ರೈತರ ಕಾಮಗಾರಿಗಳ ಸಪ್ಲೆ ಬಿಲ್ ಲೋಪ ಸರಿಪಡಿಸಿ ಖಾತೆಗೆ ಹಣ: ಮೋಹನ್ ಕುಮಾರ್ ಭರವಸೆ

| Published : Jul 09 2024, 12:50 AM IST

ರೈತರ ಕಾಮಗಾರಿಗಳ ಸಪ್ಲೆ ಬಿಲ್ ಲೋಪ ಸರಿಪಡಿಸಿ ಖಾತೆಗೆ ಹಣ: ಮೋಹನ್ ಕುಮಾರ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಂತ್ರಿಕ ಲೋಪದಿಂದ ರೈತರಿಗೆ ಸಪ್ಲೆ ಬಿಲ್ ಸಂದಾಯವಾಗಿಲ್ಲ. ತಾಂತ್ರಿಕ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸಿಲು ಜಿಪಂ ಮುಖ್ಯ ಕಾರ್ಯದರ್ಶಿಗಳು ನನ್ನ ನೇತೃತ್ವದಲ್ಲಿ ಪರಿಶೀಲನಾ ತಂಡವನ್ನು ಕಳುಹಿಸಿದ್ದಾರೆ. ಇಂದಿನಿಂದ ಎಲ್ಲಾ ಸಪ್ಲೆ ಬಿಲ್ ಪೈಲುಗಳು ಕ್ಲಿಯರ್ ಆಗುವವರೆಗೂ ನಮ್ಮ ತಂಡ ತೋಟಗಾರಿಕಾ ಇಲಾಖೆ ಕಡತಗಳನ್ನು ಪರಿಶೀಲಿಸಿ ಸರಿಪಡಿಸುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನರೇಗಾ ಯೋಜನೆಯಡಿ ತೋಟಗಾರಿಕಾ ಇಲಾಖೆ ಮೂಲಕ ರೈತರು ನಿರ್ವಹಿಸಿರುವ ಎಲ್ಲಾ ಕಾಮಗಾರಿಗಳ ಸಪ್ಲೆ ಬಿಲ್ ಲೋಪವನ್ನು ಸರಿಪಡಿಸಿ ರೈತರ ಖಾತೆಗೆ ಹಣ ಹಾಕುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಪಂ ಸಹಾಯಕ ಕಾರ್ಯದರ್ಶಿ ಮೋಹನ್ ಕುಮಾರ್ ಭರವಸೆ ನೀಡಿದರು.

ಪಟ್ಟಣದ ತೋಟಗಾರಿಕಾ ಇಲಾಖೆಯಲ್ಲಿ ಸಪ್ಲೆ ಬಿಲ್ ಲೋಪದಿಂದ ರೈತರಿಗೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಹಣ ಸಂದಾಯವಾಗದಿರುವ ಬಗ್ಗೆ ಪ್ರಶ್ನಿಸಿದ ರೈತ ನಿಯೋಗದೊಂದಿಗೆ ಮಾತನಾಡಿದರು.

ತಾಂತ್ರಿಕ ಲೋಪದಿಂದ ರೈತರಿಗೆ ಸಪ್ಲೆ ಬಿಲ್ ಸಂದಾಯವಾಗಿಲ್ಲ. ತಾಂತ್ರಿಕ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸಿಲು ಜಿಪಂ ಮುಖ್ಯ ಕಾರ್ಯದರ್ಶಿಗಳು ನನ್ನ ನೇತೃತ್ವದಲ್ಲಿ ಪರಿಶೀಲನಾ ತಂಡವನ್ನು ಕಳುಹಿಸಿದ್ದಾರೆ. ಇಂದಿನಿಂದ ಎಲ್ಲಾ ಸಪ್ಲೆ ಬಿಲ್ ಪೈಲುಗಳು ಕ್ಲಿಯರ್ ಆಗುವವರೆಗೂ ನಮ್ಮ ತಂಡ ತೋಟಗಾರಿಕಾ ಇಲಾಖೆ ಕಡತಗಳನ್ನು ಪರಿಶೀಲಿಸಿ ಸರಿಪಡಿಸುತ್ತಿದೆ ಎಂದು ತಿಳಿಸಿದರು.

ಮುಂದಿನ 12 ದಿನಗಳಲ್ಲಿ ಎಲ್ಲಾ ಲೋಪಗಳನ್ನು ಸರಿಪಡಿಸಿ ರೈತರಿಗೆ ಸಪ್ಲೆ ಬಿಲ್ ಹಣ ಸಂದಾಯ ಮಾಡುತ್ತೇವೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ ಎಂದು ಮೋಹನ್ ಕುಮಾರ್ ತಿಳಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ರೈತರಿಗೆ ತೋಟಗಾರಿಕಾ ಇಲಾಖೆಯ ಕಾಮಗಾರಿಗಳ ಸಪ್ಲೆ ಬಿಲ್ ಹಣ ಸಂದಾಯವಾಗದೆ ರೈತರು ಸಾಲಗಾರರಾಗಿದ್ದಾರೆ. ಬರ, ಅತೀವೃಷ್ಠಿಯಂತಹ ಪ್ರಾಕೃತಿಕ ವಿಕೋಪಗಳಿಂದ ರೈತ ಸಮುದಾಯ ಸಂಕಷ್ಠಕ್ಕೆ ಸಿಲುಕಿದ್ದರೆ, ಮತ್ತೊಂದು ಕಡೆ ಅಧಿಕಾರಿಗಳ ಕಿರುಕುಳದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿದರು.

