದ ಕಾರ್ಕಳ ಮೂಲಕವಾಗಿ ದಾಂಡೇಲಿ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಚಿಕ್ಕಮಗಳೂರು ಸಾಗುವ ಅಂತರ್ ಜಿಲ್ಲೆಗಳ ನಡುವಿನ ಕೆಲವು ಸರ್ಕಾರಿ ಬಸ್ ಗಳು ಸಂಚರಿಸಿದವು.