ದೊಡ್ಡಬಳಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹೃದಯ ಗೆಲ್ಲಬೇಕೇ ಹೊರತು, ಮತಗಳ್ಳತನ ಮಾಡಬಾರದು. ಕಾಂಗ್ರೆಸ್ ಮತಗಳ್ಳತನಕ್ಕೆ ಕೈ ಹಾಕಿ ಸೋತಿದೆ. ನರೇಂದ್ರ ಮೋದಿ ಜನರ ಹೃದಯ ಗೆದ್ದು ಗದ್ದುಗೆ ಪಡೆದಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು
ದೊಡ್ಡಬಳಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹೃದಯ ಗೆಲ್ಲಬೇಕೇ ಹೊರತು, ಮತಗಳ್ಳತನ ಮಾಡಬಾರದು. ಕಾಂಗ್ರೆಸ್ ಮತಗಳ್ಳತನಕ್ಕೆ ಕೈ ಹಾಕಿ ಸೋತಿದೆ. ನರೇಂದ್ರ ಮೋದಿ ಜನರ ಹೃದಯ ಗೆದ್ದು ಗದ್ದುಗೆ ಪಡೆದಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ವರ್ಗಗಳ ಹಿತವನ್ನು ಪರಿಗಣಿಸಲಾಗಿದೆ. ಕಾಂಗ್ರೆಸ್ ಬಜೆಟ್‌ಗಳ ರೀತಿ ಓಲೈಕೆ ಆಯವ್ಯಯ ಇದಲ್ಲ. ತೆರಿಗೆ ಪ್ರಮಾಣ ಹೆಚ್ಚಿಸದೆ, ಬೆಲೆಗಳನ್ನು ನಿಯಂತ್ರಿಸಿ, ಜನರ ಆಶೋತ್ತರಗಳಿಗೆ ಸ್ಪಂದಿಸಿರುವ ಹೊಣೆಯಾಧಾರಿತ ಮುಂಗಡ ಪತ್ರವನ್ನು ಮಂಡಿಸಲಾಗಿದೆ ಎಂದರು.ಕಾಂಗ್ರೆಸ್‌ಗೆ ಕರ್ನಾಟಕ ಎಟಿಎಂ!
ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯ ಕರ್ನಾಟಕ ಎಟಿಎಂ ಆಗಿದೆ. ಮುಂಬರುವ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಚುನಾವಣೆಗಳಿಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಕಾಂಗ್ರೆಸ್ ರಾಜ್ಯದ ಜನರಿಗೆ ಚೊಂಬು ನೀಡಿ ಇತರೆ ರಾಜ್ಯಗಳನ್ನು ಓಲೈಸುತ್ತಿದೆ ಎಂದು ಆರೋಪಿಸಿದರು.ಸರ್ವಸ್ಪರ್ಶಿ ಬಜೆಟ್:
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿಸುವ ಸ್ಪಷ್ಟ ಗುರಿ ಇದೆ. ಬಯೋಫಾರ್ಮಾ ಶಕ್ತಿ, ಶೀಮಾರ್ಟ್, ರಾಷ್ಟ್ರೀಯ ನಾರು ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ, ಸಮರ್ಥ್ 2.0, ಜಾಗತಿಕ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸಲು ಹೊಸ ಉಪಕ್ರಮ ಘೋಷಿಸಲಾಗಿದೆ. ಎಂಎಸ್‌ಎಂಇ ವಲಯಕ್ಕೆ ಆದ್ಯತೆ ನೀಡಿದ್ದು, ₹10,000 ಕೋಟಿ ನಿಧಿ ಸ್ಥಾಪಿಸುವುದಾಗಿ ಘೋಷಿಸಲಾಗಿದೆ ಎಂದು ವಿವರಿಸಿದರು.ಹೆಚ್ಚಿದ ಬೆಳವಣಿಗೆ ವೇಗ:
