ನೆಪ ಹೇಳದೆ ನಗರದ ಸ್ವಚ್ಛತೆ ಕಾಪಾಡಿ

| Published : Nov 06 2024, 12:31 AM IST

ಸಾರಾಂಶ

ಮಾಲೂರು ತಾಲೂಕು ಪಂಚಾಯ್ತಿ ಸಹಕಾರದಿಂದ ಕಸ ವಿಲೇವಾರಿಗೆ ಇಗ್ಗಲೂರು ಗ್ರಾಮಸ್ಥರ ಮನವೊಳಿಸಿ 5 ಎಕರೆ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣ ಘಟಕ ಸ್ಥಾಪಿಸಲಾಗಿದೆ. ಇದರಿಂದಾಗಿ ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡಲು ಅನುಕೂಲವಾಗಿದ್ದು, ಪಟ್ಟಣದಲ್ಲಿ ಕಸವನ್ನು ಘಟಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಪ್ರಭ ವಾರ್ತೆ ಮಾಲೂರು

ಪಟ್ಟಣದ ಸ್ವಚ್ಛತೆ ಬಗ್ಗೆ ಇನ್ನೂ ಮಂದೆ ನೆಪ ಹೇಳದೆ ನಿತ್ಯ ಸ್ವಚ್ಛತೆಗೆ ಪುರಸಭೆ ಆಡಳಿತ ಮುಂದಾಗಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ತಾಲೂಕಿನ ರಾಜೇನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಇಗ್ಗಲೂರು ಗ್ರಾಮದಲ್ಲಿ ಸ್ಥಳೀಯ ಪುರಸಭೆ ಯು ನಗರಾಭಿವೃದ್ಧಿ ಇಲಾಖೆ ಪೌರಡಳಿತ ನಿರ್ದೇಶನಾಲಯ ಸಹಕಾರದಲ್ಲಿ 6 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣಾ ಘಟಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಬೆಳೆಯುತ್ತಿರುವ ಪಟ್ಟಣ:

ಪಟ್ಟಣವು ಬೆಂಗಳೂರಿಗೆ ಸಮೀಪ ಇದ್ದು, ಎರಡು ಕೈಗಾರಿಕಾ ಪ್ರದೇಶವನ್ನು ಹೊಂದಿರುವ ಕಾರಣ ಜನಸಂಖ್ಯೆ ಹೆಚ್ಚಾಗುವ ಜತೆಗೆ ನಿತ್ಯ ತ್ಯಾಜ್ಯ ಉತ್ಫಾದನೆ ಪುರಸಭೆಗೆ ಸವಾಲಾಗಿ ಪರಿಣಿಮಿಸಿತ್ತು. ಕಸ ವಿಲೇವಾರಿ ಮಾಡಲು ಜಾಗ ಇಲ್ಲದೇ ದೊಡ್ಡ ಸಮಸ್ಯೆಯಾಗಿತ್ತು. ಈಗ ತಾಲೂಕು ಪಂಚಾಯ್ತಿ ಸಹಕಾರದಿಂದ ಕಸ ವಿಲೇವಾರಿಗೆ ಜಾಗ ಗುರ್ತಿಸುವ ಜತೆಯಲ್ಲಿ ಅಕ್ಷೇಪ ವ್ಯಕ್ತ ಪಡಿಸುತ್ತಿದ್ದ ಇಗ್ಗಲೂರು ಗ್ರಾಮಸ್ಥರ ಮನವೊಳಿಸಿ 5 ಎಕರೆ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣ ಘಟಕ ಸ್ಥಾಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಕೆ.ರಮೇಶ್‌ ,ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ,ಪುರಸಭೆ ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌,ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್‌ ,ಉಪಾಧ್ಯಕ್ಷೆ ವಿಜಯಲಕ್ಷ್ಮಿ ,ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಯೀಮ್‌ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌ ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯನರಸಿಂಹ,ಮಧುಸೂಧನ್‌ ,ಸದಸ್ಯರಾದ ಪರಮೇಶ್‌,ಅನಿತಾ ನಾಗರಾಜು,ಪದ್ಮಾವತಿ ವೆಂಕಟಸ್ವಾಮಿ ,ಇಂತಿಯಾಜ್‌,ಜಾಕೀರ್‌ ಖಾನ್‌ ,ಚೈತ್ರ ರವಿ,ವಿಜಯಲಕ್ಷ್ಮಿ ,ಭಾರತಮ್ಮ ಶಂಕರಪ್ಪ, ಪಂಚಾಯ್ತಿ ಅಧ್ಯಕ್ಷೆ ಧನಮ್ಮ ರಾಮಚಂದ್ರ,ಉಪಾಧ್ಯಕ್ಷ ನಾಗರಾಜ್‌ , ಪಿಡಿಒ ಸೋಮೇಶ್‌ ಇನ್ನಿತರರು ಇದ್ದರು.