ಈಶಾನ್ಯ ಹವಾಮಾನ ವೈಪರೀತ್ಯದಿಂದ ಕರ್ನಾಟಕದ ಕಾಫಿಗೆ ಅದೃಷ್ಟ

| Published : Apr 29 2024, 01:32 AM IST

ಈಶಾನ್ಯ ಹವಾಮಾನ ವೈಪರೀತ್ಯದಿಂದ ಕರ್ನಾಟಕದ ಕಾಫಿಗೆ ಅದೃಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಈಶಾನ್ಯ ದೇಶಗಳ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಹವಮಾನ ವೈಪರೀತ್ಯ ದೇಶದ ಕಾಫಿ ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ. ಜಿಲ್, ವಿಯಟ್ನಾಂ, ಕಾಂಬೋಡಿಯ, ಇಂಡೊನೇಷಿಯ,ಇಥಿಯೋಪಿಯದಂತಹ ದೇಶಗಳು ಕಾಫಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದು ಜಗತ್ತಿನ ಕಾಫಿ ಬೇಡಿಕೆಯ ಶೇ. ೯೫ ರಷ್ಟು ಕಾಫಿಯನ್ನು ಈ ದೇಶಗಳೆ ಪೊರೈಸುತ್ತಿವೆ. ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಭಾರತದ ಕಾಫಿ ಶೇ ೫ ರಷ್ಟು ಮಾತ್ರವೇ ಇದೆ.

ಜಗತ್ತಿನ ಶೇ 95 ರಷ್ಟು ಕಾಫಿ ಪೂರೈಸುತ್ತಿರುವ ಈಶಾನ್ಯ ದೇಶಗಳು । ಭಾರತ ಶೇ 5 ರಷ್ಟು ಮಾತ್ರ । ಕರ್ನಾಟಕದಲ್ಲಿ ಶೇ 70 ಕಾಫಿ ಬೆಳೆ

ಶ್ರೀವಿದ್ಯಾ ಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಈಶಾನ್ಯ ದೇಶಗಳ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಹವಮಾನ ವೈಪರೀತ್ಯ ದೇಶದ ಕಾಫಿ ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ.

ಬ್ರೆಜಿಲ್, ವಿಯಟ್ನಾಂ, ಕಾಂಬೋಡಿಯ, ಇಂಡೊನೇಷಿಯ,ಇಥಿಯೋಪಿಯದಂತಹ ದೇಶಗಳು ಕಾಫಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದು ಜಗತ್ತಿನ ಕಾಫಿ ಬೇಡಿಕೆಯ ಶೇ. ೯೫ ರಷ್ಟು ಕಾಫಿಯನ್ನು ಈ ದೇಶಗಳೆ ಪೊರೈಸುತ್ತಿವೆ. ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಭಾರತದ ಕಾಫಿ ಶೇ ೫ ರಷ್ಟು ಮಾತ್ರವೇ ಇದ್ದು, ಜಗತ್ತಿನಲ್ಲಿ ಕಾಫಿ ಬೆಳೆಯುವ ಏಳನೇ ದೇಶ ಭಾರತವಾಗಿದೆ. ದೇಶದ ಎಂಟು ಲಕ್ಷ ಎಕರೆ ಪ್ರದೇಶದಲ್ಲಿ ಕಾಫಿ ಉತ್ಪಾದಿಸಲಾಗುತ್ತಿದ್ದು ಸುಮಾರು ನಾಲ್ಕು ಲಕ್ಷ ಟನ್ ಕಾಫಿ ಉತ್ಪಾದನೆಯಾಗುತ್ತಿದೆ.

