ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರು, ಮಾಜಿ ಸಚಿವರು, ಶತಾಯುಷಿಗಳಾದ ಡಾ.ಭೀಮಣ್ಣ ಖಂಡ್ರೆ ಲಿಂಗೈಕ್ಯರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಅವರ ಅಗಲಿಕೆಯಿಂದ ಕೇವಲ ವೀರಶೈವ ಲಿಂಗಾಯತರಿಗೆ ಅಷ್ಟೆಅಲ್ಲ, ಕರ್ನಾಟಕದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಂಗಮವಾಡಿ ಕಾಶಿ ಪೀಠ(ವಾರಣಾಸಿ) ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು ಸಂತಾಪ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರು, ಮಾಜಿ ಸಚಿವರು, ಶತಾಯುಷಿಗಳಾದ ಡಾ.ಭೀಮಣ್ಣ ಖಂಡ್ರೆ ಲಿಂಗೈಕ್ಯರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಅವರ ಅಗಲಿಕೆಯಿಂದ ಕೇವಲ ವೀರಶೈವ ಲಿಂಗಾಯತರಿಗೆ ಅಷ್ಟೆಅಲ್ಲ, ಕರ್ನಾಟಕದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಂಗಮವಾಡಿ ಕಾಶಿ ಪೀಠ(ವಾರಣಾಸಿ) ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು ಸಂತಾಪ ಸೂಚಿಸಿದ್ದಾರೆ.ವಿಡಿಯೋ ಹೇಳಿಕೆಯ ಬಿಡುಗಡೆಯಲ್ಲಿ ಸಂತಾಪ ಸೂಚಿಸಿರುವ ಜಗದ್ಗುರುಗಳು, ಭೀಮಣ್ಣ ಖಂಡ್ರೆಯವರು ರಾಜಕೀಯ ಕ್ಷೇತ್ರದಲ್ಲಿ ಇದ್ದರೂ ಪದ್ಮಪತ್ರಮಿವಾಂಭಸಾ ಕಮಲ, ನೀರಿನಲ್ಲಿದ್ದರೂ ನೀರಿಗೆ ಅಂಟಿಕೊಳ್ಳದಂತೆ ಯಾವುದೇ ತರವಾದ ರಾಜಕೀಯ ಭ್ರಷ್ಟಾಚಾರಕ್ಕೆ ಅಂಟಿಕೊಳ್ಳದ ಶುದ್ಧ, ಧೀರ ಗಂಭೀರ ರಾಜಕೀಯ ಮಾಡಿದವರು. ಅವರ ಸ್ವಸ್ಥ ಮನಸ್ಸಿನ ಪರಿಣಾಮವಾಗಿ ಅವರು ಶತಾಯುಷಿಗಳಾಗಿದ್ದು ಇದಕ್ಕೆ ಸಾಕ್ಷಿಯಾಗಿದೆ. ಅವರ ಕಾಲದೊಳಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಒಂದು ಭವ್ಯವಾಗಿರುವ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಪಂಚಪೀಠದ ಜಗದ್ಗುಗಳ ಆಶೀರ್ವಾದ ಜೊತೆಗೆ ಉಳಿದೆಲ್ಲ ಮಠಾಧಿಪತಿಗಳ ಹಾಗೂ ಸಮಾಜದ ದಾನಿಗಳ ಬಹುದೊಡ್ಡ ದೇಣಿಗೆಯಿಂದ ಅಜರಾಮರವಾಗಿರುವಂತ ಕಾರ್ಯವನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರ ಸಂಖ್ಯೆಯಲ್ಲಿ ಅವರು ಅತ್ಯಂತ ಉಲ್ಲೇಖನೀಯ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಅಗಲಿಕೆಯಿಂದ ದುಃಖತಪ್ತವಾದ ಖಂಡ್ರೆ ಪರಿವಾರಕ್ಕೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ಜಗದಾದಿ ಜಗದ್ಗುರು ಪಂಚಾಚಾರ್ಯರು ಅನುಗ್ರಹಿಸಲೆಂದು ಈ ಸಂದರ್ಭದಲ್ಲಿ ಆಶೀರ್ವದಿಸುತ್ತೇವೆ ಎಂದು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