ಪ್ರಧಾನಿ ನೇತೃತ್ವದಲ್ಲಿ ದೇಶದ ಬೆಳವಣಿಗೆ ವೇಗ ಹೆಚ್ಚಿದೆ. ಉತ್ತಮ ಆಡಳಿತದ ಪರಿಣಾಮ ಜನರು ಕೊಳ್ಳುವ ಸಾಮರ್ಥ್ಯ ಪಡೆದಿದ್ದಾರೆ. ತೆಂಗು, ಗೋಡಂಬಿ, ಶ್ರೀಗಂಧ, ಮೀನುಗಾರರಿಕೆಗೆ ಒತ್ತು ನೀಡಲಾಗಿದೆ. ಮಧ್ಯಮವರ್ಗದ ಅಭಿವೃದ್ಧಿ ಆದ್ಯತೆ ನೀಡಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಉಳ್ಳವರು, ಭ್ರಷ್ಟಾಚಾರಿಗಳು, ಕಮೀಷನ್ ದಂಧೆಕೋರರು, ಸ್ವಾರ್ಥಿಗಳು, ಮತೀಯ ಓಲೈಕೆಗೆ ಬಜೆಟ್ ಮಾಡಲಾಗುತ್ತಿತ್ತು ಎಂದು ಆರೋಪಿಸಿದರು.ಕಾಂಗ್ರೆಸ್ ಗಾಂಧಿ ವಿರೋಧಿ:
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈವರೆಗೆ ಖಾದಿ ಹಾಕಿಲ್ಲ. ಕಾಂಗ್ರೆಸ್ ಮಹಾತ್ಮ ಗಾಂಧಿ ಹೆಸರಲ್ಲಿ ಲೂಟಿಗಿಳಿದಿತ್ತು. ಅಲ್ಲಿನ ಸ್ಕೀಂಗಳೆಲ್ಲವೂ ಸ್ಕ್ಯಾಮ್‌ಗಳಾಗಿ ಪರಿವರ್ತನೆಯಾದದ್ದು ಇತಿಹಾಸ. ಹಿಂದುಗಳನ್ನು, ರಾಮನನ್ನು ಕಂಡರೆ ಕಾಂಗ್ರೆಸ್‌ಗೆ ಆಗಲ್ಲ. ಯೋಜನೆಗಳಿಗೆ ಮುಸ್ಲಿಂ ಹೆಸರನ್ನು ಇಟ್ಟಿದ್ದರೆ ಬಂದು ಅಪ್ಪಿಕೊಳ್ಳುತ್ತಿದ್ದರು ಎಂದು ಲೇವಡಿ ಮಾಡಿದರು.ಬ್ಯಾಲೆಟ್ ಪೇಪರಲ್ಲೂ ಸೋಲ್ತೀರಿ!
ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಜಗತ್ತು ಆಧುನಿಕ ತಂತ್ರಜ್ಞಾನ ಎದುರುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಓಬಿರಾಯನ ಕಾಲಕ್ಕೆ ದೇಶವನ್ನು ಕೊಂಡೊಯ್ಯುವ ಕನಸು ಕಾಣುತ್ತಿದೆ. ವಿಶ್ವ ಮೆಚ್ಚಿರುವ ಇವಿಎಂ ವ್ಯವಸ್ಥೆಯನ್ನು ಧಿಕ್ಕರಿಸಿ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಕಾಂಗ್ರೆಸ್‌ಗೆ ಜನ ತಕ್ಕಪಾಠ ಕಲಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯಾದರೂ ಬಜೆಟ್ ನಲ್ಲಿ ರಾಜ್ಯದ ಜನರ ಪರವಾಗಿ ಹೊಸ ಯೋಜನೆಯನ್ನು ಮಂಡಿಸಬೇಕು. ದೊಡ್ಡಬಳ್ಳಾಪುರ ಕ್ಷೇತ್ರದ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂತಿ ವೆಂಕಟೇಶ್, ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ಬಪ್ಪ, ಮುಖಂಡರಾದ ಗೋಪಿ, ಮಂಜುನಾಥ್ ಮತ್ತಿತರರಿದ್ದರು.
6ಕೆಡಿಬಿಪಿ3-ದೊಡ್ಡಬಳ್ಳಾಪುರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.