ದೇಶದಲ್ಲಿ ಉತ್ಪಾದಿಸುವ ಶೇ. ೭೦ ರಷ್ಟು ಕಾಫಿಯನ್ನು ಕರ್ನಾಟಕದಲ್ಲೆ ಬೆಳೆಯಲಾಗುತ್ತಿದ್ದು, ದೇಶದಲ್ಲಿ ಉತ್ಪಾದನೆಯಾಗುವ ಶೇ. ೮೦ ರಷ್ಟು ಕಾಫಿಯನ್ನು ಅನ್ಯ ರಾಷ್ಟ್ರಗಳಿಗೆ ರಪ್ತು ಮಾಡಲಾಗುತ್ತಿದೆ. ಕಾಫಿ ರಫ್ತಿನಿಂದಲೇ ದೇಶಕ್ಕೆ ಸುಮಾರು ೯ ಸಾವಿರ ಕೋಟಿ ರು. ವಿದೇಶಿ ವಿನಿಮಯ ಬರುತ್ತಿದೆ.

ಆದರೆ, ಈಶಾನ್ಯ ದೇಶಗಳಲ್ಲಿ ಹವಮಾನ ವೈಪರೀತ್ಯ ಕಾಡಲಾರಂಭಿಸಿದ ದಿನಗಳಿಂದ ದೇಶದ ಕಾಫಿ ಮಾರುಕಟ್ಟೆಯಲ್ಲಿ ಏರಿಕೆ ಕಾಣಲಾರಂಬಿಸಿದೆ. ಬ್ರೆಜಿಲ್‌ ದೇಶದಲ್ಲಿ ಅತಿಯಾದ ಮಳೆಯಾದರೆ, ವಿಯೆಟ್ನಾಂ ದೇಶದಲ್ಲಿ ಅತಿಯಾದ ಮಂಜು ಕಾಫಿ ಬೆಳೆ ಕುಂಠಿತಕ್ಕೆ ಕಾರಣವಾಗಿದೆ.

೨೦೨೪ ರ ಪ್ರಸಕ್ತ ಮಾರುಕಟ್ಟೆಯಲ್ಲಿ ಒಟಿ ಧಾರಣೆ ಮಾರುಕಟ್ಟೆ ಆರಂಭದಲ್ಲಿ ೨೩೦ ರು.ಗಳಿದ್ದರೆ ಮಾರುಕಟ್ಟೆ ಆರಂಭವಾದ ಐದು ತಿಂಗಳಿನಲ್ಲಿ ೪೦೦ ತಲುಪಿದ್ದು ಈ ಪ್ರಕಾರ ಮಾರುಕಟ್ಟೆ ಆರಂಭದಲ್ಲೆ ಮಾರಾಟ ಮಾಡಿದ ಬೆಳೆಗಾರರಿಗೆ ೭ ರಿಂದ ೭೫೦೦ ರು. ದೊರೆತಿದೆ. ಬೆಳೆಗಾರರು ೧೦ ಸಾವಿರ ರು. ಬೆಲೆ ದೊರಕಿದೆ,

(ಒಟಿ ಎಂದರೆ (ಔಟ್‌ಟರ್ನ್) ೫೦ ಕೆ.ಜಿ. ಕಾಫಿ ಹಣ್ಣಿನಿಂದ ಉತ್ಪತ್ತಿಯಾಗುವ ಬೀಜವನ್ನು ಆಧರಿಸಿ ಒಟಿ ಲೆಕ್ಕಮಾಡಲಾಗುತ್ತಿದ್ದು ಕೆಲವೊಂದು ಕಾಫಿತೋಟದ ೫೦ ಕೆ.ಜಿ. ಹಣ್ಣಿನಿಂದ ೩೦ ಕೆ.ಜಿ. ಬೀಜ ದೊರೆತರೆ ಕೆಲವು ತೋಟಗಳ ಹಣ್ಣಿನಿಂದ ಕೇವಲ ೨೨ ಕೆ.ಜಿ. ಬೀಜ ದೊರೆಯುತ್ತಿದ್ದು ಕಡಿಮೆ ಬೀಜ ದೊರಕಿದರೆ ಒಟಿ ಆಧಾರದಲ್ಲಿ ಬೆಲೆ ಕಡಿಮೆ)

ಅರೇಬಿಕ ಕಾಫಿಗಿಂತ ಹೆಚ್ಚು:

