ಸಾರಾಂಶ
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಸಾಗಸಂದ್ರ ಕೆಂಪಮ್ಮದೇವಿ ಆರತಿ ಅಗ್ನಿಕೊಂಡ ಮಹೋತ್ಸವ ಸಾವಿರಾರು ಭಕ್ತರ ನಡುವೆ ವೈಭವದಿಂದ ಭಾನುವಾರ ಜರುಗಿತು.
ಕನ್ನಡ ಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಸಾಗಸಂದ್ರ ಕೆಂಪಮ್ಮದೇವಿ ಆರತಿ ಅಗ್ನಿಕೊಂಡ ಮಹೋತ್ಸವ ಸಾವಿರಾರು ಭಕ್ತರ ನಡುವೆ ವೈಭವದಿಂದ ಭಾನುವಾರ ಜರುಗಿತು.ಮುಂಜಾನೆ ಆರಂಭವಾದ ಆರತಿ ಅಗ್ನಿಕೊಂಡ ಮಹೋತ್ಸವಕ್ಕೆ ಜಿಲ್ಲೆಯ ವಿವಿದಡೆ ಆಗಮಿಸಿದ ಭಕ್ತರು ಅಮ್ಮನವರ ದರ್ಶನ ಪಡೆದು ಪುನೀತರಾದರು. ಆರತಿ ಅಗ್ನಿಕೊಂಡ ಪ್ರಯುಕ್ತ ಶ್ರೀ ಕೆಂಪಮ್ಮ ದೇವಿ ವಿಶೇಷ ಅಲಂಕಾರ ಮಾಡಲಾಯಿತು. ಮುಂಜಾನೆ ಆರಂಭವಾದ ಕಳಸ ಉತ್ಸವ ಸಾಗಸಂದ್ರ ಗ್ರಾಮದ ರಾಜ ಬೀದಿಗಳಲ್ಲಿ ಉತ್ಸವದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಳಸ ಉತ್ಸವದಲ್ಲಿ ಸೋಮನ ಕುಣಿತ ನಗಾರಿ ಪಡಿತ ಬಸವನ ಉತ್ಸವ ನಡೆದವು. ಅಮ್ಮನವರ ಕಳಸ ಉತ್ಸವ ಅಗ್ನಿಕೊಂಡ ಪ್ರವೇಶಸಿತ್ತು. ಹರಕೆ ಹಾಗೂ ಬಾಯಿಬೀಗ ಹೊತ್ತ ಭಕ್ತರು ಅಗ್ನಿಕೊಂಡ ತುಳಿದು ಹರಕೆ ತೀರಿಸಿದರು. ಭಕ್ತಾಧಿಗಳಿಗೆ ಮಹಾ ದಾಸೋಹ ಏರ್ಪಡುಸಲಾಗಿತ್ತು. 9 ದಿನಗಳ ಕಾಲ ನಡೆಯಲಿರುವ ಜಾತ್ರೆ ಮಹೋತ್ಸವ ಬೆಳಗ್ಗೆ ಅಮ್ಮನವರ ಮಹಾ ರಥೋತ್ಸವ ನಡೆಯಲಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಚೇಳೂರು ಪೋಲೀಸರು ಸೂಕ್ತ ಬಂದೂಬಸ್ತ್ ವಹಿಸಿದ್ದರು.
;Resize=(128,128))
;Resize=(128,128))
;Resize=(128,128))