ಸಾಹಿತ್ಯ ಪರಿಷತ್ತಿನ ಐದು ವರ್ಷಗಳ ಅವಧಿಯಲ್ಲಿ 18 ತಾಲೂಕು ಸಮ್ಮೇಳನ, 4 ಜಿಲ್ಲಾ ಸಮ್ಮೇಳನ, 4 ಮಕ್ಕಳ ಸಮ್ಮೇಳನ , ಎರಡು ಹೋಬಳಿ ಸಮ್ಮೇಳನಗಳನ್ನು, 32 ಗ್ರಾಮೀಣ ಕಾರ್ಯಕ್ರಮ, ದತ್ತಿ ನಿಧಿ ಸೇರಿದಂತೆ 600ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಕ ಸಾ ಪ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹೇಳಿದರು.

ಬೆಳ್ತಂಗಡಿ: ಸಾಹಿತ್ಯ ಪರಿಷತ್ತಿನ ಐದು ವರ್ಷಗಳ ಅವಧಿಯಲ್ಲಿ 18 ತಾಲೂಕು ಸಮ್ಮೇಳನ, 4 ಜಿಲ್ಲಾ ಸಮ್ಮೇಳನ, 4 ಮಕ್ಕಳ ಸಮ್ಮೇಳನ , ಎರಡು ಹೋಬಳಿ ಸಮ್ಮೇಳನಗಳನ್ನು, 32 ಗ್ರಾಮೀಣ ಕಾರ್ಯಕ್ರಮ, ದತ್ತಿ ನಿಧಿ ಸೇರಿದಂತೆ 600ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಕ ಸಾ ಪ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕ ಹಾಗೂ ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಜಂಟಿ ಆಶ್ರಯದಲ್ಲಿ ನ. 22 ರಂದು ಮುಂಡಾಜೆಯ ಸ್ವಗೃಹ ‘ಪರಂಪರಾ’ದಲ್ಲಿ ನಿವೃತ್ತ ಶಿಕ್ಷಕ, ಕವಿ ಶಂಕರ ಎನ್. ತಾಮನ್ಕರ್ ಅವರು ರಚಿಸಿದ ‘ದೇಶ ಹತ್ತು ಒಂದು ಸುತ್ತು’ ಪ್ರವಾಸ ಕಥನ ಹಾಗೂ ‘ಭಾಮಿನಿ ಶತಕ’ ‘ಕವನ ಸಂಕಲನಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೋಕ್ಸೋ ವಿಶೇಷ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸರಸ್ವತಿ ತಾಮನ್ಕರ್ ಮಾತನಾಡಿ, ಉಚಿತ ಕಾನೂನು ನೆರವು, ಪೋಕ್ಸೋ ಕಾನೂನು, ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡಿದರು.

ನಿತ್ಯ ಜೀವನದಲ್ಲಿ ಆಧ್ಯಾತ್ಮ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದ ಧಾರ್ಮಿಕ ಚಿಂತಕ ನಾವೂರಿನ ಡಾ. ಪ್ರದೀಪ್ ಆಟಿಕುಕ್ಕೆ ಪ್ರಕೃತಿಗೆ ಮಾನವನ ಅಗತ್ಯ ಇಲ್ಲ. ಮನುಷ್ಯ ಪರಿಪೂರ್ಣಗೊಳ್ಳಬೇಕಾದರೆ ಆತ ಪ್ರಕೃತಿಯ ಕುರಿತು ಅರ್ಥ ಮಾಡಿಕೊಳ್ಳುವುದು ಅತಿ ಮುಖ್ಯ ಎಂದರು. ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಶುಭ ಹಾರೈಸಿದರು .

ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿದ್ದರು. ಸಂಚಾಲಕ ನಾಮದೇವ ರಾವ್ ಸ್ವಾಗತಿಸಿ, ಮುಂಡಾಜೆ ಸಿ ಎ ಬ್ಯಾಂಕ್ ನಿರ್ದೇಶಕ ನಾರಾಯಣ ಫಡಕೆ ವಂದಿಸಿದರು. ಪತ್ರಕರ್ತ ಅಶ್ರಫ್ ಆಲಿ ಕುಂಞಿ ನಿರೂಪಿಸಿದರು.

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಬಾಲಕೃಷ್ಣ ಸಹಸ್ರಬುದ್ಧೆ (ಸಾಹಿತ್ಯ), ಚಂದ್ರಕಾಂತ ಪ್ರಭು ( ಸಹಕಾರ), ವಿದ್ಯಾ ಚಂದ್ರಕಾಂತ ಗೋರೆ ಸುಲ್ಕೇರಿ (ಹೈನುಗಾರಿಕೆ-ಸಂಘಟನೆ), ಅಯೂಬ್ ಆಲಿ ಕುಂಞಿ(ತುರ್ತು ಸೇವೆ), ಕೃಷ್ಣಾನಂದ ರಾವ್(ಕ್ರೀಡೆ), ಮತ್ತು ಸದಾನಂದ ಬಿ.,(ಸಾಹಿತ್ಯ) ಅವರ ವಿಶೇಷ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸ್ವಾತಿ ಮತ್ತು ಶಂಕರ್ ಎನ್. ತಾಮನ್ಕರ್ ಸನ್ಮಾನಿತರನ್ನು ಪರಿಚಯಿಸಿದರು. ನವನಿ ಮತ್ತು ಪ್ರವೀಣ್ ದೇವಧರ್ ಸಹಕರಿಸಿದರು. (ಚಿತ್ರ:1 & 2 : ಮುಂಡಾಜೆಯಲ್ಲಿ ೨ ಕೃತಿಗಳ ಲೋಕಾರ್ಪಣೆ ಮತ್ತು ಸಾಧಕರ ಸನ್ಮಾನ ನಡೆಯಿತು )