ಕೆದಕಲ್ ಶ್ರೀ ಭದ್ರಕಾಳೇಶ್ವರಿ ದೇವಾಲಯ ವತಿಯಿಂದ ವಿಷ್ಣುಮೂರ್ತಿ ದೇವರ ಕಟ್ಟಿತೆರೆ ಹಾಗೂ ಕೋಲ ಶ್ರದ್ಧಾಭಕ್ತಿಯಿಂದ ಜರುಗಿತು.

ಕನ್ನಡಪ್ರಭ ವಾರ್ತೆಸುಂಟಿಕೊಪ್ಪ

ಕೆದಕಲ್ ಶ್ರೀ ಭದ್ರಕಾಳೇಶ್ವರಿ ದೇವಾಲಯ ವತಿಯಿಂದ ವಿಷ್ಣುಮೂರ್ತಿ ದೇವರ ಕಟ್ಟಿತೆರೆ ಹಾಗೂ ಕೋಲ ಶ್ರದ್ಧಾಭಕ್ತಿಯಿಂದ ಜರುಗಿತು.ತೆರೆಯ ಅಂಗವಾಗಿ ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಶ್ರೀ ಭದ್ರಕಾಳೇಶ್ಚರಿ, ಈಶ್ವರ, ವಿಷ್ಣುಮೂರ್ತಿ ಹಾಗೂ ಅಜ್ಜಪ್ಪ ದೇವರ ಕೋಲ ಮತ್ತು ದರ್ಶನ ನಡೆಯಿತು. ಇದೇ ವೇಳೆ ವಿಷ್ಣುಮೂರ್ತಿಯ ಕಟ್ಟಿತೆರೆ ನಡೆಯಿತು. ದೇವರ ದರ್ಶನದ ವೇಳೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತ ಸಮೂಹ ತಮ್ಮ ಕಷ್ಟ ಕಾರ್ಪಣ್ಯ ಪರಿಹರಿಸುವಂತೆ ತಮ್ಮ ಇಷ್ಟರ್ಥ ದೈವಗಳಲ್ಲಿ ಬೇಡಿಕೆ ಮುಂದಿಟ್ಟರು.ವಿಷ್ಣುಮೂರ್ತಿ ದೇವರಿಗೆ ತೆರೆ ಕಟ್ಟುವ ಮೊದಲು ತೆರೆಯನ್ನು ಕೆದಕಲ್ ಮುಖ್ಯ ರಸ್ತೆಯಲ್ಲಿ ಕೇರಳದ ಚಂಡೆ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ರಾತ್ರಿ ಮಹಾ ಮಂಗಳಾರತಿ ಭಂಡಾರ ಹಾಕುವುದು, ದೇವರ ಹರಕೆ ಸೇರಿದಂತೆ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು.ಕೆದಕಲ್, ಬಾಳೆಕಾಡು, ಸುಂಟಿಕೊಪ್ಪ, ಹಾಲೇರಿ, ಬೋಯಿಕೇರಿ, ಮಡಿಕೇರಿ, ಕಾಂಡನಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.