ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆ ಕಾರ್ಕಳದ ಹೋಟೆಲ್ ಪ್ರಕಾಶದಲ್ಲಿ ಜರುಗಿತು. ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಘಟಕದ ಆಶ್ರಯದಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದ ಅವರು, ಸದಸ್ಯರೆಲ್ಲರೂ ಕಾರ್ಯಪ್ರವೃತರಾಗುವಂತೆ ವಿನಂತಿಸಿದರು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಡಿಂಡಿಮ, ಹಿರಿಯರೆಡೆಗೆ ಸಾಹಿತ್ಯ ನಡೆ, ತಾಲೂಕು ಕಸಾಪ ಸದಸ್ಯರ ಸಮಾವೇಶ, ತಾಲೂಕು ಕವಿಗೋಷ್ಠಿ, ಅಕ್ಟೋಬರ್ ನಲ್ಲಿ ನಡೆಸಲಾಗುವ ತಾಲೂಕು ಸಾಹಿತ್ಯ ಸಮ್ಮೇಳನದ ರೂಪುರೇಷೆಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದು, ಇದುವರೆಗೆ ಕಾರ್ಕಳ ತಾಲೂಕು ಘಟಕ ನಡೆಸಿದ ಎಲ್ಲ ಸಾಹಿತ್ಯ ಕಾರ್ಯಕ್ರಮಗಳು ಪ್ರಶಂಸನೀಯ ಮತ್ತು ಮಾದರಿಯಾದುದು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾರ್ಗದರ್ಶನ ಪ್ರೋತ್ಸಾಹ ಸದಾ ಇದೆ ಎಂದು ಹೇಳಿದರು.

ಜಿಲ್ಲಾ ಗೌರವ ಪ್ರತಿನಿಧಿ ಎಸ್. ನಿತ್ಯಾನಂದ ಪೈ ಹಾಗೂ ನರಸಿಂಹ ಮೂರ್ತಿ, ಪ್ರಕಾಶ್ ಉಪಸ್ಥಿತರಿದ್ದರು.ಸಭೆಯಲ್ಲಿ ಕಸಾಪ ಸದಸ್ಯರಾದ ಬೇಬಿ ಈಶ್ವರಮಂಗಲ, ಶಿವ ಸುಬ್ರಮಣ್ಯ ಭಟ್ , ನಾಗೇಶ್ ನಲ್ಲೂರು, ಧರಣೇಂದ್ರ ಕುಮಾರ್, ಸುಲೋಚನಾ, ಶೈಲಜಾ ಹೆಗ್ಡೆ, ಡಾ. ಸುಮತಿ, ಡಾ. ಮಾಲತಿ ಪೈ ಉಪಸ್ಥಿತರಿದ್ದರು. ಈ ಸಂದರ್ಭ ನಿವೃತ್ತ ಶಿರಸ್ತೇದಾರ ಶಿವಪ್ಪ ಅವರು ತಮ್ಮ ಸ್ವರಚಿತ ಕವನ ವಾಚಿಸಿದರು.ಕಾರ್ಯಕ್ರಮದಲ್ಲಿ ಘಟಕದ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ ವಂದಿಸಿದರು.