ಸಾರಾಂಶ
ಮಾಗಡಿ: ತಾಲೂಕಿನ ಸುಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಕರ್ಲಹಳ್ಳಿ ಬಸವಣ್ಣನ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಮಾಗಡಿ: ತಾಲೂಕಿನ ಸುಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಕರ್ಲಹಳ್ಳಿ ಬಸವಣ್ಣನ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಗಣಪತಿಗೆ ವಿಶೇಷ ಪೂಜೆ, ಆಂಜನೇಯ ಸ್ವಾಮಿಗೆ ಪುಣ್ಯಾಃ ನೆರವೇರಿಸಲಾಯಿತು. ಭವ್ಯರಥದಲ್ಲಿ ಬಸವಣ್ಣನ ಉತ್ಸವ ಮೂರ್ತಿಯನ್ನಿರಿಸಿ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಬಸವಣ್ಣನ ರಥೋತ್ಸವದಲ್ಲಿ ರೈತರು ತಮ್ಮ ದನಕರುಗಳನ್ನು ಶೃಂಗರಿಸಿ, ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ರಾಗಿಮುದ್ದೆ ಕಾಳು ಹುಳಿ ಊಟ ಸವಿದರು.ಪಟದ ಕುಣಿತ, ಜೋಡಿ ತಮಟೆ, ಹೊಂಬಾಳೆ ಕಳಶದ ಸಾಂಪ್ರದಾಯಿಕ ಮೆರವಣಿಗೆ ಜನಮನ ಸೂರೆಗೊಂಡಿತು. ವರ್ಣರಂಜಿತ ಗೋಪುರ, ಪಡಸಾಲೆ, ತೊಟ್ಟಿಲು ಸೇವೆ, ಸಮುದಾಯ ಭವನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ದೇವಲಯದ ಸಮಿತಿಯ ಸಾಧನೆ ಬಗ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಎತ್ತೋ ಬಸವಣ್ಣ ಎಂದೆ ಪ್ರಸಿದ್ಧಿ ಪಡೆದಿರುವ ಕರ್ಲಹಳ್ಳಿ ಬಸವಣ್ಣ ಸ್ವಾಮಿಗೆ ಹೊಸದಾಗಿ ಕಾರು ಹಾಕುವ ಹಸುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಗಿಣ್ಣಹಾಲು ಅರ್ಪಿಸುವುದು ವಾಡಿಕೆ. ಬಸವಣ್ಣ ರಾಸುಗಳನ್ನು ರೋಗದಿಂದ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಬಸವ ಜಯಂತಿ ದಿನದಂದು ಕರ್ಲಹಳ್ಳಿ ಬಸವಣ್ಣ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯುತ್ತದೆ.ಸಂಜೆ 6 ಗಂಟೆಗೆ ಬೆಳ್ಳಿ ರಥದಲ್ಲಿ ಬಸವೇಶ್ವರಸ್ವಾಮಿ ಮೂರ್ತಿ ಮೆರವಣಿಗೆ ಮಾಡಲಾಯಿತು. ಬಳಿಕ ಬಸವೇಶ್ವರಸ್ವಾಮಿ ಕಲಾ ವೃಂದದವರಿಂದ ಸಂಪೂರ್ಣ ರಾಮಯಣಂ ನಾಟಕ ಪ್ರದರ್ಶನ ನಡೆಯಿತು. ಫೋಟೊ 10ಮಾಗಡಿ1 :
ಮಾಗಡಿ ತಾಲೂಕಿನ ಕರ್ಲಹಳ್ಳಿ ಬಸವಣ್ಣನ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಬ್ರಹ್ಮರಥೋತ್ಸವ ನೆರವೇರಿಸಲಾಗಿತ್ತು.