ಸಾರಾಂಶ
ದೇಶಾದ್ಯಂತ ಇರುವ ವೈವಿಧ್ಯತೆಗಳಲ್ಲಿ ಕರ್ನಾಟಕ ವಿಶೇಷವಾದದ್ದು. ಅದರಲ್ಲೂ ಉತ್ತರ ಕನ್ನಡ ಜಿಲ್ಲೆ ಅವೆಲ್ಲವನ್ನೂ ಪ್ರತಿನಿಧಿಸುವ ಪ್ರಾಕೃತಿಕ ಜೀವವೈವಿಧ್ಯತೆಯ ಜತೆಗೆ ದೇಶದ ಹಲವು ಪ್ರಥಮಗಳಿಗೆ ಕಾರಣವಾದ ಜಿಲ್ಲೆಯಾಗಿದೆ.
ಕಾರವಾರ: ಪ್ರತಿಯೊಬ್ಬರೂ ಕನ್ನಡ ಮತ್ತು ಅದರ ಸಂಸ್ಕೃತಿಯ ಭಾಗವಾಗಬೇಕಾದರೆ ಮೊದಲು ಭಾಷೆ ಬಳಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಅಭಿಪ್ರಾಯಪಟ್ಟರು.
ತಾಲೂಕಿನ ಕೈಗಾ ವಸತಿ ಸಂಕೀರ್ಣದಲ್ಲಿ ಸಹ್ಯಾದ್ರಿ ಸಂಭ್ರಮ ಸಾಂಸ್ಕೃತಿಕ ಮೇಳದ ಜತೆಗೆ ಸಹ್ಯಾದ್ರಿ ಕನ್ನಡ ಸಂಘದ ರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತಾನಾಡಿ, ದೇಶಾದ್ಯಂತ ಇರುವ ವೈವಿಧ್ಯತೆಗಳಲ್ಲಿ ಕರ್ನಾಟಕ ವಿಶೇಷವಾದದ್ದು. ಅದರಲ್ಲೂ ಉತ್ತರ ಕನ್ನಡ ಜಿಲ್ಲೆ ಅವೆಲ್ಲವನ್ನೂ ಪ್ರತಿನಿಧಿಸುವ ಪ್ರಾಕೃತಿಕ ಜೀವವೈವಿಧ್ಯತೆಯ ಜತೆಗೆ ದೇಶದ ಹಲವು ಪ್ರಥಮಗಳಿಗೆ ಕಾರಣವಾದ ಜಿಲ್ಲೆಯಾಗಿದೆ. ಇಂತಹ ಜಿಲ್ಲೆ, ಪ್ರಾಕೃತಿಕ ಸೌಂದರ್ಯದ ಮತ್ತೊಂದು ಪ್ರದೇಶದ ಬೇರೆಲ್ಲೂ ಇಲ್ಲ ಎಂದರು.ಕೈಗಾದ ಸ್ಥಳ ನಿರ್ದೆಶಕ ಪ್ರಮೋದ ರಾಯಚೂರು ಮಾತನಾಡಿ, ಕೈಗಾ ಅಣು ವಿದ್ಯುತ್ ಸ್ಥಾವರದ ವಸತಿ ಸಂಕೀರ್ಣದಲ್ಲಿ ದೇಶದ ಎಲ್ಲ ಭಾಗಗಳನ್ನು ಪ್ರತಿನಿಧಿಸುವ ಅಧಿಕಾರಿ ಮತ್ತು ಉದ್ಯೋಗಿ ವರ್ಗವಿದ್ದರೂ ಕನ್ನಡದ ಪ್ರಾಧಾನ್ಯತೆ ಸೇರಿದಂತೆ ಎಲ್ಲರ ಭಾಗವಹಿಸುವಿಕೆ ಅದ್ಭುತವಾಗಿದೆ. ವೈಜ್ಞಾನಿಕ ತಂತ್ರಜ್ಞಾನ ಮಾತ್ರವಲ್ಲ. ಕಲೆ, ಸಾಹಿತ್ಯ ಸೇರಿದಂತೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದ ಗೌರವ, ಜಿಲ್ಲಾ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದ ಪ್ರಮುಖ ಸಾಹಿತಿಗಳೂ ಕೈಗಾದಲ್ಲಿರುವುದು ಹೆಮ್ಮೆಯಾಗಿದೆ. ಕನ್ನಡ ಕಟ್ಟುವ ಕಾಯಕದಲ್ಲಿ ಸಹ್ಯಾದ್ರಿ ಸಂಘದ ಜತೆಗೆ ತೊಡಗಿಸಿಕೊಂಡಿರುವುದು ಮತ್ತು ಗ್ರಂಥಾಲಯದಂಥ ಪ್ರಮುಖ ಸಂಸ್ಥೆಗಳನ್ನೂ ಸಹ್ಯಾದ್ರಿ ಸಂಘ ನಡೆಸುತ್ತಿದ್ದು, ಬರಲಿರುವ ದಿನಗಳಲ್ಲಿ ಇನ್ನಷ್ಟು ಕನ್ನಡ ವಿಭಿನ್ನ ಕಾಯಕಕ್ಕೆ ಮುಂದಾಗಬೇಕು ಎಂದರು.
ಕೈಗಾ ಘಟಕ ಕೇಂದ್ರ ೧- ೨ರ ನಿರ್ದೇಶಕ ವೈ.ಬಿ. ಭಟ್, ನೌಕರ ಸಂಘದ ಅಧ್ಯಕ್ಷ ಸುಮಂತ್ ಹೆಬ್ಲೇಕರ್, ಸಹ್ಯಾದ್ರಿ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ಮೆಹೆಂದಳೆ, ಸಂಘದ ಅಧ್ಯಕ್ಷ ಜೀತೆಂದ್ರ ಕುಮಾರ, ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ, ಗೋಕುಲ್ ಢೆಪಿ ಇದ್ದರು.