ಕಟೀಲು: 60ನೇ ವರ್ಷದ ಕೊಡತ್ತೂರು ದಸರಾ ಸಂಭ್ರಮ

| Published : Oct 10 2024, 02:31 AM IST

ಸಾರಾಂಶ

ನವರಾತ್ರಿ ಮೆರವಣಿಗೆ ಸಮಿತಿ ಕೊಡೆತ್ತೂರು ಕಟೀಲು ಮತ್ತು ಊರ ಹತ್ತು ಸಮಸ್ತರ ೬೦ ನೇ ವರ್ಷದ ಕೊಡೆತ್ತೂರು ದಸರಾ ಸಂಭ್ರಮದಲ್ಲಿ, ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇಘ ಕೊಡೆತ್ತೂರು, ಉದ್ಯಮಿ ಯಜ್ಞೇಶ್ವರ್ ಬರ್ಕೆ ಮತ್ತು ಕಳೆದ ೬೦ ವರ್ಷಗಳೀಂದ ಮೆರವಣಿಗೆಯಲ್ಲಿ ನಿರಂತರ ಸಹಕಾರ ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಹುಲಿವೇಷ ಕೇವಲ ಮನರಂಜನೆ ಮಾತ್ರ ಸೀಮಿತವಾಗದೆ ಧಾರ್ಮಿಕ ನಂಬಿಕೆಯನ್ನು ಒಳಗೊಂಡಿದೆ ಎಂದು ಕಟೀಲು ದೇವಳದ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದ್ದಾರೆ.

ನವರಾತ್ರಿ ಮೆರವಣಿಗೆ ಸಮಿತಿ ಕೊಡೆತ್ತೂರು ಕಟೀಲು ಮತ್ತು ಊರ ಹತ್ತು ಸಮಸ್ತರ ೬೦ ನೇ ವರ್ಷದ ಕೊಡೆತ್ತೂರು ದಸರಾ ಸಂಭ್ರಮದಲ್ಲಿ ಹಿರಿಯ ಸೇವಾ ಕಾರ್ಯಕರ್ತರಿಗೆ ಗೌರವಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚಿನ ಭಕ್ತರು ನಿರಂತರ ವೇಷ ಹಾಕಿ ಈ ಸೇವೆ ಮಾಡಿಕೊಂಡಿದ್ದಾರೆ, ಭಕ್ತರು ತಮ್ಮ ಸಮಸ್ಯೆಗಳಿಗೆ ವೇಷ ಹಾಕುತ್ತೇನೆಂದು ಹರಕೆ ಹೊತ್ತು, ಸಮಸ್ಯೆ ಪರಿಹಾರ ಕಂಡದ ಉದಾಹರಣೆಗಳು ಅನೇಕವಿದೆ ಎಂದರು.

ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇಘ ಕೊಡೆತ್ತೂರು, ಉದ್ಯಮಿ ಯಜ್ಞೇಶ್ವರ್ ಬರ್ಕೆ ಮತ್ತು ಕಳೆದ ೬೦ ವರ್ಷಗಳೀಂದ ಮೆರವಣಿಗೆಯಲ್ಲಿ ನಿರಂತರ ಸಹಕಾರ ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದರು.

ಕಟೀಲು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪ್ರಥ್ವಿರಾಜ್ ಆಚಾರ್ಯ, ಭುವನಾಭಿರಾಮ ಉಡುಪ ಕೊಡೆತ್ತೂರು, ಬರ್ಕೆ ಪ್ರಂಡ್ಸ್ ನ ಯಜ್ಜೇಶ್ವರ ಬರ್ಕೆ, ಕೊಡೆತ್ತೂರು ಗುತ್ತು ಕಿಶೋರ್ ಶೆಟ್ಟಿ, ಅರುಣ್ ಶೆಟ್ಟಿ ದೇವಸ್ಯ ಕೊಡೆತ್ತೂರು ಗುತ್ತು, ಉದ್ಯಮಿ ಮಾಧವ ಕಾಮತ್, ಎಕ್ಕಾರು ಕೊಡಮಣಿತ್ತಾಯ ಕ್ಷೇತ್ರ ಆಡಳಿತ ಮುಕ್ತೇಸರ ತಿಮ್ಮ ಕಾವ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ಕಟೀಲು ಮೆರವಣಿಗೆ ಸಮಿತಿಯ ಅಧ್ಯಕ್ಷ ಪ್ರವೀಣ್ , ಎಕ್ಕಾರು ನವರಾತ್ರಿ ಮೆರವಣಿಗೆ ಸಮಿತಿ ಅಧ್ಯಕ್ಷ ಧನಂಜಯ ರೈ, ಉದ್ಯಮಿ ಚಂದ್ರಶೇಖರ ಬೆಲ್ಚಡ, ಶ್ರೀಧರ ಅಳ್ವ ಮಾಗಂದಡಿ, ಶಿವರಾಮ್ ಶೆಟ್ಟಿ ಪ್ರಭಾಕರ ಶೆಟ್ಟಿ ಮೂಡುಮನೆ, ಈಶ್ವರ್ ಕಟೀಲು ಸಂಸ್ಥೆ ಅಧ್ಯಕ್ಷ ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರುಗುತ್ತು, ಮುಂಬೈ ಸಮಿತಿ ಅಧ್ಯಕ್ಷ ಬಾಸ್ಕರ ಶೆಟ್ಟಿ ಕೊಡೆತ್ತೂರು ಸಾಂತ್ಯ ಮತ್ತಿತರರು ಇದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.