ಈ ವೇಳೆ ತಾಪಂ ಇಒ ಬಿ.ಎಸ್.ಸತೀಶ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್, ರೈತ ಮುಖಂಡರಾದ ಸ್ವಾಮೀಗೌಡ, ಹೊನ್ನೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ, ಹಿರೀಕಳಲೆ ಬಸವರಾಜು ಮತ್ತಿತರರಿದ್ದರು.

ಏಕರೂಪ ಸಾಫ್ಟ್‌ವೇರ್‌ ಅಳವಡಿಕೆಗೆ ಸ್ವಾಗತ

ಮದ್ದೂರು: ಜಿಲ್ಲಾ ಹಾಲು ಒಕ್ಕೂಟವು (ಮನ್ಮುಲ್) ರಾಜ್ಯದ ಇತರೆ ಒಕ್ಕೂಟಗಳ ಮಾದರಿಯಲ್ಲಿ ಎಕರೂಪದ ಸಾಪ್ಟ್ ವೇರ್ ಅಳವಡಿಕೆ ಮಾಡಿ ಹಾಲು ಖರೀದಿ ಹಾಗೂ ಲೆಕ್ಕಪತ್ರ ನಿರ್ವಹಣೆ ಮಾಡುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಮನ್‌ಮುಲ್ ನಾಮನಿರ್ದೇಶಕ ಸದಸ್ಯ ನ.ಲಿ.ಕೃಷ್ಣ ಹೇಳಿದ್ದಾರೆ.ಇದರಿಂದ ಹಾಲಿನ ಪರಿಮಾಣ ಮತ್ತು ಹಾಲಿನ ಗುಣಮಟ್ಟ ಪಾರದರ್ಶಕವಾಗಿ ನಮೂದಾಗಿಸಿ ಸಂಘ ಹಾಗು ಉತ್ಪಾದಕರ ನಡುವಿನ ವ್ಯವಹಾರವನ್ನು ಖಾತರಿಗೊಳಿಸುವ ಜೊತೆಗೆ ನಂಬುಗೆಯನ್ನು ಮತ್ತಷ್ಠು ಗಟ್ಟಿಗೊಳಿಸಲಿದೆ. ನೂತನವಾಗಿ ಜಾರಿಗೆ ತಂದಿರುವ ಸಾಪ್ಟ್ ವೇರ್ ನಲ್ಲಿ ಹಾಲಿನ ಗುಣಮಟ್ಟಕ್ಕೆ ಪೂರಕವಾದ ಎಸ್ ಎನ್ ಎಫ್‌ ಹಾಗೂ ಜಿಡ್ಡಿನ ಅಂಶವನ್ನು ತಂತ್ರಜ್ಞಾನ ಆಧಾರಿತವಾಗಿ ದಾಖಲು ಮಾಡುವುದರಿಂದ ಉತ್ಪಾದಕರಿಗೆ ನೈಜ ಹಾಗೂ ನಿಖರ ಮಾಹಿತಿ ಲಭ್ಯವಾಗಲಿದೆ.

ಇದಲ್ಲದೇ, ಹಾಲಿನ ಲೆಕ್ಕ ಪತ್ರಗಳು ಕೂಡ ಈ ಸಾಪ್ಟ್ ವೇರ್ ನಲ್ಲಿ ಸುಧಾರಿತ ತಂತ್ರಜ್ಞಾನ ಆಧಾರಿತವಾಗಿ ದಾಖಲಿಸಲ್ಪಡುವುದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ.ಈ ಮೊದಲು ಬೇರೆ ಬೇರೆ ಹೆಸರಿನ ಖಾಸಗಿ ಸಾಪ್ಟ್ ವೇರ್ ಗಳನ್ನು ಹಾಲು ಉತ್ಪಾದಕರ ಸಂಘಗಳು ಅಳವಡಿಕೆ ಮಾಡಿಕ್ಕೊಂಡಿದ್ದವು ಈ ಸಾಪ್ಟ್ ವೇರ್ ನಲ್ಲಿ ಸಮಗ್ರವಾದ ಅವಕಾಶ ಮತ್ತು ಪೂರಕ ನಿರ್ವಹಣಾ ವ್ಯವಸ್ಥೆ ಕೊರತೆಗಳು ಇದ್ದವು. ಅಲ್ಲದೆ ಈ ಸಾಫ್ಟ್‌ವೇರ್ ಗಳ ನಿರ್ವಹಣಾ ವೆಚ್ಚವಾಗಿ ಸಂಬಂಧಿಸಿದ ಕಂಪನಿಗಳಿಗೆ ಹಾಲು ಉತ್ಪಾದಕರ ಸಂಘಗಳು ವಾರ್ಷಿಕವಾಗಿ ಎಂಟು ಸಾವಿರ ರು. ಪಾವತಿಸಬೇಕಾಗಿತ್ತು. ಪ್ರಸ್ತುತ ಅಳವಡಿಕೆಯಾಗಿರುವ ಸಾಫ್ಟ್‌ವೇರ್ ಗೆ ಯಾವುದೇ ನಿರ್ವಹಣಾ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.