ಕರ್ಣಾಟಕ ಬ್ಯಾಂಕ್ ಅರ್ಧ ವಾರ್ಷಿಕ ಫಲಿತಾಂಶ: 736.40 ಕೋಟಿ ರು. ನಿವ್ವಳ ಲಾಭ

| Published : Oct 24 2024, 12:46 AM IST

ಕರ್ಣಾಟಕ ಬ್ಯಾಂಕ್ ಅರ್ಧ ವಾರ್ಷಿಕ ಫಲಿತಾಂಶ: 736.40 ಕೋಟಿ ರು. ನಿವ್ವಳ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕಿನ ಸಿಇಒ ಶ್ರೀ ಕೃಷ್ಣನ್ ಎಚ್‌, ಬ್ಯಾಂಕ್ ಉತ್ತಮ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಮುಂದಿನ ಬೆಳವಣಿಗೆಗೆ ನಿರಂತರ ಪ್ರಯತ್ನ ಮಾಡುತ್ತೇವೆ. ಕರ್ಣಾಟಕ ಬ್ಯಾಂಕ್, ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಗಾಗಿ ತಂತ್ರಜ್ಞಾನದ ಮೂಲಕ ಪ್ರಗತಿ ಸಾಧಿಸಲು ಬದ್ಧವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್‌ ಸೆಪ್ಟೆಂಬರ್ 2024ರಲ್ಲಿ 736.40 ಕೋಟಿ ರು.ಗಳ ಅರ್ಧ ವಾರ್ಷಿಕ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ 700.96 ಕೋಟಿ ರು.ಗಿಂತ ಇದು ಶೇ. 5.06 ರಷ್ಟು ಹೆಚ್ಚಳ ದಾಖಲಿಸಿದೆ.

ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಸೆಪ್ಟೆಂಬರ್ 30, 2024 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಆರ್ಥಿಕ ಫಲಿತಾಂಶಗಳನ್ನು ಅನುಮೋದಿಸಿದೆ.

ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭ 336.07 ಕೋಟಿ ರು. ಆಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 330.26 ಕೋಟಿ ರು.ಗಳಾಗಿತ್ತು. ಸೆಪ್ಟೆಂಬರ್ 2024 ಕ್ಕೆ ಕೊನೆಗೊಳ್ಳುವ ಅರ್ಧ ವರ್ಷದಲ್ಲಿ ನಿವ್ವಳ ಬಡ್ಡಿ ಆದಾಯ ಶೇ. 6.10 ರಷ್ಟು ಏರಿಕೆಯಾಗಿದ್ದು, 1,637.09 ಕೋಟಿ ರು.ಗಳಿಂದ 1,736.92 ಕೋಟಿ ರು.ಗಳ ತಲುಪಿದೆ.ಬ್ಯಾಂಕಿನ ಒಟ್ಟು ವ್ಯವಹಾರ 1,75,284.08 ಕೋಟಿ ರು. ಆಗಿದ್ದು, ಕಳೆದ ಅವಧಿಯಲ್ಲಿ 1,56,467.71 ಕೋಟಿ ರು.ಗಳಾಗಿದ್ದು, ಶೇ.12.03ರ ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕಿನ ಒಟ್ಟು ಠೇವಣಿ 99,967.99 ಕೋಟಿ ರು.ಗಳಾಗಿದ್ದು, ಶೇ.11.66 ರ ಹೆಚ್ಚಳವಾಗಿದ್ದು, ಕಳೆದ ಬಾರಿ 89,531.73 ಕೋಟಿ ರು. ಆಗಿತ್ತು.

ಬ್ಯಾಂಕ್‌ನ ಒಟ್ಟು ಮುಂಗಡಗಳು ಈ ವರ್ಷ 75,316.09 ಕೋಟಿ ರು.ಗಳಿಗೆ ಹೋಲಿಸಿದರೆ ಶೇ.12.52ರ ಹೆಚ್ಚಳ ಆಗಿದೆ. ಕಳೆದ ಬಾರಿ 66,935.98 ಕೋಟಿ ರು. ಆಗಿದೆ. ಬ್ಯಾಂಕಿನ ಸಿಡಿ ಅನುಪಾತ ಒಟ್ಟು ಶೇ. 75.34 ರಷ್ಟಿದೆ.30-09-2023 ರಂತೆ ಶೇ.16.20ಗೆ ಹೋಲಿಸಿದರೆ ಬ್ಯಾಂಕಿನ ಬಂಡವಾಳದ ಸಮರ್ಪಕತೆಯ ಅನುಪಾತ ಶೇ.17.58 ರಷ್ಟಿದೆ.

ಬ್ಯಾಂಕಿನ ಸಿಇಒ ಶ್ರೀ ಕೃಷ್ಣನ್ ಎಚ್‌, ಬ್ಯಾಂಕ್ ಉತ್ತಮ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಮುಂದಿನ ಬೆಳವಣಿಗೆಗೆ ನಿರಂತರ ಪ್ರಯತ್ನ ಮಾಡುತ್ತೇವೆ. ಕರ್ಣಾಟಕ ಬ್ಯಾಂಕ್, ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಗಾಗಿ ತಂತ್ರಜ್ಞಾನದ ಮೂಲಕ ಪ್ರಗತಿ ಸಾಧಿಸಲು ಬದ್ಧವಾಗಿದೆ ಎಂದರು.ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ನಾವು ಎನ್‌ಪಿಎಗಳನ್ನು ಕಡಿಮೆ ಮಾಡಲು ಯಶಸ್ವಿಯಾಗಿದ್ದೇವೆ. ನಮ್ಮ ಡಿಜಿಟಲ್ ಆಯ್ಕೆಗಳು ಗಮನಾರ್ಹ ಉತ್ಸಾಹವನ್ನು ತರುತ್ತಿವೆ ಎಂದರು.