ಸಾರಾಂಶ
ತಲಕಾವೇರಿಯಲ್ಲಿ ಜಾತ್ರೆ ನಡೆದಿದ್ದು ಭಕ್ತರಿಂದ ಈ ವರೆಗೆ ಸುಮಾರು 18. 05 ಲಕ್ಷ ರು. ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. 
ಕನ್ನಡಪ್ರಭ ವಾರ್ತೆ ಮಡಿಕೇರಿ
ತುಲಾ ಸಂಕ್ರಮಣ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಜಾತ್ರೆ ನಡೆದಿದ್ದು, ಭಕ್ತರಿಂದ ಈ ವರೆಗೆ ಸುಮಾರು ರು.18.05 ಲಕ್ಷ ಹಣ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ.ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಯ ನಂತರ ಪ್ರಥಮ ಹುಂಡಿ ಪರ್ಕಾವಣೆಯನ್ನು ಇತ್ತೀಚೆಗೆ ಭಾಗಮಂಡಲ ಕೆನರಾ ಬ್ಯಾಂಕ್ ಸಿಬ್ಬಂದಿ, ಭಾಗಮಂಡಲ ಆರಕ್ಷಕ ಠಾಣಾ ಸಿಬ್ಬಂದಿಯವರು, ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳು, ತಕ್ಕಮುಖ್ಯಸ್ಥರು ಮತ್ತು ಸಿಬ್ಬಂದಿ ಮತ್ತು ಸ್ವಯಂ ಸೇವಕರು ಹಾಗೂ ಭಾಗಮಂಡಲ ಕಂದಾಯ ಇಲಾಖೆ ಸಿಬ್ಬಂದಿಯವರ ಸಮಕ್ಷಮ ವೀಡಿಯೋ ಚಿತ್ರೀಕರಣದೊಂದಿಗೆ ಹುಂಡಿ ಪರ್ಕಾವಣೆ ಯನ್ನು ನಡೆಸಲಾಗಿದೆ.
ಶ್ರೀ ತಲಕಾವೇರಿ ದೇವಾಲಯದಲ್ಲಿ ರು. 7,27,389, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ರು..5,44,333,ಅನ್ನ ಸಂತರ್ಪಣಾ ನಿಧಿ ರು.2,52,867, ಇ-ಹುಂಡಿಯಲ್ಲಿ ರು.2,80,411 ಹಣ ಸಂಗ್ರಹವಾಗಿದೆ ಎಂದು ಶ್ರೀ ತಲಕಾವೇರಿ ಹಾಗೂ ಭಾಗಮಂಡಲದ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧಿಕಾರಿ ಚಂದ್ರಶೇಖರ ಮಾಹಿತಿ ನೀಡಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))