ಎಂ.ರುದ್ರೇಶ್‌ಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ, ಹಲವರಿಗೆ ಅಭಿನಂದನೆ

| Published : Jul 09 2024, 12:47 AM IST

ಎಂ.ರುದ್ರೇಶ್‌ಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ, ಹಲವರಿಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿ ಮತ್ತು ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಕಳೆದ ಐದು ವರ್ಷಗಳಿಂದ 3000 ಹೆಚ್ಚು ಮಹಿಳಾ, ಪುರುಷ ಸದಸ್ಯರಿಗೆ 30 ಕೋಟಿಗೂ ಹೆಚ್ಚು ಹಣವನ್ನು ಕಡಿಮೆ ಬಡ್ಡಿ ಮತ್ತು ಬಡ್ಡಿ ರಹಿತ ಸಾಲವನ್ನು ವಿತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬಿದರಹಳ್ಳಿ ಗೋವರ್ಧನ್ ಫಾರಂನಲ್ಲಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಸಂಸ್ಥೆ ಉದ್ಘಾಟನೆ ಅಂಗವಾಗಿ ಕೆಆರ್ ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀಗುರು ಶಾಂತ ಸ್ವಾಮೀಜಿ ಹಾಗೂ ಶಿವಬಸವ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿದರಹಳ್ಳಿ ಮಹಿಳಾ ಮತ್ತು ಪುರುಷ ಸ್ವಸಹಾಯ ಸಂಘದ ಫಲಾನುಭವಿಗಳಿಂದ ಸಾಲ ಮಂಜೂರಾತಿಗೆ ಸಹಕರಿಸಿದ ನಿಜಗುಣ, ಬ್ಯಾಂಕಿನ ಮುಖ್ಯಸ್ಥ ನಟರಾಜ್, ರಾಜಶೇಖರ್ ಪ್ರಸಾದ್, ಬಲರಾಮ್, ಹರ್ಷವರ್ಧನ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ನಿಜಗುಣ, ಮಹಿಳೆಯರು ಮತ್ತು ಪುರುಷರು ಗ್ರಾಮೀಣ ಪ್ರದೇಶದಲ್ಲಿ ಅವರು ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿ ಹಾಗೂ ಮಾಹಿತಿ ಕೊರತೆಯಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಗಮನಿಸಿ ಬ್ಯಾಂಕ್‌ಗಳಿಂದ ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿ ಮತ್ತು ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಕಳೆದ ಐದು ವರ್ಷಗಳಿಂದ 3000 ಹೆಚ್ಚು ಮಹಿಳಾ, ಪುರುಷ ಸದಸ್ಯರಿಗೆ 30 ಕೋಟಿಗೂ ಹೆಚ್ಚು ಹಣವನ್ನು ಕಡಿಮೆ ಬಡ್ಡಿ ಮತ್ತು ಬಡ್ಡಿ ರಹಿತ ಸಾಲವನ್ನು ವಿತರಿಸಲಾಗಿದೆ ಎಂದರು.

ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಎಂಡಿಸಿಸಿ ಬ್ಯಾಂಕಿನ ಎಲ್ಲಾ ಐದು ಕೇಂದ್ರ ಹಾಗೂ ಶಾಖಾ ಕಚೇರಿಯ ಮುಖ್ಯಸ್ಥರ ಸಹಕಾರದೊಂದಿಗೆ ಸಾಲ ನೀಡಲಾಗಿದೆ ಎಂದರು.

ತಾಲೂಕಿನ ಬಿದರಹಳ್ಳಿ, ಹಂಪಾಪುರ, ಚನ್ನಹಳ್ಳಿ ಹಾಗೂ ಮೈಸೂರು ತಾಲೂಕಿನ ಪಿಲ್ಲಹಳ್ಳಿ, ಪುಟ್ಟೇಗೌಡನಹುಂಡಿ, ಚಿಕ್ಕಳ್ಳಿ, ಪಾಳ್ಯ ಹಾಗೂ ಮುದ್ದೇಗೌಡನಹುಂಡಿ, ಸಾತ್ಗಳ್ಳಿ ಗ್ರಾಮದ ಸ್ವಸಹಾಯ ಸಂಘದ ಸದಸ್ಯರು ಸಾಲಸೌಲಭ್ಯದ ಅನುಕೂಲ ಪಡೆದುಕೊಂಡಿದ್ದಾರೆ ಎಂದರು.

ಅಲ್ಲದೇ, ಫಲಾನುಭವಿಗಳಿಗೆ ಕಾರ್ಮಿಕರ ಕಾರ್ಡ್, ಸರ್ಕಾರಿ ಸ್ಕೀಮ್ ಲೋನ್ ಗಳನ್ನು ತಲುಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಅನುಕೂಲ ಮಾಡಲು ಹಿರಿಯರ ಮಾರ್ಗದರ್ಶನದಂತೆ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಟ್ರಸ್ಟ್ ಕೆಲಸ ಮಾಡಲಿದೆ ಎಂದರು. ಇದೇ ವೇಳೆ ಮೈಸೂರು ಜಿಲ್ಲಾ ಅಪರ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಹಾಗೂ ಇತರರು ಇದ್ದರು.