ಸಾರಾಂಶ
ಕನ್ನಡಪ್ರಭ ವಾರ್ತೆ, ಮೂಡಿಗೆರೆ
ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರ ಕಾರ್ತಿಕ್(26) ಆನೆ ದಾಳಿಗೆ ಪ್ರಾಣ ಕಳೆದುಕೊಂಡ ಧಾರುಣ ಘಟನೆ ಘಟನೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.ಕಿರಣ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಹೊಸಕೆರೆ ಮತ್ತು ಮೇಕನಗದ್ದೆ ಗ್ರಾಮಗಳ ತೋಟ ಮತ್ತು ಗದ್ದೆಗಳಿಗೆ ಸತತವಾಗಿ ದಾಳಿ ಮಾಡುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಬುಧವಾರ ಬೆಳಗ್ಗೆಯಿಂದಲೇ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಾಡಿನೊಳಗೆ ಆನೆಗಳನ್ನು ಓಡಿಸಲು ಪಟಾಕಿ ಸಿಡಿಸಿದಾಗ ಪಟಾಕಿ ಶಬ್ದಕ್ಕೆ ಕಾಡಾನೆಯೊಂದು ಏಕಾಏಕಿ ಸಿಬ್ಬಂದಿ ಕಡೆಗೆ ನುಗ್ಗಿ ಬಂದಿದೆ. ಆಗ ಎಲ್ಲರೂ ಓಡುವಾಗ ಕಾರ್ತಿಕ್ ಆನೆಗೆ ಸಿಲುಕಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಬಂದೂಕಿನಿಂದ ಗುಂಡು ಹಾರಿಸಿದರೂ ಹೆದರದ ಆನೆ ಕಾರ್ತಿಕ್ ನನ್ನು ತುಳಿದು ಸಾಯಿಸಿದೆ. ಉಳಿದ ಸಿಬ್ಬಂದಿ ತಪ್ಪಿಸಿಕೊಳ್ಳುವ ಓಟದಲ್ಲಿ ಆನೆ ನಿಗ್ರಹ ದಳದ ಉಪ ವಲಯ ಅರಣ್ಯಾಧಿಕಾರಿ ಕಿರಣ್ ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಡಾನೆ ದಾಳಿ ಮಾಡಿ ಸ್ಥಳದಲ್ಲಿ ಆನೆಗಳು ಸುತ್ತುವರಿದು ಮೃತ ದೇಹದ ಸಮೀಪಕ್ಕೆ ಯಾರೂ ಕೂಡ ಹೋಗದ ಪರಿಸ್ಥಿತಿ ಕೆಲ ಕಾಲ ನಿರ್ಮಾಣವಾಗಿತ್ತು. ನಂತರ ಆನೆಗಳು ಕಾಡಿನೆಡೆಗೆ ಹೋದ ಮೇಲೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂಧಿ ತೆರಳಿ ಮೃತದೇಹವನ್ನು ಕಾಡಿನಿಂದ ಹೊರತರಲಾಯಿತು.ಕಾಡಾನೆ ದಾಳಿಗೆ ಬಲಿಯಾದ ಕಾರ್ತಿಕ್ ಗೌಡಹಳ್ಳಿ ನಿವಾಸಿಯಾಗಿದ್ದು ಕಳೆದ ಒಂದು ವರ್ಷದಿಂದ ಅರಣ್ಯ ಇಲಾಖೆ ಕಾಡಾನೆ ನಿಗ್ರಹ ದಳದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆರೋಪ: ಈಗ ದಾಳಿ ಮಾಡಿರುವುದು ಹಿಂದೆಯೂ ದಾಳಿ ಮಾಡಿದ್ದ ಕಾಡನೆ ಬೈರನೇ ಹೊರತು ಬೆರಾವ ಆನೆಯೂ ಅಲ್ಲ, ಅರಣ್ಯ ಇಲಾಖೆ ಮಾನವರ ಮೇಲೆ ದಾಳಿ ಮಾಡುವ ಬೈರ ಆನೆಯನ್ನು ಹಿಡಿಯುವ ಬದಲು ಬೇರಾವುದೋ ಆನೆ ಹಿಡಿದು ಕೈ ತೊಳೆದುಕೊಂಡಿದ್ದರು ಎಂದು ಆನೆ ಹಿಡಿದ ಸಂದರ್ಭದಲ್ಲೇ ಸ್ಥಳೀಯರು ಆರೋಪ ಮಾಡಿದ್ದರು. ಅದರಂತೆ ಈಗ ಅರಣ್ಯ ಇಲಾಖೆ ಸಿಬ್ಬಂಧಿಯನ್ನೇ ಬಲಿ ಪಡೆದಿರುವುದು ಅದೇ ಕಾಡಾನೆ ಬೈರ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.ಫೋಟೋ: 22ಎಂಡಿಜಿ1ಪಿ1 :
ಆನೆ ದಾಳಿಗೆ ಬಲಿಯಾದ ಕಾರ್ತಿಕ್ (26)22ಎಂಡಿಜಿ1ಪಿ2 :
ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಡಾನೆ ನಿಗ್ರಹ ದಳದ ಉಪ ವಲಯ ಅರಣ್ಯಾಧಿಕಾರಿ ಕಿರಣ್.;Resize=(128,128))
;Resize=(128,128))
;Resize=(128,128))
;Resize=(128,128))