ಶ್ರೀ ನಾರಾಯಣಸ್ವಾಮಿ ದೇವಾಲಯಕ್ಕೆ ಕಾಯಕಲ್ಪ

| Published : Oct 23 2023, 12:15 AM IST

ಶ್ರೀ ನಾರಾಯಣಸ್ವಾಮಿ ದೇವಾಲಯಕ್ಕೆ ಕಾಯಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಅಳಿವಿನಂಚಿಗೆ ತಲುಪಿದ್ದ ತಾಲೂಕಿನ ಮಳೂರು ಪಟ್ಟಣದ ನಾರಾಯಣಸ್ವಾಮಿ ದೇವಾಲಯವನ್ನು ನರೇಗಾ ಯೋಜನೆಯಡಿ 13 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಚನ್ನಪಟ್ಟಣ: ಅಳಿವಿನಂಚಿಗೆ ತಲುಪಿದ್ದ ತಾಲೂಕಿನ ಮಳೂರು ಪಟ್ಟಣದ ನಾರಾಯಣಸ್ವಾಮಿ ದೇವಾಲಯವನ್ನು ನರೇಗಾ ಯೋಜನೆಯಡಿ 13 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ತಾಲೂಕಿನ ಮಳೂರುಪಟ್ಟಣದ ನಾರಾಯಣಸ್ವಾಮಿ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದ್ದು, ದೇವಾಲಯ ಜಾಗದ ಒತ್ತುವರಿಯಾಗಿದ್ದು, ನಿರ್ವಹಣೆ ಕೊರತೆಯಿಂದ ನಲುಗಿತ್ತು. ಪುರಾತನ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ದೇವಸ್ಥಾನದ ಜಾಗ ಒತ್ತುವರಿ: ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನದ ಜಾಗ ಸಾಕಷ್ಟು ಒತ್ತುವರಿಯಾಗಿದ್ದು, ದೇವಸ್ಥಾನದ ಅವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದವು. ದೇವಾಲಯದ ಆವರಣದ ಸುತ್ತ ಹಸು, ಕುರಿಗಳನ್ನು ಕಟ್ಟುತ್ತಿದ್ದರು. ನಿರ್ವಹಣೆ ಕೊರತೆಯಿಂದ ದೇವಸ್ಥಾನದ ಆವರಣ ನೈರ್ಮಲ್ಯದಿಂದ ಕೂಡಿತ್ತು. ನರೇಗಾ ಯೋಜನೆಯಡಿ ದೇವಾಲಯ ಸಂರಕ್ಷಿಸಲು ನರೇಗಾ ಯೋಜನೆ ಸದ್ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. 13 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ: ಒತ್ತುವರಿಯಾಗಿದ್ದ ದೇವಾಲಯದ ಜಾಗವನ್ನು ಹದ್ದುಬಸ್ತು ಮಾಡಿ, ದೇವಾಲಯದ ಅವರಣದ ಸುತ್ತಲು ಫೆನ್ಸಿಂಗ್ ಅಳವಡಿಸಲಾಗಿದೆ. ದೇವಾಲಯದ ಜಾಗವನ್ನು ಸಂರಕ್ಷಿಸಲಾಗಿದೆ. ಇದರೊಂದಿಗೆ ದೇವಾಲಯದ ಆವರಣದಲ್ಲಿ ಕಾಂಕ್ರಿಟ್ ಬ್ಲಾಕ್‌ಗಳನ್ನು ಹಾಕಲಾಗಿದೆ. ಮಳೆ ಬಂದರೆ ದೇವಸ್ಥಾನದ ಕೆಲವು ಭಾಗದಲ್ಲಿ ನೀರು ಸೋರುತ್ತಿದ್ದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲು ಛಾವಣಿಯನ್ನು ನಿರ್ಮಿಸಿಲಾಗಿದೆ. ಇದಲ್ಲದೇ ದೇವಸ್ಥಾನದ ಅರಳಿಮರದ ಸುತ್ತ ಅರಳಿಕಟ್ಟೆ ಕಟ್ಟುವ ಜತೆಗೆ ದೇವಸ್ಥಾನದ ಆವರಣದಲ್ಲಿರುವ ಮರಗಳನ್ನು ಸಂರಕ್ಷಿಸಿದ್ದು, ಉದ್ಯಾನ ಬೆಳೆಸುಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಚೀನ ದೇವಾಲಯ: ಮಳೂರುಪಟ್ಟಣದಲ್ಲಿನ ಶ್ರೀ ನಾರಾಯಣಸ್ವಾಮಿ ದೇವಾಲಯ ಕಟ್ಟಡ ಮೂಲತಃ ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳಿಂದ ಕೂಡಿದೆ. ದೇಗುಲದ ನವರಂಗದ ಭಾಗ ಹಾಳಾಗಿತ್ತು. ಗರ್ಭಗೃಹ ಮತ್ತು ಸ್ಥಂಭವೊಂದನ್ನು ಹೊಂದಿರುವ ಸುಕನಾಸಿ ಮಾತ್ರ ಉಳಿದುಕೊಂಡಿದ್ದು, ಇದು ಚೋಳರ ಕಾಲದ ಶೈಲಿಯಲ್ಲಿದೆ. ಇತ್ತೀಚೆಗೆ ಸಣ್ಣದಾದ ಮುಖಮಂಟಪವನ್ನು ಒರಟಾಗಿ ಕಟ್ಟಲಾಗಿದೆ. ದೇವಾಲಯದಲ್ಲಿ ಎರಡು ವಿಗ್ರಹಗಳಿದ್ದು, ಅವುಗಳಲ್ಲಿ ಜನಾರ್ದನನ ವಿಗ್ರಹ ವಿಜಯನಗರ ಸಾಮ್ರಾಜ್ಯದ ಆರಂಭ ಕಾಲದ ಶೈಲಿಯಲ್ಲಿದೆ. ಮತ್ತೊಂದು ಗ್ರಾನೈಟ್ನಲ್ಲಿ ಕಡೆದಿರುವ ವಿಷ್ಣುವಿನ ವಿಗ್ರಹವಾಗಿದ್ದು, ಇದು ಜನಾರ್ದನನ ವಿಗ್ರಹಕಿಂತ ಹಳೆಯದಂದು ಅಂದಾಜಿಸಲಾಗಿದೆ. ಶಂಖ, ಚಕ್ರ, ಗದಾ-ಪದ್ಮಗಳನ್ನು ಹಾಗೂ ಅಭಯ ಹಸ್ತವನ್ನು ಹೊಂದಿರುವ ಇವುಗಳು ಅತ್ಯಂತ ಸುಂದರ ಕತ್ತೆನೆಯಿಂದ ಕೂಡಿದ್ದು, ಪ್ರಾಚೀನ ಪರಂಪರೆಯನ್ನು ಬಿಂಬಿಸುತ್ತವೆ. ಹೆಚ್ಚಿದ ಭಕ್ತರ ಸಂಖ್ಯೆ: ನಿರ್ವಹಣೆ ಕೊರತೆಯಿಂದ ಅಳಿವಿನಂಚಿಗೆ ತಲುಪಿದ್ದ ಶ್ರೀ ನಾರಾಯಣ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಬಳಿಕ ದೇಗಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕಗೊಂಡಿದೆ. ಅಭಿವೃದ್ಧಿಯ ನಂತರ ದೇವಾಲಯದ ಆವರಣವನ್ನು ಸ್ವಚ್ಛವಾಗಿಟ್ಟುಕೊಂಡಿದ್ದು, ದಣಿದು ಬಂದವರ ಪಾಲಿಗೆ ವಿಶ್ರಾಂತಿ ತಾಣವಾಗಿ ರೂಪುಗೊಂಡಿದೆ. ಒಟ್ಟಿನಲ್ಲಿ ಅವಸಾನದ ಅಂಚಿನಲ್ಲಿದ್ದ ಒಂದು ದೇವಸ್ಥಾನಕ್ಕೆ ನರೇಗಾ ಯೋಜನೆಯಡಿ ಕಾಯಕಲ್ಪ ನೀಡಲಾಗಿದೆ. ಕೋಟ್............... ಪುರಾಣ ಪ್ರಸಿದ್ಧ ಶ್ರೀ ನಾರಾಯಣಸ್ವಾಮಿ ದೇವಾಲಯ ಅಳಿವಿನಂಚಿಗೆ ತಲುಪಿತ್ತು. ದೇವಸ್ಥಾನದ ಜಾಗ ಒತ್ತುವರಿಯಾಗುವ ಜತೆಗೆ ಅವರಣದ ಸುತ್ತ ಗಿಡಗಂಟಿಗಳು ಬೆಳೆದಿತ್ತು. ಜನ ಹಸು, ಕುರಿ, ಮೇಕೆಗಳನ್ನು ಇಲ್ಲಿ ಕಟ್ಟಿಹಾಕುತ್ತಿದ್ದರು. ಇದು ಹೀಗೆ ಮುಂದುವರಿದಿದ್ದರೆ ಮುಂದೊಂದು ಈ ಜಾಗದಲ್ಲಿ ದೇವಸ್ಥಾನದ ಕುರುಹನ್ನು ಹುಡುಕಬೇಕಾಗಿತ್ತು. ಆದರೆ, ನರೇಗಾ ಯೋಜನೆ ಬಳಸಿಕೊಂಡು ದೇವಸ್ಥಾನದ ಜಾಗವನ್ನು ಅಭಿವೃದ್ಧಿಪಡಿಸಿರುವುದು ಉತ್ತಮ ಬೆಳವಣಿಗೆ. -ಎಂ.ಡಿ.ಕುಮಾರ್, ಗ್ರಾಮಸ್ಥರು ಕೋಟ್................ ತಾಲೂಕಿನ ಮಳೂರುಪಟ್ಟಣದ ಶ್ರೀ ನಾರಾಯಣಸ್ವಾಮಿ ದೇವಾಲಯವನ್ನು ನರೇಗಾ ಯೋಜನೆಯಡಿ 13 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ದೇವಸ್ಥಾನದ ಸುತ್ತ ಫೆನ್ಸಿಂಗ್ ಹಾಕಿ, ಛಾವಣಿ ನಿರ್ಮಿಸಿ ಮಳೆ, ಬಿಸಿಲಿನಿಂದ ದೇವಾಲಯವನ್ನು ಸಂರಕ್ಷಿಸಲಾಗಿದೆ. -ಶಿವಕುಮಾರ್, ತಾಪಂ ಇಒ ಪೊಟೊ೨೨ಸಿಪಿಟ೧,೨,: ಚನ್ನಪಟ್ಟಣ ತಾಲೂಕಿನ ಮಳೂರುಪಟ್ಟಣದಲ್ಲಿ ಅಭಿವೃದ್ಧಿಪಡಿಸಿರುವ ಶ್ರೀ ನಾರಾಯಣಸ್ವಾಮಿ ದೇವಸ್ಥಾನ.