ದೇಶದಲ್ಲೇ ಅತ್ಯಧಿಕ ವಿಸ್ಕಿ ಕರ್ನಾಟಕದಲ್ಲಿ ಮಾರಾಟ!

| N/A | Published : Sep 29 2025, 01:03 AM IST / Updated: Sep 29 2025, 04:37 AM IST

ದೇಶದಲ್ಲೇ ಅತ್ಯಧಿಕ ವಿಸ್ಕಿ ಕರ್ನಾಟಕದಲ್ಲಿ ಮಾರಾಟ!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 40.17 ಕೋಟಿ ಕೇಸ್‌ನಷ್ಟು ವಿಸ್ಕಿ ಮಾರಾಟವಾಗಿದ್ದು, ಇದರಲ್ಲಿ ಶೇ.58ರಷ್ಟು ಪಾಲಿನ ಮೂಲಕ ದಕ್ಷಿಣ ಭಾರತ ಮೊದಲ ಸ್ಥಾನದಲ್ಲಿದೆ. ಜೊತೆಗೆ ಶೇಕಡಾವಾರು ಮಾರಾಟದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

  ನವದೆಹಲಿ :  ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 40.17 ಕೋಟಿ ಕೇಸ್‌ನಷ್ಟು ವಿಸ್ಕಿ ಮಾರಾಟವಾಗಿದ್ದು, ಇದರಲ್ಲಿ ಶೇ.58ರಷ್ಟು ಪಾಲಿನ ಮೂಲಕ ದಕ್ಷಿಣ ಭಾರತ ಮೊದಲ ಸ್ಥಾನದಲ್ಲಿದೆ. ಜೊತೆಗೆ ಶೇಕಡಾವಾರು ಮಾರಾಟದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

ಸಿಐಎಬಿಸಿ (ಭಾರತೀಯ ಮದ್ಯ ಮಾರಾಟಗಾರರ ಒಕ್ಕೂಟ) ಅಂಕಿ-ಅಂಶದ ಪ್ರಕಾರ, ಐಎಂಎಫ್‌ಎಲ್‌ (ಇಂಡಿಯನ್‌ ಮೇಡ್‌ ಫಾರಿನ್‌ ಲಿಕ್ಕರ್‌- ವಿಸ್ಕಿ, ರಮ್, ಜಿನ್‌, ವೋಡ್ಕಾ, ಬ್ರಾಂಡಿ) ಮಾರಾಟದಲ್ಲಿ ದಕ್ಷಿಣ ಐದು ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮುಂಚೂಣಿಯಲ್ಲಿವೆ. ಮಾರ್ಚ್‌ 31ರ ಆರ್ಥಿಕ ವರ್ಷದಲ್ಲಿ ಅಂತ್ಯಗೊಂಡಂತೆ ಈ ರಾಜ್ಯಗಳಲ್ಲಿ 23.18 ಕೋಟಿ ( ಒಟ್ಟಾರೆ ಶೇ.58) ಬಾಕ್ಸ್ ವಿಸ್ಕಿ ಮಾರಾಟವಾಗಿದೆ. ದೇಶದ ಉಳಿದ ರಾಜ್ಯಗಳು ಒಟ್ಟಾರೆ ಶೇ.42ರಷ್ಟು ಪಾಲು ಹೊಂದಿವೆ.

ಈ ಪೈಕಿ ಕರ್ನಾಟದಲ್ಲಿ 6.88 ಕೋಟಿ ಬಾಕ್ಸ್‌ ವಿಸ್ಕಿ (ಶೇ.17) ಮಾರಾಟವಾಗಿದೆ. 2024ರಲ್ಲಿ ಈ ಪ್ರಮಾಣ 6.83 ಕೋಟಿಯಿತ್ತು. ನಂತರದ ಸ್ಥಾನದಲ್ಲಿ ತಮಿಳುನಾಡು (6.47 ಕೋಟಿ ಬಾಕ್ಸ್‌) ರಾಜ್ಯವಿದೆ. ಉಳಿದಂತೆ ತೆಲಂಗಾಣ (3.71 ಕೋಟಿ), ಆಂಧ್ರಪ್ರದೇಶದಲ್ಲಿ (3.55 ಕೋಟಿ), ಕೇರಳದಲ್ಲಿ (2.29 ಕೋಟಿ) ಮಾರಾಟವಾಗಿದೆ.

- ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ 40.17 ಕೋಟಿ ಕೇಸ್‌ನಷ್ಟು ವಿಸ್ಕಿ ಮಾರಾಟ

- ಈ ಪೈಕಿ 23.18 ಕೋಟಿ ಕೇಸ್‌ ಅಂದರೆ ಶೇ.58ರಷ್ಟು ದಕ್ಷಿಣ ಭಾರತದಲ್ಲೇ ಬಿಕರಿ 

- ಕರ್ನಾಟಕದಲ್ಲೇ 6.88 ಕೋಟಿ ಕೇಸ್‌ಗಳು ಮಾರಾಟ: ದೇಶದಲ್ಲೇ ಪ್ರಥಮ ಸ್ಥಾನ

- ನಂತರದಲ್ಲಿ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ

Read more Articles on