ಕರ್ನಾಟಕ ಒಲಿಂಪಿಕ್ಸ್: ನಿಯೋಲ್‌ ಅನ್ನಾ, ಝಫರ್‌ ಖಾನ್‌ ಬೆಸ್ಟ್ ಅಥ್ಲಿಟ್ಸ್‌

| Published : Jan 24 2025, 12:46 AM IST

ಸಾರಾಂಶ

ಕರ್ನಾಟಕ ರಾಜ್ಯ ಕ್ರೀಡಾಕೂಟದ ಬೆಸ್ಟ್‌ ಅಥ್ಲೀಟ್‌ಗಳಾಗಿ ಬೆಂಗಳೂರಿನ ನಿಯೋಲ್‌ ಅನ್ನಾ ಕರ್ನೆಲಿಯೊ ಮತ್ತು ಬೆಳಗಾವಿಯ ಝಫರ್‌ ಖಾನ್‌ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ಕರ್ನಾಟಕ ರಾಜ್ಯ ಕ್ರೀಡಾಕೂಟ - 2025 (ಕರ್ನಾಟಕ ಒಲಿಂಪಿಕ್ಸ್‌)ರ ಬೆಸ್ಟ್‌ ಅಥ್ಲೀಟ್ ಗಳಾಗಿ ಮಹಿಳಾ 100 ಮೀ. ಓಟದಲ್ಲಿ ಚಿನ್ನ ಗೆದ್ದ ಬೆಂಗಳೂರಿನ ನಿಯೋಲ್‌ ಅನ್ನಾ ಕರ್ನೆಲಿಯೊ ಮತ್ತು ಪುರುಷರ ಲಾಂಗ್‌ ಜಂಪ್‌ನಲ್ಲಿ ಚಿನ್ನ ಗೆದ್ದ ಬೆಳಗಾವಿಯ ಝಫರ್‌ ಖಾನ್‌ ಅವರು ಆಯ್ಕೆಯಾಗಿದ್ದಾರೆ.

ಗುರುವಾರ ಒಟ್ಟು 9 ಸ್ಪರ್ಧೆಗಳ ಫೈನಲ್‌ ನಡೆಯಿತು. ಅವುಗಳಲ್ಲಿ ಉಡುಪಿ ಮತ್ತು ಬೆಂಗಳೂರು ತಲಾ 2 ಚಿನ್ನದ ಪದಕಗಳನ್ನು ಗೆದ್ದರೆ, ತುಮಕೂರು, ಬೆಳಗಾವಿ, ಕೊಡಗು, ಉಕ ಮತ್ತು ಯಾದಗಿರಿ ಜಿಲ್ಲೆಗಳು ತಲಾ ಒಂದೊಂದು ಚಿನ್ನದ ಪದಕಗಳನ್ನು ಗೆದ್ದುಕೊಂಡಿವೆ.

ಫಲಿತಾಂಶ ಹೀಗಿದೆ: ಪುರುಷರ ವಿಭಾಗ: 100 ಮೀ. ಓಟ: ಚಿನ್ನ - ಗಗನ್ ಎಲ್. ಗೌಡ (ಬೆಂಗಳೂರು), ಬೆಳ್ಳಿ - ರವಿಕಿರಣ (ಚಾಮರಾಜನಗರ), ಕಂಚು - ಶಿಜಾನ್ ಥಾಮಸ್ (ದಕ್ಷಿಣ ಕನ್ನಡ)

5000 ಮೀ ಓಟ: ಚಿನ್ನ - ಸಂದೀಪ್ ಟಿ. ಎಸ್. (ತುಮಕೂರು), ಬೆಳ್ಳಿ - ವೈಭವ್ ಮಾರುತಿ ಪಾಟೀಲ್ (ಬೆಂಗಳೂರು),

ಕಂಚು - ಗುರುಪ್ರಸಾದ್ (ತುಮಕೂರು)

ಹೈಜಂಪ್‌ ಚಿನ್ನ: ಸಿನಾನ್ (ಉಡುಪಿ), ಬೆಳ್ಳಿ - ಭವಿತ್ ಕುಮಾರ್ (ದಕ್ಷಿಣ ಕನ್ನಡ), ಕಂಚು - ಯಾಶ್ವಿನ್ ಕೆ.ಆರ್. (ದಕ್ಷಿಣ ಕನ್ನಡ)

ಶಾಟ್‌ಪಟ್: ಚಿನ್ನ - ಪ್ರಜ್ವಾಲ್ ಎಂ. ಶೆಟ್ಟಿ (ಉಡುಪಿ), ಬೆಳ್ಳಿ - ಮುಹಮ್ಮದ್ ಸಕ್ಲೇನ್ ಅಹ್ಮದ್ (ಮೈಸೂರು), ಕಂಚು - ಮಾನುಷ್ ಬಿ. (ಮೈಸೂರು)

400 ಮೀ ಹರ್ಡಲ್ಸ್: ಚಿನ್ನ - ಭೂಷಣ್ ಸುನಿಲ್ ಪಾಟೀಲ್ (ಬೆಳಗಾವಿ), ಬೆಳ್ಳಿ - ರಾಹುಲ್ ನಾಯಕ್ ಎನ್ (ಮೈಸೂರು), ಕಂಚು - ಭಾಗ್ಯವಂತ ಎನ್. ಕಲಾಲ್ (ಕಲ್ಬುರ್ಗಿ)

ಮಹಿಳೆಯರ ವಿಭಾಗ: 100 ಮೀ. ಓಟ ಚಿನ್ನ - ನಿಯೋಲ್ ಅನ್ನಾ ಕರ್ನೆಲಿಯೊ (ಬೆಂಗಳೂರು), ಬೆಳ್ಳಿ - ಸ್ತುತಿ ಪಿ. ಶೆಟ್ಟಿ (ಉಡುಪಿ), ಕಂಚು - ವರ್ಷಾ ವಿ. (ಬೆಂಗಳೂರು)

5000 ಮೀ ಓಟ: ಚಿನ್ನ - ತೇಜಸ್ವಿ ಎನ್. ಎಲ್. (ಕೊಡಗು), ಬೆಳ್ಳಿ - ಪ್ರಣಮ್ಯ ಎನ್. (ಶಿವಮೊಗ್ಗ), ಕಂಚು - ಶುಭಾಂಗಿ ಪ್ರಮೋದ್ ಕಾಕತ್ಕರ್ (ಬೆಳಗಾವಿ)

400 ಮೀ ಹರ್ಡಲ್ಸ್: ಚಿನ್ನ - ದೀಕ್ಷಿತಾ ರಾಮಕೃಷ್ಣ ಗೌಡ (ಉತ್ತರಕನ್ನಡ), ಬೆಳ್ಳಿ - ಅಪೂರ್ವ ಆನಂದ್ ನಾಯಕ್ (ಬೆಳಗಾವಿ), ಕಂಚು - ಅರ್ನಿಕಾ ವರ್ಷಾ ಡಿಸೋಜಾ (ಉಡುಪಿ)

ಹೈ ಜಂಪ್: ಚಿನ್ನ - ಪಲ್ಲವಿ ಎಸ್. ಪಾಟೀಲ್ (ಯಾದಗಿರಿ), ಬೆಳ್ಳಿ - ಎಸ್. ಬಿ. ಸುಪ್ರಿಯಾ (ಚಿಕ್ಕಮಗಳೂರು), ಕಂಚು - ಫ್ಲಾರ್ವಿಷಾ ವೆಲಿಷಾ ಮಾಂತೆರೊ (ದಕ್ಷಿಣ ಕನ್ನಡ)