ಸಾರಾಂಶ
ಕಳೆದ ೨೦೧೮ ರಿಂದ ಬಿಜೆಪಿ ಸುಮಾರು ೮,೨೫೨ ಕೋಟಿ ರೂ ಚುನಾವಣಾ ಬಾಂಡ್‌ಗಳನ್ನು ಪಡೆದಿದ್ದು, ಮೇಲ್ನೋಟಕ್ಕೆ ಇದೊಂದು ಅಧಿಕಾರ ದುರಪಯೋಗದ ಭ್ರಷ್ಠಾಚಾರದ ದುಷ್ಕೃತದಂತೆ ಕಂಡು ಬಂದಿದೆ. 
ಹೊಸಪೇಟೆ: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ನ್ನು ಸಿಪಿಐಎಂ ಬೆಂಬಲಿಸಲಿದೆ. ಸಿಪಿಐಎಂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಉಳಿದೆಡೆ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜನತೆಗೆ ನೈಜ ಪರ್ಯಾಯವಲ್ಲದಿದ್ದರೂ ಸರ್ವಾಧಿಕಾರಿ ಹಾಗೂ ಮನುವಾದ, ಹಿಂದುತ್ವ ರಾಷ್ಟ್ರವನ್ನು ದೇಶದ ಮೇಲೆ ಹೇರಲಿರುವ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಎಡ ಮತ್ತ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳು ದುರ್ಬಲ ಸ್ಥಿತಿಯಲ್ಲಿರುವುದನ್ನು ಅರಿತು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಸಿಪಿಐಎಂ ಬೆಂಬಲಿಸುವುದು ಅನಿವಾರ‍್ಯವಾಗಿದೆ. ಬಿಜೆಪಿ ಹಾಗೂ ಅದರ ಮಿತ್ರರನ್ನು ಸೋಲಿಸುವ ಕರ್ತವ್ಯದ ಜೊತೆಗೆ ಜನವಿರೋಧಿ ಆರ್ಥಿಕ ನೀತಿ, ಸೌಹಾರ್ದ, ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾರರು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಕಳೆದ ೨೦೧೮ ರಿಂದ ಬಿಜೆಪಿ ಸುಮಾರು ೮,೨೫೨ ಕೋಟಿ ರೂ ಚುನಾವಣಾ ಬಾಂಡ್‌ಗಳನ್ನು ಪಡೆದಿದ್ದು, ಮೇಲ್ನೋಟಕ್ಕೆ ಇದೊಂದು ಅಧಿಕಾರ ದುರಪಯೋಗದ ಭ್ರಷ್ಠಾಚಾರದ ದುಷ್ಕೃತದಂತೆ ಕಂಡು ಬಂದಿದೆ. ಒಟ್ಟಾರೆ ಪ್ರಕರಂವನ್ನು ಸುಪ್ರಿಂ ಕೋರ್ಟು ಸುಪರ್ಧಿಯಲ್ಲಿ ತನಿಖೆ ನಡೆಸಬೇಕು ಎಂದರು.
ಚುನಾವಣೆ ಬಳಿಕ ಚುನಾವಣೆ ನೀತಿ ಸಂಹಿತೆ ಜಾರಿ ನಡುವೆ ರಾಜಕೀಯ ದುರುದ್ದೇಶದಿಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಖಂಡನೀಯವಾಗಿದೆ. ಅವರನ್ನು ಕೂಡಲೇ ಬಂಧಮುಕ್ತ ಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸಮಿತಿ ಸದಸ್ಯರಾದ ಆರ್.ಎಸ್.ಬಸವರಾಜ, ಬಿ.ಮಾಳಮ್ಮ ಹಾಗೂ ಜಿಲ್ಲಾ ಸಮಿತಿ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))