ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ ಪುಸ್ತಕ ಬಿಡುಗಡೆ

| Published : Jul 09 2024, 12:50 AM IST

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಾಸನ ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಹಸಿರು ಭೂಮಿ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರು ರಚಿಸಿರುವ "ಕಾವೇರಿ ವಿವಾದ - ಒಂದು ಐತಿಹಾಸಿಕ ಹಿನ್ನೋಟ "ಹೆಸರಿನ ಪುಸ್ತಕ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ ಎಂದು ನಾವೆಲ್ಲಾ ಹೇಳುತ್ತೇವೆ. ಆದರೇ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ನೀರು ಬಿಡುತ್ತಲೆ ಬರಲಾಗಿದ್ದು, ಈ ಬಗ್ಗೆ ಪ್ರಜ್ಞಾವಂತರಾಗಿ ಕಣ್ಣು ತೆರೆಸುವ ಕೆಲಸವನ್ನು ಕಾವೇರಿ ವಿವಾದ ಎನ್ನುವ ಪುಸ್ತಕದ ಕೃತಿಕರ್ತರಾದ ಚಂದ್ರಶೇಖರ್ ಹೊರ ತಂದಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಾಸನ ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಹಸಿರು ಭೂಮಿ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರು ರಚಿಸಿರುವ "ಕಾವೇರಿ ವಿವಾದ - ಒಂದು ಐತಿಹಾಸಿಕ ಹಿನ್ನೋಟ "ಹೆಸರಿನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಮತ್ತು ಮೈಸೂರಿನ ಕಿಂಗ್‌ಡಂನಲ್ಲಿ ಒಪ್ಪಂದಗಳಾದವು. ಮೈಸೂರಿನ ಮಹಾರಾಜರ ಮೇಲೆ ಬಹಳ ಒತ್ತಡಗಳಿದ್ದವು. ಇಲ್ಲವಾದರೇ ಮೈಸೂರು ಸಂಸ್ಥಾನ ಹೋಗಿ ಬ್ರಿಟಿಷರ ಆಳ್ವಿಕೆ ಬರುತಿತ್ತು ಎನ್ನುವ ವಿಚಾರವನ್ನು ಇತಿಹಾಸದ ಚರಿತ್ರೆಯಲ್ಲಿ ತಿಳಿದುಕೊಂಡಿದ್ದೇವೆ. ಆ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಅಂದಿನ ದಿನಗಳಿಂದಲು ಸಹ ನೀರು ಬಿಡಬೇಕಾಗಿದೆ. ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ ಎಂದು ನಾವೆಲ್ಲಾ ಹೇಳುತ್ತಿದ್ದೇವೆ. ಎಲ್ಲರೂ ಕೂಡ ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಅನುಗುಣವಾಗಿ ನೀರನ್ನು ಬಿಟ್ಟುಕೊಂಡು ಬರಲಾಗಿದೆ ಎಂದರು.

ನೀರನ್ನು ಬಳಕೆ ಮಾಡುವುದಕ್ಕೂ ನಾವು ಅಣೆಕಟ್ಟು ನಿರ್ಮಿಸುವಂತಿಲ್ಲ. ಇನ್ನು ಪ್ರವಾಹದ ನೀರು ಇತರೆ ಬಂದ ನೀರನ್ನು ಮೇಕೆದಾಟುನಲ್ಲಿ ಸ್ಟೋರೆಜ್ ಮಾಡಿ ಕೃಷಿಗೆ ಅಲ್ಲದಿದ್ದರೂ ಕುಡಿಯುವುದಕ್ಕೂ ಬಳಕೆ ಮಾಡಲು ಯೋಜನೆಯಲ್ಲಿ ದೊಡ್ಡ ವಿರೋಧ ವ್ಯಕ್ತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹೆಚ್ಚು ನೀರು ನಮ್ಮಲ್ಲಿ ಉತ್ಪತ್ತಿ ಆಗುತ್ತದೆ ಎಂದು ಘೋರ ಅನ್ಯಾಯ ಈ ತೀರ್ಪುನಿಂದ ಆಗಿದೆ. ಪ್ರಜ್ಞಾವಂತರಾಗಿ ಕಣ್ಣು ತೆರೆಸುವ ಕೆಲಸವನ್ನು ಕಾವೇರಿ ವಿವಾದ ಪುಸ್ತಕ ಕೃತಿಕರ್ತರಾದ ಸಿ. ಚಂದ್ರಶೇಖರ್ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ನೆಲ ಜಲ ಭಾಷೆ ವಿಚಾರದಲ್ಲಿ ಹೆಚ್ಚು ಜನರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿಬೇಕು ಎಂದು ಹೇಳಿದರು. ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಎಷ್ಟು ಸಮಸ್ಯೆ ಆಗಿದೆ. ಈ ಬಗ್ಗೆ ಅನೇಕ ತೀರ್ಮಾನಗಳನ್ನು ವಿಶ್ಲೇಷಿದ್ದಾರೆ. ಕರ್ನಾಟಕದ ನೀರು ಹರಿವು ಮಾಡಿದ್ದರಿಂದ ತಮಿಳು ನಾಡಿನ ಜನಜೀವನ ಉತ್ತಮ ಆಗಿದೆ. ತಮಿಳು ನಾಡಿನಲ್ಲಿ ಮೂರು ಬೆಳೆ ಬೆಳೆಯುತ್ತಾರೆ. ನಮ್ಮ ಕರ್ನಾಟಕದಲ್ಲಿ ರೈತರು ಬೆಳೆಯುವ ಬೆಳೆಗೆ ನೀರು ತೀರ ಕಡಿಮೆ ಆಗಿದೆ. ಈ ಕಾವೇರಿ ಹೋರಾಟದಲ್ಲಿ ನಮ್ಮ ಸಹಕಾರ ಇದ್ದೆ ಇರುತ್ತದೆ ಎಂದರು.

