ಕಾಟಿಪಳ್ಳ: ಕೇಶವ ಶಿಶುಮಂದಿರ ಕಟ್ಟಡ ಉದ್ಘಾಟನೆ

| Published : Jan 21 2025, 12:35 AM IST

ಸಾರಾಂಶ

ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ನೇತೃತ್ವದಲ್ಲಿ ಎಂಆರ್‌ಪಿಎಲ್‌ ಸಿಎಸ್‌ಆರ್‌ ಅನುದಾನ, ಮಂಗಳೂರು ಮಹಾನಗರ ಪಾಲಿಕೆಯ ಅನುದಾನ ಮತ್ತು ದಾನಿಗಳ ಸಹಕಾರದಿಂದ 68 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಶ್ರೀ ಜಾರಂದಾಯ ಕೇಶವ ಶಿಶುಮಂದಿರದ ನೂತನ 3 ಅಂತಸ್ತಿನ ಕಟ್ಟಡ ಉದ್ಘಾಟನೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ ಪರಂಪರೆಯಿಂದ ಬಂದಿರುವ ಆಚರಣೆಗಳನ್ನು ರೂಢಿಸಿಕೊಂಡು ಧರ್ಮವನ್ನು ಬಲಪಡಿಸಬೇಕು. ದೇಶದ ಪ್ರತಿಯೊಬ್ಬರಿಗೂ ದೇಶ ಮತ್ತು ಧರ್ಮ ಎರಡು ಕಣ್ಣುಗಳೆಂಬ ದೃಷ್ಟಿಕೋನವಿದ್ದರೆ ಸನಾತನ ಧರ್ಮ ಮತ್ತು ದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ನೇತೃತ್ವದಲ್ಲಿ ಎಂಆರ್‌ಪಿಎಲ್‌ ಸಿಎಸ್‌ಆರ್‌ ಅನುದಾನ, ಮಂಗಳೂರು ಮಹಾನಗರ ಪಾಲಿಕೆಯ ಅನುದಾನ ಮತ್ತು ದಾನಿಗಳ ಸಹಕಾರದಿಂದ 68 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಶ್ರೀ ಜಾರಂದಾಯ ಕೇಶವ ಶಿಶುಮಂದಿರದ ನೂತನ 3 ಅಂತಸ್ತಿನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಮೇಯರ್ ಮನೋಜ್ ಕುಮಾರ್, ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಉದ್ಯಮಿಗಳಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ರಾಜೇಂದ್ರ ಶೆಟ್ಟಿ ಕುಡ್ತಿಮಾರು ಗುತ್ತು, ಕನ್ಯಾನ ಸದಾಶಿವ ಶೆಟ್ಟಿ, ಎಂಆರ್‌ಪಿಎಲ್‌ ಮ್ಯಾನೇಜಮೆಂಟ್ ಸ್ಟಾಫ್‌ ಎಸೋಸಿಯೇಷನ್ ಅಧ್ಯಕ್ಷ ಸಂಪತ್ ರೈ, ಜ್ಯೋತಿಷಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್, ಪ್ರದ್ಯುಮ್ನ ರಾವ್ ಶಿಬರೂರು, ಮುಂಬೈಯ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಕಾಟಿಪಳ್ಳ ತಣ್ಣೀರುಬಾವಿ, ಜಾರಂತಾಯ ದೈವಸ್ಥಾನದ ಮೊಕ್ತೇಸರ ಕೇಶವ ಸನಿಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪ್ರಕಾಶ್‌ ಪಿ ಎಸ್, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಗಣೇಶಪುರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೆಂದ್ರ ಗಣೇಶಪುರ, ಮಂಗಳೂರು ಸೇವಾ ಲೈಫ್‌ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಉದ್ಯಮಿ ವಿನೀತ್ ಶೆಟ್ಟಿ ಪರ್ಲಬೈಲ್ ಶಿಬರೂರು, ಉದ್ಯಮಿ ಸತೀಶ್ ಮುಂಚೂರು, ಗುಜರಾತ್ ಉದ್ಯಮಿ ವಿಕಾಸ್ ಪೈ ಚಾಂಗ, ಮಂಗಳಪೇಟೆ ಶಾರದ ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಕಾಟಿಪಳ್ಳ ನಿತ್ಯಾನಂದ ಭಜನಾ ಮಂದಿರ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿಗಾರ್ , ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ ಅಧ್ಯಕ್ಷ ಜಯಕುಮಾರ್, ಜಾರಂದಾಯ ಕೇಶವ ಶಿಶು ಮಂದಿರದ ನೂತನ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ , ಕೇಶವ ಶಿಶುಮಂದಿರದ ಅಧ್ಯಕ್ಷ ಮಧುಸೂದನ್ ರಾವ್, ಸುರತ್ಕಲ್ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಭಾಸ್ಕರ್ ರಾವ್ ಬಾಳ, ವರಮಹಾಲಕ್ಷ್ಮಿ ಪೂಜನ ಸಮಿತಿ ಅಧ್ಯಕ್ಷೆ ರೇಷ್ಮಾ ಪ್ರಸನ್ನ ಮತ್ತಿತರರಿದ್ದರು.

ಕಾಟಿಪಳ್ಳ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿದರು. ಅಶೋಕ್ ಕೃಷ್ಣಾಪುರ ನಿರೂಪಿಸಿದರು. ಲೋಕನಾಥ್ ಭಂಡಾರಿ ವಂದಿಸಿದರು.