ಕಾಯಕ ಪ್ರಶಸ್ತಿಗೆ ಡಾ. ಗುರಮ್ಮ ಸಿದ್ದಾರೆಡ್ಡಿ ಆಯ್ಕೆ

| Published : Dec 18 2024, 12:50 AM IST

ಸಾರಾಂಶ

Kayak Award Dr. Guramma Siddhartha's choice

-ಡಾ. ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

-----

ಕನ್ನಡಪ್ರಭ ವಾರ್ತೆ ಭಾಲ್ಕಿ

ಹಿರೇಮಠ ಸಂಸ್ಥಾನದ ವತಿಯಿಂದ ಕೊಡಮಾಡುವ 2024ರ ಡಾ. ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿಗೆ ಡಾ. ಗುರಮ್ಮ ಸಿದ್ಧಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಚನ್ನಬಸವಾಶ್ರಮ ಪರಿಸರದಲ್ಲಿ ಡಿ.22ರಂದು ನಡೆಯಲಿರುವ ಶತಾಯಷಿ ಡಾ. ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಪರಿಚಯ: ಬೀದರ್‌ ಜಿಲ್ಲೆಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮುಂತಾದ ಕಾರ್ಯಗಳಲ್ಲಿ ಡಾ. ಗುರಮ್ಮ ಸಿದ್ಧಾರೆಡ್ಡಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಡ ಕೈಯಲ್ಲಿ ಲಿಂಗಪೂಜೆ ಬಲದ ಕೈಯಲ್ಲಿ ಜಂಗಮ ಸೇವೆ ಎಂಬ ಶರಣರ ವಾಣಿಯಂತೆ ಪ್ರತ್ಯಕ್ಷ ಆಚರಣೆಯೆ ಇವರ ಜೀವನವಾಗಿದೆ. ಇವರದ್ದು ಸೇವಾ ಜೀವನ, ಜಂಗಮ ಜೀವನ. ಸತ್ಯ ಶುದ್ಧ ಕಾಯಕ ಮತ್ತು ನಿರಂತರ ದಾಸೋಹ ಇವರ ಜೀವನದ ಉಸಿರಾಟವೇ ಆಗಿದೆ.

ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲ ಕಾರ್ಯಗಳಲ್ಲಿ ಡಾ. ಗುರಮ್ಮ ಸಿದ್ಧಾರೆಡ್ಡಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ, ಆ ಮೂಲಕ ಸಾಮಾಜಿಕ ಸೇವೆಗೆ ಆಧ್ಯತೆ ನೀಡಿದ್ದಾರೆ. ನೂರಾರು ಸಂಸ್ಥೆ-ಸಂಘಟನೆಗಳ ಜವಾಬ್ದಾರಿ ವಹಿಸಿಕೊಂಡು ಜನಪರ, ಜೀವಪರ ಕಾರ್ಯ ಮಾಡುವುದರಲ್ಲಿ ಲಿಂಗಾನಂದ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಸಬಲೀಕರಣ, ಶಿಕ್ಷಣ, ಗ್ರಾಮೀಣ ಪ್ರದೇಶ ಅಭಿವೃದ್ಧಿ, ನ್ಯಾಯಾಂಗದ ಸೇವೆ, ಕುಟುಂಬ ಸಂಸ್ಕೃತಿ, ಕೈಗಾರಿಕೆ, ರಾಷ್ಟ್ರೀಯ ಏಕತೆ, ಅಂಗವಿಕಲರ ಪುನರ್ವಸತಿ, ಸಾಹಿತ್ಯ, ಧರ್ಮ, ಕಲೆ, ಗ್ರಾಹಕರ ಪರಿಹಾರ ಫೋರಂ, ಅಂಧತ್ವ ನಿವಾರಣೆ, ಸಹಕಾರ ಸಂಘಗಳು, ಕಾರ್ಮಿಕರ ಸೇವೆಯ ಜೊತೆಗೆ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮುಂತಾದ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ ಸೇವೆ ಅನುಮಪವಾಗಿದೆ.

-----

ಫೈಲ್‌ 17ಬಿಡಿ9