ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಡೀ ರಾಜ್ಯಕ್ಕೆ ಮಾದರಿ ಸಾಹಿತ್ಯ ಪರಿಷತ್ತು ಎಂಬಂತೆ ಕೆಲಸ ಮಾಡುವ ಮಹದಾಸೆ ನನ್ನದಾಗಿದ್ದು, ತಮ್ಮಗಳ ಅಮೂಲ್ಯ ಸಲಹೆ, ಸಹಕಾರ ಬಹಳ ಮುಖ್ಯ ಎಂದರು. ಇಂತಹ ಪರಿಷತ್ತು ಪ್ರತಿ ಗ್ರಾಮ ಗ್ರಾಮಗಳೀಗೂ ತಲುಪಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರವಿನಾಕಲಗೂಡು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದಂತಹ ಇತಿಹಾಸವಿದ್ದು, ಅಂತಹ ಪವಿತ್ರವಾದ ಸಾಹಿತ್ಯ ಸಂಸ್ಥೆಯನ್ನು ಯಾವುದೇ ರೀತಿಯ ಚ್ಯುತಿ ಬರಬಾರದು. ಇಂತಹ ಪರಿಷತ್ತು ಪ್ರತಿ ಗ್ರಾಮ ಗ್ರಾಮಗಳೀಗೂ ತಲುಪಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರವಿನಾಕಲಗೂಡು ತಿಳಿಸಿದರು.

ತಾಲೂಕಿನ ಶ್ರವಣಬೆಳಗೂಳದ ಮುಖ್ಯ ಅತಿಥಿಗಳ ಪ್ರವಾಸಿಮಂದಿರದಲ್ಲಿ ಸೇರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಂಡರು, ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಷತ್ತು ಕೇವಲ ಕೆಲವೇ ಕೆಲವರಿಗೆ ಸೀಮಿತವಾಗಬಾರದು. ಅದು ಸಾಮಾನ್ಯರು, ಸಾಹಿತ್ಯ ಆಸಕ್ತರು, ಬರಹಗಾರರು, ಲೇಖಕರಿಗೆ, ಕಲಾವಿದರಿಗೆ ಮುಖ್ಯ ಭೂಮಿಕೆಯಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಡೀ ರಾಜ್ಯಕ್ಕೆ ಮಾದರಿ ಸಾಹಿತ್ಯ ಪರಿಷತ್ತು ಎಂಬಂತೆ ಕೆಲಸ ಮಾಡುವ ಮಹದಾಸೆ ನನ್ನದಾಗಿದ್ದು, ತಮ್ಮಗಳ ಅಮೂಲ್ಯ ಸಲಹೆ, ಸಹಕಾರ ಬಹಳ ಮುಖ್ಯ ಎಂದರು. ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಜನತಾದಳದ ಉಪಾಧ್ಯಕ್ಷರಾದ ಚಿಕ್ಕಬಿಳ್ತಿ ಪ್ರವೀಣ್ ಅವರು ಮಾತನಾಡಿ, ಜಗತ್ತಿಗೆ ಅಹಿಂಸಾ ಸಂದೇಶವನ್ನು ನೀಡಿದ ಗೊಮ್ಮಟನ ಕ್ಷೇತ್ರವು ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಪರಿಷತ್ತಿನ ಚಟುವಟಿಕೆಗಳು ಅತ್ಯಂತ ಕ್ರಿಯಾಶೀಲವಾಗಿ ನಡೆಯಲಿ ಎಂದು ತಿಳಿಸಿದರು.

ಸಾಹಿತಿ ಜಯಂತಿ ಚಂದ್ರಶೇಖರ್‌ ಸಭೆಯನ್ನುದ್ದೇಶಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯದ ಕೊಡುಗೆ ಅಪಾರ, ಅಂತಹ ಜೈನ ಸಾಹಿತ್ಯವನ್ನು ದೇಶಕ್ಕೆ ಸಮರ್ಪಿಸಿದ ಬಾಹುಬಲಿಯ ನಾಡಿನಿಂದ ಪ್ರಾರಂಭಿಸಿದ ಪರಿಷತ್ತಿನ ಚುನಾವಣಾ ಪ್ರಚಾರ ಜಿಲ್ಲೆಯೆಲ್ಲೆಡೆ ಗೆಲುವಿನ ಪ್ರಚಾರವಾಗಲಿ. ಪರಿಷತ್ತಿನ ಸಾರಥಿಯಾಗುವ ತಾವುಗಳು ಮಹಿಳಾ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯವನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಪರಿಶ್ರಮಿಸಬೇಕು. ತಮ್ಮ ಪಾಡಿಗೆ ಎಲೆಮರೆ ಕಾಯಿಯಂತೆ ಬರವಣಿಗೆ ಮಾಡುತ್ತಿರುವ ಪ್ರತಿಭಾವಂತರನ್ನು ಗುರುತಿಸಿ ಅವರುಗಳಿಗೆ ಮುಖ್ಯ ವೇದಿಕೆಯನ್ನು ಕೊಡುವ, ಅವರ ಪುಸ್ತಕಗಳನ್ನು ಪ್ರಕಟಿಸಿ ಅವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರಾದ ವಸಂತಪ್ಪ ಅವರು ಮಾತನಾಡಿ ಪರಿಷತ್ತನ್ನು ಕಟ್ಟಲು ಸಾಹಿತ್ಯದ ಮನಸ್ಸಿನವರು ಅಧ್ಯಕ್ಷರಾಗಬೇಕು ಎಂಬುದು ಎಲ್ಲರ ಆಶಯವಾಗಿದ್ದು, ಅಂತಹ ಸಾಹಿತ್ಯದ ಮನಸ್ಸು ಹಾಗೂ ಪರಿ?