ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಭಾನುವಾರ 200 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ನೂರಾರು ಎಕ್ರೆ ಕೃಷಿ ಭೂಮಿಯಲ್ಲಿ ಪ್ರವಾಹ ತುಂಬಿದೆ, 100ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.ಹವಾಮಾನ ಇಲಾಖೆ ಜು.9ರಂದು (ಮಂಗಳವಾರ) ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮುಂಜಾಗರೂಕ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲೆ ಮತ್ತು ಪಪೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಶನಿವಾರ ರಾತ್ರಿಯ ಮಳೆಯ ಆರ್ಭಟಕ್ಕೆ ಜಿಲ್ಲೆಯಲ್ಲಿ ಸುಮಾರು 11 ಮನೆಗಳು ಮತ್ತು 3 ಜಾನುವಾರ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಕೃಷಿ ಭೂಮಿಗೆ ನುಗ್ಗಿರುವ ಪ್ರವಾಹ ಇನ್ನೂ ಇಳಿದಿಲ್ಲವಾದ್ದರಿಂದ ಅಪಾರ ಪ್ರಮಾಣದಲ್ಲಿ ಕೃಷಿ - ಬೆಳೆ ಹಾನಿಯಾಗಿರುವ ಸಾಧ್ಯತೆ ಇದೆ.ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಮೇಘ ಕೃಷ್ಣ ಶೇರಿಗಾರ್ ಅವರ ಮನೆಗೆ ಪೂರ್ಣ ಹಾನಿಯಾಗಿದ್ದು, ಸುಮಾರು 3,00,000 ರು. ನಷ್ಟ ಅಂದಾಜಿಸಲಾಗಿದೆ. ಬ್ರಹ್ಮಾವರ ತಾಲೂಕಿನ ಕಚ್ಚೂರು ಗ್ರಾಮದ ಸಂಜೀವ ನಾಯ್ಕ ಅವರ ಮನೆ ಸಂಪೂರ್ಣ ನಾಶವಾಗಿದ್ದು, ಸುಮಾರು 6,00,000 ರು. ನಷ್ಟವಾಗಿದೆ.
ಪೆರ್ಡೂರು ಗ್ರಾಮದ ತನಿಯ ಕುಲಾಲರ ಮನೆಗೆ 50,000 ರು., ಬಡಗಬೆಟ್ಟು ಗ್ರಾಮದ ಶಕುಂತಲ ನಾಯ್ಕ್ ಅವರ ಮನೆಗೆ 40,000 ರು., ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ತೆರೇಜಾ ಡಿಸೋಜರ ಮನೆಗೆ 50,000 ರು., ಕೋಟೆಶ್ವರ ಗ್ರಾಮದ ರಾಜು ನಾಯ್ಕರ ಮನೆ ಮೇಲೆ ಮರ ಬಿದ್ದು 10,000 ರು., ಹೆಮ್ಮಾಡಿ ಗ್ರಾಮದ ಗಿರಿಜಾ ಸಂಜೀವ ದೇವಾಡಿಗರ ಮನೆಗೆ 20,000 ರು., ಕೋಟೆಶ್ವರ ಗ್ರಾಮದ ಜಲಜ ಅನಂತರ ಮನೆಗೆ 5,000 ರು., ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುರೇಂದ್ರ ಕಾರ್ವಿ ಅವರ ಮನೆಗೆ 15,000 ರು., ಹನೇಹಳ್ಳಿ ಗ್ರಾಮದ ಡಾಲ್ಫಿ ಕ್ರಾಸ್ತಾ ಅವರ ಮನೆಗೆ 70,000 ರು., ಚೆರ್ಕಾಡಿ ಗ್ರಾಮದ ಪ್ರಶಾಂತ ಮರಕಾಲರ ಮನೆಗೆ 75,000 ರು. ಹಾನಿಯಾಗಿದೆ.ಅಲ್ಲದೇ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಸೀತು ನಾರಾಯಣ ನಾಯಕ್ ಅವರ ಜಾನುವಾರು ಕೊಟ್ಟಿಗೆಗೆ 50,000 ರು., ಕೋಣಿ ಗ್ರಾಮದ ಯಶೋಧ ಅವರ ಜಾನುವಾರು ಕೊಟ್ಟಿಗೆ 10,000 ರು. ಮತ್ತು ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದ ನಾರಾಯಣ ಕುಲಾಲರ ಜಾನುವಾರು ಕೊಟ್ಟಿಗೆಗೆ 10,000 ರು.ಗಳಷ್ಟು ಹಾನಿಯಾಗಿದೆ.ಶನಿವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 110 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 63.90, ಕುಂದಾಪುರ 138.60, ಉಡುಪಿ 118, ಬೈಂದೂರು 147.30, ಬ್ರಹ್ಮಾವರ 104, ಕಾಪು 79.50, ಹೆಬ್ರಿ 95.80 ಮಿ.ಮೀ. ಮಳೆ ಆಗಿರುತ್ತದೆ.
ಶನಿವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 110 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 63.90, ಕುಂದಾಪುರ 138.60, ಉಡುಪಿ 118, ಬೈಂದೂರು 147.30, ಬ್ರಹ್ಮಾವರ 104, ಕಾಪು 79.50, ಹೆಬ್ರಿ 95.80 ಮಿ.ಮೀ. ಮಳೆ ಆಗಿರುತ್ತದೆ.