ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ

| Published : Nov 28 2024, 12:33 AM IST

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು 69ನೇ ಕನ್ನಡ ರಾಜ್ಯೋತ್ಸವವನ್ನು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು 69ನೇ ಕನ್ನಡ ರಾಜ್ಯೋತ್ಸವವನ್ನು ಕಚೇರಿ ಆವರಣದಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮತ್ತು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅವರನ್ನು ಗೌರವಿಸಲಾಯಿತು.ಈ ವೇಳೆ ಸಂಸ್ಥೆಯು, ಮೈಸೂರು ನಗರದಲ್ಲಿರುವ ವ್ಯಾಪಾರಸ್ತರು, ಉದ್ಯಮ ಕ್ಷೇತ್ರ ಹಾಗೂ ಸೇವಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರನ್ನು ಗುರುತಿಸಿ ಸನ್ಮಾನಿಸಿತು.ಉದ್ಯಮಿ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ರಂಗರಾವ್ ಕೃಷ್ಣ, ಮಹಿಳಾ ಉದ್ಯಮಿ, ವರ್ಷ ಅಸೋಸಿಯೇಟ್ಸ್ ನ ವಿ.ಎನ್. ನಿಧಿಶ್ರೀ, ಕಾವೇರಿ ಫಾಸ್ಟ್ಫುಡ್ ನ ಪ್ರಭಾಕರ್, ದೇವರಾಜ ಮಾರುಕಟ್ಟೆಯ ದಿನಸಿ ವರ್ತಕ ಆನಂದ್ ಕುಮಾರ್, ಮೈಸೂರು ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಎಂ.ಬಿ. ಬಸವರಾಜು ಹಾಗೂ ಲೆಕ್ಕ ಪರಿಶೋಧಕ ನೀರಜ್ ಮಿತ್ರನ್, ಮೆ. ಮಾಧವನ್ ಅಂಡ್ ಕಂಪನಿ ಅವರನ್ನು ಸನ್ಮಾನಿಸಲಾಯಿತು.ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆರ್. ಆನಂದ್, ಗೌರವ ಕಾರ್ಯದರ್ಶಿ ಎ.ಕೆ. ಶಿವಾಜಿ ರಾವ್, ಗೌರವ ಖಜಾಂಚಿ ಎಸ್.ಜೆ. ಅಶೋಕ್, ದೇವರಾಜ ಮಾರುಕಟ್ಟೆ ವ್ಯಾಪಾರಸ್ತರ ಸಂಘದ ಅಧ್ಯಕ್ಷ ಎಸ್. ಮಹದೇವ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ವೈಸ್ ನ ಅಧ್ಯಕ್ಷೆ ವಸಂತಾ ಕುಮಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ. ಕುಮಾರ್, ಪ್ರತಾಪ್ ಕುಮಾರ್, ರವೀಂದ್ರ ಸ್ವಾಮಿ, ಶ್ರೀಶೈಲ ರಾಮಣ್ಣನವರ್, ಆರ್.ಎನ್. ರಮೇಶ್ ಇದ್ದರು.ಹೆಬ್ಬಾಳು, ಯಾದವಗಿರಿ, ಮೇಟಗಳ್ಳಿ ಕೈಗಾರಿಕಾ ಪ್ರದೇಶಗಳ ಸಂಘಗಳ ಪದಾಧಿಕಾರಿಗಳು, ಮೈಸೂರು ಡಿಸ್ಟ್ರಿಕ್ಟ್ ಡಿಸ್ಟ್ರೀಬ್ಯೂಟರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಇದ್ದರು.