ತ್ತನ್ನು ಕಟ್ಟುವ ಶಕ್ತಿ ರವಿನಾಕಲಗೂಡು ಅವರಿಗೆ ಇರುವುದನ್ನು ನಾವುಗಳು ಗಮನಿಸಿದ್ದೇವೆ. ಸಂಘಟನಾ ಸಾಮರ್ಥ್ಯವಿರುವ ರವಿನಾಕಲಗೂಡು ಅವರು ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತ ಎಂಬುದನ್ನೆ ಅರಿತು ಇಷ್ಟುದೊಡ್ಡ ಸಂಖ್ಯೆಯಲ್ಲಿ ಸಾಹಿತ್ಯ ಪರಿ?ತ್ತಿನ ಮುಖಂಡರುಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದಾರೆ. ನಿಮ್ಮ ಗೆಲುವಿನಲ್ಲಿ ನಾವುಗಳು ಸದಾ ಜೊತೆಗಿರುತ್ತೇವೆ, ಅದರಂತೆಯೇ ನಾವುಗಳು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಯನ್ನು ಉಳಿಸಿಕೊಳ್ಳಿ ಎಂದು ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಸಿಂಹಾದ್ರಿ ಶಿಕ್ಷಣ ಸಂಸ್ಥೆಯಯ ಅಧ್ಯಕ್ಷರಾದ ಡಾ.ಸಿಂಹಾದ್ರಿ ಮಂಜುನಾಥ್ ಮಾತನಾಡಿ, ಶಾಲೆಗಳಲ್ಲಿ ಹೆಚ್ಚೆಚ್ಚು ಸಾಹಿತ್ಯ ಚಟುವಟಿಕೆಗಳು ನಡೆಯುವಂತೆ ಗಮನಹರಿಸಲಿ. ಮಕ್ಕಳಲ್ಲಿ ಸಾಹಿತ್ಯವನ್ನು ತುಂಬುವಂತ ಅರ್ಥಪೂರ್ಣ ಚಟುವಟಿಕೆಗಳನ್ನು ಪರಿಷತ್ತು ನಡೆಸುವಂತಾಗಲಿ. ಪರಿಷತ್ತಿನ ಅಧ್ಯಕ್ಷ ಸ್ಥಾನ ಜವಾಬ್ದಾರಿಯ ಸ್ಥಾನವಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ರವಿನಾಕಲಗೂಡು ಅವರಿಗೆ ಇರುವುದೆಂದು ನಂಬಿ ಶ್ರವಣಬೆಳಗೂಳ ಹೋಬಳಿಯ ಪರಿಷತ್ತಿನ ಸದಸ್ಯರೆಲ್ಲರೂ ಒಮ್ಮತದಿಂದ ಬೆಂಬಲಿಸೋಣಾ ಎಂದು ತಿಳಿಸಿದರು. ಕವಿಯತ್ರಿ ಪ್ರೇಮಾಪ್ರಶಾಂತ ಮಾತನಾಡಿ, ರವಿನಾಕಲಗೂಡು ಅವರ ಸಾರಥ್ಯದಲ್ಲಿ ನಗರದಿಂದ ಗ್ರಾಮಗಳವರೆಗೂ ಪರಿಷತ್ತು ಬರುತ್ತದೆ ಎಂಬ ನಂಬಿಕೆ ನಮಗಿದೆ. ಗ್ರಾಮ ಗ್ರಾಮಗಳಲ್ಲಿ ಸಾಹಿತ್ಯ ಚಟುವಟಿಕೆ ನಡೆದಾಗ ಮಾತ್ರ ಪರಿಷತ್ತು ಉಳಿಯಲು ಸಾಧ್ಯವಾಗುತ್ತದೆ. ಹಳ್ಳಿಗಳ ಶಾಲೆಗಳತ್ತಲೂ ಪರಿಷತ್ತನ್ನು ಕೊಂಡೊಯ್ಯುವ ಕೆಲಸವಾಗಲಿ, ನಿಮ್ಮಗಳ ಬೆಂಬಲಕ್ಕೆ ಸದಾ ಎಲ್ಲರು ಜೊತೆಗಿರುತ್ತೇವೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಾವಗಲ್ ಪ್ರಸನ್ನಕುಮಾರ್, ಅಧ್ಯಕ್ಷ ಸ್ಥಾನವನ್ನು ಪದವಿ ಎಂದು ತಿಳಿಯದೇ ಅದೊಂದು ಸೇವಾ ಸ್ಥಾನ ಎಂದು ತಿಳಿಯಬೇಕು ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿದ್ದ ಎಲ್ಲರನ್ನು ಮುಖಂಡರಾದ ಎಸ್.ಆರ್.ರಮೇಶ್ ಸ್ವಾಗತಿಸಿದರು. ಸಭೆಯಲ್ಲಿ ಉಪನ್ಯಾಸಕರಾದ ಎಸ್. ಬಿ. ಲೋಕೇಶ್, ನಿವೃತ್ತ ಶಿಕ್ಷಕರಾದ ಶಿವಕುಮಾರ್, ಶಿಕ್ಷಕರಾದ ಪ್ರಶಾಂತ್, ಹಿರಿಯರಾದ ಪುರುಷತ್ತಮ್, ಹಾಲು ಮತ್ತಿಘಟ್ಟ ಶಿವಣ್ಣ, ಮುಖಂಡರಾದ ಪರಮ ದೇವರಾಜೇಗೌಡ, ರಾಘವ, ಎ.ಪಿ.ಎಂ.ಸಿ ಅಶೋಕ್ ಹಾಗೂ ಅನೇಕ ಮುಖಂಡರು ಭಾಗವಹಿಸಿದ್ದರು.