ಸಾರಾಂಶ
ಬಸವನಬಾಗೇವಾಡಿ ಪಟ್ಟಣದ ತಾಲೂಕು ಆಸ್ಪತ್ರೆಗೆ ಕೇಂದ್ರ ಸರ್ಕಾರದ ೨೦೨೨ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಯನ್ನು ವಿಜಯಪುರದಲ್ಲಿ ಬುಧವಾರ ಜರುಗಿದ ಆರೋಗ್ಯ ಇಲಾಖೆಯ ಮಾಸಿಕ ಸಭೆಯಲ್ಲಿ ಡಿಎಚ್‌ಒ ಡಾ.ಬಸವರಾಜ ಹುಬ್ಬಳ್ಳಿ ಅವರು ತಾಲೂಕು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸಾಬೀರ ಪಟೇಲ ಅವರಿಗೆ ಪ್ರದಾನ ಮಾಡಿ ಆರೋಗ್ಯ ಇಲಾಖೆಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಲಕ್ಷ್ಯ ಕಾರ್ಯಕ್ರಮದ ಪ್ರಶಂಸನಾ ಸನ್ಮಾನ ಫೋಟೋ ನೀಡಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ತಾಲೂಕು ಆಸ್ಪತ್ರೆಗೆ ಕೇಂದ್ರ ಸರ್ಕಾರದ ೨೦೨೨ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಯನ್ನು ವಿಜಯಪುರದಲ್ಲಿ ಬುಧವಾರ ಜರುಗಿದ ಆರೋಗ್ಯ ಇಲಾಖೆಯ ಮಾಸಿಕ ಸಭೆಯಲ್ಲಿ ಡಿಎಚ್‌ಒ ಡಾ.ಬಸವರಾಜ ಹುಬ್ಬಳ್ಳಿ ಅವರು ತಾಲೂಕು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸಾಬೀರ ಪಟೇಲ ಅವರಿಗೆ ಪ್ರದಾನ ಮಾಡಿ ಆರೋಗ್ಯ ಇಲಾಖೆಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಲಕ್ಷ್ಯ ಕಾರ್ಯಕ್ರಮದ ಪ್ರಶಂಸನಾ ಸನ್ಮಾನ ಫೋಟೋ ನೀಡಿ ಸನ್ಮಾನಿಸಲಾಯಿತು.ಈ ವೇಳೆ ಡಿಎಚ್‌ಒ ಡಾ.ಬಸವರಾಜ ಹುಬ್ಬಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ಆಸ್ಪತ್ರೆಯ ಆಂತರಿಕ ಮತ್ತು ಬಾಹ್ಯವಾಗಿ ಸ್ವಚ್ಛತೆ, ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕ, ಇನ್ಪೆಕ್ಷನ್ ಕಂಟ್ರೋಲ್, ಪರಿಸರ ಸಂರಕ್ಷಣೆ, ಸಮಯ ಪಾಲನೆ ರೋಗಿಗಳ ಆರೈಕೆ, ಸಿಬ್ಬಂದಿ ಕಾರ್ಯಕ್ಷಮತೆ ಪರಿಗಣಿಸಿ ರಾಜ್ಯಕ್ಕೆ ಎರಡನೇ ಸ್ಥಾನದ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಿದೆ. ೨೦೨೩ನೇ ಸಾಲಿನಲ್ಲಿ ರಾಜ್ಯ ಸರ್ಕಾರ ತಾಲೂಕು ಆಸ್ಪತ್ರೆಯನ್ನು ಈ ಮಾನದಂಡಗಳ ಅನ್ವಯ ರಾಜ್ಯಕ್ಕೆ ಪ್ರಥಮ ಸ್ಥಾನದ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಕಾಯಕಲ್ಪ ಪ್ರಶಸ್ತಿಗೆ ಆಸ್ಪತ್ರೆ ಭಾಜನವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಗುಂಡಬಾವಡಿ, ಡಾ.ಎಸ್.ಎಸ್.ಓತಗೇರಿ, ಡಾ.ಜೆ.ಬಿ.ಬೀಳಗಿ, ಕವಿತಾ ದೊಡಮನಿ, ಡಾ.ಶಾಕೀರ ಪಟೇಲ, ಡಾ.ಸಯ್ಯದ ನಬಿ, ಡಾ.ಬಿ.ಎಂ.ಝಳಕಿ, ಡಾ.ಎಂ.ಪಿ.ಸಿಂಹಾಸನ, ಡಾ.ಬಿ.ವೈ.ಮುತ್ತತ್ತಿ, ಎ.ಎಂ.ಕೊಣ್ಣೂರ, ಬಿ.ಎಂ.ನಾಯ್ಕೋಡಿ, ಬಸವರಾಜ ಧನ್ಯಾಳ, ಬಿ.ಸಿ.ಪಟ್ಟಣಶೆಟ್ಟಿ, ಸಂಗಮೇಶ ಮೇಲಿನಮನಿ, ಅಣ್ಣಪ್ಪ ಬಿದ್ನಾಳ, ಚಂದ್ರಶೇಖರ ಹದಿಮೂರ, ಮಹಾದೇವಿ ಬೇವನೂರ, ಶಿವಲೀಲಾ ದೊಡಮನಿ, ಅರ್ಚನಾ ನಾಟೀಕಾರ, ವ್ಹಿ.ಎಲ್.ವಡ್ಡರ, ಶ್ವೇತಾ ಚಿನಿವಾಲರ, ಡಿ.ಬಿ.ಕಾಚೂರ, ಸುಜಾತಾ ಕಿಶೇರಿ, ಸಿದ್ದಲಿಂಗಪ್ಪ ಭಾವಿಕಟ್ಟಿ ಇತರರು ಇದ್ದರು.