ಕಾರ್ಕಳ: ಬ್ಯುಸಿನೆಸ್‌ ಕ್ರಿಯೇಟಿವ್‌ ಕಾರ್ಯಕ್ರಮ ಉದ್ಘಾಟನೆ

| Published : Aug 11 2024, 01:36 AM IST

ಕಾರ್ಕಳ: ಬ್ಯುಸಿನೆಸ್‌ ಕ್ರಿಯೇಟಿವ್‌ ಕಾರ್ಯಕ್ರಮ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಪ್ತ ಸ್ವರ ಸಭಾಂಗಣದಲ್ಲಿ ವಾರ್ಷಿಕ ಆಯವ್ಯಯ 2024-25ರ ಬ್ಯುಸಿನೆಸ್ ಕ್ರಿಯೇಟಿವ್ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳವಾಣಿಜ್ಯ ಕ್ಷೇತ್ರದಲ್ಲಿ ತೆರಿಗೆಯ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಎಂದು‌ ಎನ್‌ಸಿಎಸ್ ಚಾರ್ಟರ್ಡ್ ಅಕೌಂಟೆಂಟ್ ವ್ಯವಸ್ಥಾಪಕ ಪಾಲುದಾರ ಲೆಕ್ಕ ಪರಿಶೋಧಕ ನಿತೀಶ್ ಶೆಟ್ಟಿ ಹೇಳಿದರು.

ಅವರು ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಪ್ತ ಸ್ವರ ಸಭಾಂಗಣದಲ್ಲಿ ಆಯೋಜಿಸಲಾದದ ವಾರ್ಷಿಕ ಆಯವ್ಯಯ 2024-25ರ ಬ್ಯುಸಿನೆಸ್ ಕ್ರಿಯೇಟಿವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಯವ್ಯಯಗಳು ದೇಶದ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ವಿಶ್ವದ ಒಟ್ಟು ವಹಿವಾಟಿನ ಶೇ.46 ಡಿಜಿಟಲ್‌ ಇಂಡಿಯಾ ಮೂಲಕ ನಡೆಯುತ್ತಿದೆ‌ ಎಂದರು.

ಎನ್‌ಸಿಎಸ್‌ ಲೆಕ್ಕಪರಿಶೋಧಕ ಚರಣ್ ರಾಜ್ ಮಚ್ಚೂರ್ ಮಾತನಾಡಿ, ಒಂದು ಸರ್ಕಾರದ ಬಜೆಟ್‌ನ ಉದ್ದೇಶ ಆಯಾ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ನಿರೀಕ್ಷಿತ ವೆಚ್ಚಗಳ ಸಾರಾಂಶ ಒಳಗೊಂಡಿರುತ್ತದೆ. ಉದ್ದಿಮೆದಾರರು ಆಯವ್ಯಯಗಳ ಬದಲಾವಣೆಗಳನ್ನು ಪರಿಶೀಲಿಸಿ ಅಲ್ಪಾವಧಿ ಹಾಗೂ ದೀರ್ಘಾವಧಿ ತೆರಿಗೆಗಳನ್ನು ಗಮನಿಸುತ್ತಿರಬೇಕು ಎಂದು ವಾಣಿಜ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎನ್‌ಸಿಎಸ್‌ನ ಲೆಕ್ಕ ಪರಿಶೋಧಕ ಸುಮಂತ್ ಬಂಗೇರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಕು ಮತ್ತು ಸೇವೆಗಳ ಮೇಲೆ ವಿಧಿಸುವ ಎಲ್ಲ ಪರೋಕ್ಷ ತೆರಿಗೆಗಳನ್ನು ಬದಲಾಯಿಸುತ್ತದೆ. ತೆರಿಗೆ ರಚನೆಯಿಂದ ವಿವಿಧ ರೀತಿಯ ತೆರಿಗೆಗಳನ್ನು ತೆಗೆದುಹಾಕುವುದು ಜಿಎಸ್‌ಟಿ ಅನುಷ್ಠಾನದ ಪ್ರಾಥಮಿಕ ಗುರಿಗಳಲ್ಲಿ ಒಂದಾಗಿದೆ ಎಂದರು.ಸಹಸಂಸ್ಥಾಪಕ ಅಮೃತ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಆಯವ್ಯಯಗಳು ಆರ್ಥಿಕ ಬುನಾದಿಯನ್ನು ಪರಿಶೀಲನೆ ಮಾಡುತ್ತದೆ ಎಂದರು.

ಸಹಸಂಸ್ಥಾಪಕ ಗಣನಾಥ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.