ಕರ್ನಾಟಕ ಜಾನಪದ ಪರಿಷತ್‌ ಬೆಳ್ತಂಗಡಿ ಘಟಕ ಪದಗ್ರಹಣ

| Published : Jul 25 2024, 01:16 AM IST

ಕರ್ನಾಟಕ ಜಾನಪದ ಪರಿಷತ್‌ ಬೆಳ್ತಂಗಡಿ ಘಟಕ ಪದಗ್ರಹಣ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾರಂಭದಲ್ಲಿ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆಮಂತ್ರಣ ಶಿಕ್ಷಣರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕರ್ನಾಟಕ ಜಾನಪದ ಪರಿಷತ್ತು ಕರ್ನಾಟಕ ದ.ಕ. ಜಿಲ್ಲಾ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ ಇತ್ತೀಚೆಗೆ ಧರ್ಮಸ್ಥಳ ನೇತ್ರಾವತಿ ಬಳಿಯ ಪ್ರಣವ್ ಸಭಾಂಗಣದಲ್ಲಿ ನಡೆಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಉಜಿರೆ ಐಟಿ ಮತ್ತು ಹಾಸ್ಟೆಲ್ ಆಡಳಿತದ ಸಿ.ಇ.ಒ. ಪೂರಣ್ ವರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನಪದ ಕಲೆಗಾಗಿಯೇ ಹುಟ್ಟಿಕೊಂಡ ಹಲವಾರು ಸಂಸ್ಥೆಗಳು, ಕಲಾವಿದರು ಇರಬಹುದು, ವಿದ್ಯಾರ್ಥಿಗಳು ಆಗಿರಬಹುದು. ಎಲ್ಲ ಜನಾಂಗಕ್ಕೂ ಅಗತ್ಯವೆನಿಸುವ ಕಾರ್ಯಕ್ರಮಗಳನ್ನು ಮಾಡುವುದರಿಂದ ಇನ್ನಷ್ಟು ಜಾನಪದ ಉಳಿವಿಗೆ ಒತ್ತು ನೀಡಿದಂತಾಗುತ್ತದೆ ಮತ್ತು ನಮ್ಮ ಸಂಸ್ಕೃತಿಯನ್ನು ಬೆಳೆಸಿದಂತಾಗುತ್ತದೆ. ಈ ತಾಲೂಕು ಘಟಕ ಇನ್ನಷ್ಟು ಜಾನಪದ ಬಗ್ಗೆ ಉತ್ತೇಜಿಸುವ ಕಾರ್ಯ ಮಾಡುತ್ತಿರಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆಮಂತ್ರಣ ಶಿಕ್ಷಣರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಹಾಗೂ ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇವರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದ.ಕ.ಜಿ ಲ್ಲಾ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಪ್ರವೀಣ್ ಕೊಡಿಯಾಲ್‌ಬೈಲ್ ಪದಪ್ರದಾನ ನೆರವೇರಿಸಿದರು. ಪ್ರಣವ್ ಸಭಾಂಗಣದ ಮಾಲಕ ಸುರೇಂದ್ರ ಪ್ರಭು ಮುಖ್ಯ ಅತಿಥಿಗಳಾಗಿ ಮಾತಾನಾಡಿದರು. ಹಿರಿಯರಾದ ಬಿ .ಭುಜಬಲಿ ಧರ್ಮಸ್ಥಳ, ಕಿರಣ್ ಕುಮಾರ್ ಶೆಟ್ಟಿ ಬೆಳ್ತಂಗಡಿ, ಮಲ್ಲಿನಾಥ್ ಜೈನ್, ಕನ್ನಡ ಜಾನಪದ ಪರಿಷತ್ ಬೆಳ್ತಂಗಡಿ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಸಚಿನ್ ಮುಂಡ್ರುಪ್ಪಾಡಿ, ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಬೇಬಿ ಪೂಜಾರಿ ಪುಣ್ಕೆತ್ಯಾರು, ಶಾರದಾ ಶೆಟ್ಟಿ ಅಳದಂಗಡಿ ,ರಂಜನ್ ನೆರಿಯ, ಅರುಣ್ ಅಳದಂಗಡಿ, ಆಮಂತ್ರಣ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಅಭಿಷೇಕ್ ಬಜಗೋಳಿ, ಅಧ್ಯಕ್ಷೆ ನಿರೀಕ್ಷಿತಾ ಮಂಗಳೂರು, ವಿದ್ಯಾಶ್ರೀ ಅಡೂರ್, ಸ್ವಾತೀ ಸೂರಜ್ ಶಿಶಿಲ, ಶಾಲಿನಿ ಕೆಮ್ಮಣ್ಣು, ಕವಿತಾ ದಿನೇಶ್ ಕಟೀಲು, ಲಾಲಿತ್ಯ ಕುಮಾರ್ ಬೇಲೂರು, ಪ್ರಕಾಶ್ ಶೆಟ್ಟಿ ಧರ್ಮಸ್ಥಳ, ಆಶಾ ಅಡೂರು, ಗಣಪತಿ ಭಟ್ ಕುಳವರ್ಮ, ಹೆಚ್ಕೆ ನಯನಾಡು ಮುಂತಾದವರು ಉಪಸ್ಥಿತರಿದ್ದರು. ಕಾವ್ಯಶ್ರೀ ಅಜೇರು ಸ್ವಾಗತಿಸಿದರು. ಆಮಂತ್ರಣ ಸಮೂಹ ಸಂಸ್ಥೆಗಳ ವಿಜಯ ಕುಮಾರ್ ಜೈನ್ ಅಳದಂಗಡಿ ಪ್ರಸ್ತಾವಿಸಿದರು. ಶ್ರೀ ಧ.ಮಂ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಆಶಾ ಕಾರ್ಯಕ್ರಮ ನಿರ್ವಹಿಸಿದರು.