ಸಾರಾಂಶ
ಮಾಸದಲ್ಲಿ ಕಾರ್ತಿಕ ಮಾಸವು ಶ್ರೇಷ್ಠವಾಗಿದ್ದು, ತಾಯಂದಿರು ಈ ಸಂದರ್ಭದಲ್ಲಿ ದೀಪ ಬೆಳಗುವುದರ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ
ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರದಲ್ಲಿ ನೂರಾರು ಭಕ್ತಾದಿಗಳು ಶ್ರದ್ಧಾಭಕ್ತಿ ಪೂರ್ವಕವಾಗಿ ಕಾರ್ತಿಕ ದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಶ್ರೀರಾಮಕ್ಷೇತ್ರದ ಮಠಾಧೀಶ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ದೀಪಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಶ್ರದ್ಧಾ ಕೇಂದ್ರದಲ್ಲಿ ಸಾಮೂಹಿಕವಾಗಿ ಭಗವಂತನ ಪ್ರಾರ್ಥನೆ ಮಾಡಿದ ನಂತರ ಆಶೀರ್ವಚನ ನೀಡಿದ ಅವರು, ನಮ್ಮಲ್ಲಿ ಶಕ್ತಿಯ ಅನುಭವವಾಗುತ್ತದೆ.ಎಲ್ಲ ಮಾಸದಲ್ಲಿ ಕಾರ್ತಿಕ ಮಾಸವು ಶ್ರೇಷ್ಠವಾಗಿದ್ದು, ತಾಯಂದಿರು ಈ ಸಂದರ್ಭದಲ್ಲಿ ದೀಪ ಬೆಳಗುವುದರ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.
ಕಾರ್ತಿಕ ದೀಪೋತ್ಸವದ ಪ್ರಯುಕ್ತ ಶ್ರೀರಾಮ ದೇವರಿಗೆ ವಿಶೇಷ ಪೂಜೆ ನಡೆಯಿತು. ಪ್ರಸಾದ ವಿತರಣೆಯ ನಂತರದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣಕುಮಾರ ನಾಯ್ಕ, ಸಾರದಹೊಳೆ ಹನುಮಂತ ದೇವಸ್ಥಾನದ ಅಧ್ಯಕ್ಷ ಸುಬ್ರಾಯ ನಾಯ್ಕ, ಹಿರಿಯ ಮುಖಂಡ ಎಲ್.ಎಸ್. ನಾಯ್ಕ, ಜೆ.ಜೆ.ನಾಯ್ಕ, ಕೃಷ್ಣ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ, ಕೆ.ಆರ್.ನಾಯ್ಕ, ಮುಕುಂದ ನಾಯ್ಕ, ತಿರುಮಲ ನಾಯ್ಕ, ವಿಠ್ಠಲ ನಾಯ್ಕ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.