ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕಾಳೇನಹಳ್ಳಿ ಆನಂದ್ ಕುಮಾರ್‌ ಪಟ್ಟಣದ ಸ್ನೇಹಸೌಧ ನಿವಾಸದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ. ಎನ್. ಬಾಲಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲವನ್ನು ನೀಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಆನಂದ ಕುಮಾರ್ ಮಾತನಾಡಿ, ಕಳೆದು ಇಪ್ಪತ್ತು ವರ್ಷಗಳಿಂದ ಕನ್ನಡ ಭಾಷೆ, ನಾಡು, ನುಡಿಗಾಗಿ ದುಡಿಯುತ್ತಾ ಬಂದಿದ್ದೇನೆ. ನನ್ನ ಕನ್ನಡಾಂಬೆ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಈ ಬಾರಿ ನನ್ನನ್ನು ಬೆಂಬಲಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದರು. ನಾಡಪ್ರಭು ಕೆಂಪೇಗೌಡ ವೇದಿಕೆ ಸ್ಥಾಪನೆ ಮಾಡಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ನಮ್ಮ ಜಿಲ್ಲೆಯ ಸಮಸ್ತ ಕನ್ನಡಿಗರು ನನ್ನನ್ನು ಬೆಂಬಲಿಸಿ, ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮುರಾರ್ಜಿ ಮಂಜಣ್ಣ, ಕನ್ನಡಪರ ಹೋರಾಟಗಾರ ಕನ್ನಡ ವಾಸು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಾಳೇನಹಳ್ಳಿ ಗೋಪಾಲ್, ಪಿಎಸಿಸಿಎಸ್ ಮಾಜಿ ಅಧ್ಯಕ್ಷರಾದ ಕಾಳೇನಹಳ್ಳಿ ಮೊಗಣ್ಣ, ಗದ್ದೆ ರಾಮೇಶ್ವರಿ ಯುವಕರ ಸಂಘದ ಅಧ್ಯಕ್ಷರಾದ ರಾಜು, ಚಕ್ಕೆ ರಾಜು, ದಿಲೀಪ್, ಗುಂಡ, ಸಾಬ್ರು ಮಂಜಣ್ಣ, ಶಂಕರ್‌, ದಲಿತ ಸಂಘಟನೆ ಮುಖಂಡ ಶಂಕರ್‌, ಸಾಮಾಜಿಕ ಹೋರಾಟಗಾರ ಕಾಳೇನಹಳ್ಳಿ ಉಮೇಶ್, ಪಾಪಣ್ಣ, ಕುಮಾರ್‌, ಜಯರಾಮ್, ಸಿಐಟಿಯು ಮುಖಂಡರಾದ ಗಿರೀಶ್, ಸುರೇಶ್ ತಾಲೂಕಿನ ಕನ್ನಡ ಪರ ಹೋರಾಟಗಾರರು ಸೇರಿದಂತೆ ಇತರರು ಹಾಜರಿದ್ದರು.