2026-27ನೇ ಸಾಲಿಗೆ ಪ್ರವೇಶಾತಿ ಪಡೆಯುವ ಬಿಎಸ್ಸಿ 3ನೇ ಮತ್ತು 5ನೇ ಸೆಮಿಸ್ಟ‌ರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 6,079ಕ್ಕೆ ( ಈ ಮೊದಲು ₹ 13,112) ಪರಿಷ್ಕರಿಸಲಾಗಿದೆ. ಹಾಗೆಯೇ, ಬಿಸಿಎ 3ನೇ ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 26,593ಕ್ಕೆ ( ಈ ಮೊದಲು ₹ 34,522) ಪರಿಷ್ಕರಿಸಲಾಗಿದೆ.

ಧಾರವಾಡ:

ಬಿಎಸ್ಸಿ-ಬಿಬಿಎ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಏರಿಕೆ ಮಾಡಿರುವ ಕರ್ನಾಟಕ ವಿವಿ ನೀತಿ ವಿರೋಧಿಸಿ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಕವಿವಿ ಕೊನೆಗೂ ಪ್ರವೇಶ ಶುಲ್ಕವನ್ನು ಇಳಿಕೆ ಮಾಡಿ ಆದೇಶಿಸಿದೆ.2026-27ನೇ ಸಾಲಿಗೆ ಪ್ರವೇಶಾತಿ ಪಡೆಯುವ ಬಿಎಸ್ಸಿ 3ನೇ ಮತ್ತು 5ನೇ ಸೆಮಿಸ್ಟ‌ರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 6,079ಕ್ಕೆ ( ಈ ಮೊದಲು ₹ 13,112) ಪರಿಷ್ಕರಿಸಲಾಗಿದೆ. ಹಾಗೆಯೇ, ಬಿಸಿಎ 3ನೇ ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 26,593ಕ್ಕೆ ( ಈ ಮೊದಲು ₹ 34,522) ಪರಿಷ್ಕರಿಸಲಾಗಿದೆ. ಈ ಶುಲ್ಕವನ್ನು ಹಿಂದಿನ ವರ್ಷದಲ್ಲಿ ಜಾರಿಯಲ್ಲಿದ್ದ ಶುಲ್ಕಕ್ಕೆ ನಿಯಮಾನುಸಾರ ಶೇ. 10ರಷ್ಟು ಮಾತ್ರ ಹೆಚ್ಚಿಸಿ ಪರಿಷ್ಕರಿಸಲಾಗಿದೆ ಎಂದು ಕವಿವಿ ಕುಲಸಚಿವರು ಆದೇಶದಲ್ಲಿ ತಿಳಿಸಿದ್ದಾರೆ. ಜತೆಗೆ ಈ ಮೊದಲು ಹೆಚ್ಚುವರಿ ಶುಲ್ಕ ಭರಿಸಿದ್ದರೆ, ಈ ಶುಲ್ಕವನ್ನು ಮರುಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ.

ಶೇ.80ಕ್ಕಿಂತ ಹೆಚ್ಚು ಏರಿಕೆ?:ಕರ್ನಾಟಕ ವಿವಿಯು ಅವೈಜ್ಞಾನಿಕವಾಗಿ ಶೇ.80ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಶುಲ್ಕ ಏರಿಕೆ ವಿರೋಧಿಸಿ ಎಐಡಿಎಸ್‌ಒ ಸಂಘಟನೆಯು ವಿದ್ಯಾರ್ಥಿಗಳೊಂದಿಗೆ ಈ ಮೊದಲು ಕರ್ನಾಟಕ ಕಾಲೇಜು ಆವರಣದಲ್ಲಿ ಹಾಗೂ ಬುಧವಾರ ಸಹ ಕವಿವಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋರಾಟ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕವಿವಿ ಶುಲ್ಕವನ್ನು ವೈಜ್ಞಾನಿಕವಾಗಿ ಹೆಚ್ಚಿಸಿದ್ದನ್ನು ಎಐಡಿಎಸ್‌ಒ ಸಂಘಟನೆ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ. ಇದು ಹೋರಾಟಕ್ಕೆ ಸಂದ ಜಯ ಎಂದು ಕಾರ್ಯದರ್ಶಿ ಶಶಿಕಲಾ ಮೇಟಿ ಹೇಳಿದ್ದಾರೆ.