ರೈತ ಚಳವಳಿ ಹೋರಟಗಾರ ಬೋರಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಲ್ಲಿವರೆಗೂ ಒಂದು ಕಮಿಟಿ ಮಾಡಿಲ್ಲ. ಕೂಡಲೇ ಪಕ್ಷತೀತವಾಗಿ ಕಮಿಟಿ ಮಾಡಲು ಅವಕಾಶ ಕೊಡಬೇಕು. ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು. ತಮಿಳು ನಾಡಿನಲ್ಲಿ ಕಾವೇರಿ ಬಿಟ್ಟು ಬೇರೆ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ. ತಮಿಳು ನಾಡಿಗೆ ಕುಡಿಯುವ ನೀರಿಗೋಸ್ಕರ ನಮ್ಮ ಬೆಳೆ ಹಾಳುಮಾಡಿಕೊಂಡಿದ್ದೇವೆ ಎಂದು ಹೇಳಿದರು.

ರೈತ ಮುಖಂಡರು ಹಾಗು ಅರ್ಥಶಾಸ್ತ್ರಜ್ಞರೂ ಪ್ರೊ. ಕೆ.ಸಿ. ಬಸವರಾಜು ಮಾತನಾಡಿ, ಈ ಪುಸ್ತಕದಲ್ಲಿ ಕಾವೇರಿ ವಿವಾದ ಕುರಿತು ಐತಿಹಾಸಿಕ ದಾಖಲೆ ಮುದ್ರಿಸಲಾಗಿದೆ. ಓರ್ವ ಪೊಲೀಸ್ ಅಧಿಕಾರಿಯಾಗಿ ನಿವೃತ್ತಿ ನಂತರ ಕಾವೇರಿ ವಿವಾದ ಕುರಿತು ಪುಸ್ತಕ ಬರೆದಿದ್ದಾರೆ. ಕಾವೇರಿ ಕುಟುಂಬ ಬಂದಿದ್ದು, ತಮಿಳು ಮತ್ತು ಕರ್ನಾಟಕ ನಡುವೆ ಜನಾಂಗೀಯ ಸಂಘರ್ಷ ಇದ್ದು, ಇದೆ ವೇಳೆ ತಮಿಳುನಾಡಿನಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದ ಸಭೆ ಬಗ್ಗೆ ತಿಳಿಸಿದರು. ತೀರ್ಪು ಬಗ್ಗೆ ಎರಡು ಕಡೆಯಿಂದಲೂ ನೀಡಲಾಯಿತು. ನಮ್ಮ ಸರಕಾರಗಳು ನಮ್ಮ ನಿರೀಕ್ಷೆಯಂತೆ ಸ್ಪಂದಿಸಿತು. ತಮಿಳುನಾಡಿನ ರೈತರು ತಮ್ಮ ತೀರ್ಮಾನ ತಿಳಿಸಿದರು. ಕಾವೇರಿ ಕುಟುಂಬ ಪ್ರಯತ್ನ ಮಾಡಿದರೂ ನಿರೀಕ್ಷಿತ ಗುರಿ ನಾವು ಮುಟ್ಟಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಹಸಿರುಭೂಮಿ ಪ್ರತಿಷ್ಠಾನ ಅಧ್ಯಕ್ಷರಾದ ಆರ್.ಪಿ. ವೆಂಕಟೇಶ್ ಮೂರ್ತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ ಪ್ರಸನ್ನ, ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಹಿರಿಯ ರೈತ ಹೋರಾಟಗಾರ ಮಂಜುನಾಥ್ ದತ್ತ ಉಪಸ್ಥಿತರಿದ್ದರು.