ರೋಬಸ್ಟ್ ಕಾಫಿಗಿಂತ ಬೆಲೆ ಹೆಚ್ಚು ದೊರೆಯುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಶ್ರಮವಹಿಸಿ ಬೆಳೆಯುವ ಅರೇಬಿಕ್‌ ಕಾಫಿಯನ್ನು ರೋಬಸ್ಟ್ ಕಾಫಿ ಬೆಲೆಯಲ್ಲಿ ಹಿಂದಿಕ್ಕಿದೆ. ಸದ್ಯದ ಮಾರುಕಟ್ಟೆಯಲ್ಲಿ ೫೦ ಕೆ.ಜಿ ಅರೇಬಿಕ್‌ ಚರಿ ಕಾಫಿ ೯ ರಿಂದ ೯೫೦೦ ರು. ಇದ್ದರೆ, ರೋಬಸ್ಟ್ ಚರಿ ಕಾಫಿ ೧೦ ರಿಂದ ೧೨ ಸಾವಿರ ರು. ನಿಗದಿಯಾಗಿದೆ. ಅದೇ ರೀತಿ ಅರೇಬಿಕ್‌ ಬೇಳೆ(ಪರ್ಚುಮೆಂಟ್) ೧೪ ರಿಂದ ೧೪.೫೦೦ ರು. ಇದ್ದರೆ, ರೋಬಸ್ಟ್ ಬೆಳೆ (ಪರ್ಚುಮೆಂಟ್) ದರ ೧೬ ಸಾವಿರದಿಂದ ೧೬೫೦೦ ರು.ಗೆ ಮಾರಾಟವಾಗುತ್ತಿದೆ.

ಕಾಫಿ ಕ್ಯೂರಿಂಗ್ ಹೊರತುಪಡಿಸಿ ಯಾವುದೆ ಕಾರಣಕ್ಕೂ ಕಾಫಿ ವ್ಯಾಪಾರಿಗಳ ಬಳಿ ತಮ್ಮ ಕಾಫಿಯನ್ನು ದಾಸ್ತಾನು ಇಡುವುದು ಅಪಾಯಕಾರಿ ಎಂಬುದು ಹಿರಿಯ ಕಾಫಿ ವ್ಯಾಪಾರಗಾರ ಹಾಗೂ ಪ್ರಗತಿಪರ ಬೆಳೆಗಾರರಾದ ಹೊಂಕರವಳ್ಳಿ ಧರ್ಮರಾಜ್ ಅನಿಸಿಕೆ.

ರೋಬಸ್ಟ್ ಕಾಫಿ ಧಾರಣೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿರ್ವಹಣೆಯ ವೆಚ್ಚವು ಅಧಿಕವಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಬೆಳೆಗಾರರ ಜೀವನ ಅಲ್ಪ ಚೇತರಿಕೆ ಕಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಹೊಂಕರವಳ್ಳಿ ಧರ್ಮರಾಜ್. ಪ್ರಗತಿಪರ ಬೆಳೆಗಾರ.

ಕಾಫಿ ಮುಕ್ತಮಾರುಕಟ್ಟೆಗೆ ತೆರೆದುಕೊಂಡು ಮೂರು ದಶಕಗಳಲ್ಲಿ ಇದು ಕಂಡು ಕೇಳರಿಯದ ಧಾರಣೆಯಾಗಿದ್ದು ಕಾಫಿ ಬೆಳೆಯುವ ದೇಶಗಳಲ್ಲಿ ಉತ್ಪಾದನೆ ಕುಂಠಿತಗೊಂಡಿರುವುದು ಬಾರತದ ಕಾಫಿಗೆ ಹೆಚ್ಚಿನ ಧಾರಣೆ ಬರಲು ಕಾರಣವಾಗಿದೆ.

ಬಸವರಾಜ್. ಎಸ್‌ಎಲ್‌ಒ ಕಾಫಿ ಮಂಡಳಿ. ಮಠಸಾಗರ.