ದೇವಾಲಯದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ದೇವಾಲಯಕ್ಕೆ ಬರುವ ಭಕ್ತರಿಗೋಸ್ಕರ ಆರೋಗ್ಯ ತಪಾಸಣೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೇ, ದೇವಾಲಯದಲ್ಲಿ ವಿವಿಧ ಆರೋಗ್ಯ ತಪಾಸಣೆ ಜೊತೆ ಉಚಿತ ಚಿಕಿತ್ಸೆ ಜೊತೆ ಔಷಧಿ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಾನವನ ಶರೀರದಲ್ಲಿ ಬಹುಮುಖ್ಯ ಅಂಗ ಕಣ್ಣುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಮಹಾಕಾಳಿ ದೇವಾಲಯದ ಸಂಸ್ಥಾಪಕ ಗುರುದೇವ್ ಸ್ವಾಮೀಜಿ ಹೇಳಿದರು.

ತಾಲೂಕಿನ ಟಿಎಂ.ಹೊಸೂರು ಗೇಟ್ ಬಳಿ ಇರುವ ಶ್ರೀಗುರುದೇವ್ ಮಹಾಕಾಳಿ ಭೈರವಾಶ್ರಮದ ಮಹಾಕಾಳಿ ದೇವಾಲಯದ ಬಳಿ ದೇವಾಲಯದ ಭಕ್ತರಿಗೆ ಆಯೋಜಿಸಿದ್ದ ಉಚಿತ ಕಣ್ಣು ತಪಾಸಣೆ ಶಿಬಿರದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಕಣ್ಣು ಬಹು ಮುಖ್ಯ. ಅದರ ತಪಾಸಣೆ ಮಾಡಿಸಿಕೊಂಡು ಯಾವುದೇ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು ಎಂದರು.

ದೇವಾಲಯದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ದೇವಾಲಯಕ್ಕೆ ಬರುವ ಭಕ್ತರಿಗೋಸ್ಕರ ಆರೋಗ್ಯ ತಪಾಸಣೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೇ, ದೇವಾಲಯದಲ್ಲಿ ವಿವಿಧ ಆರೋಗ್ಯ ತಪಾಸಣೆ ಜೊತೆ ಉಚಿತ ಚಿಕಿತ್ಸೆ ಜೊತೆ ಔಷಧಿ ನೀಡಲಾಗುತ್ತಿದೆ ಎಂದರು.

ಸೆಸ್ಕಾಂ ಕೆ.ಶೆಟ್ಟಹಳ್ಳಿ ವಿಭಾಗದ ಸಹಾಯಕ ಎಂಜಿನಿಯರ್ ಸಂತೋಷ್ ಇ. ಶಿಬಿರಕ್ಕೆ ಚಾಲನೆ ನೀಡಿದರು. ಮೈಸೂರಿನ ಇಂಡಿಯನ್ ವಿಷನ್ ಐ ಕೇರ್ ಸೆಂಟರ್ ವೈದ್ಯ ಸಿಬ್ಬಂದಿ ಕಣ್ಣು ತಪಸಣಾ ಕಾರ್ಯ ನಡೆಸಿದರು. ಸುಮಾರು 150ಕ್ಕೂ ಹೆಚ್ಚು ಮಂದಿ ಕಣ್ಣು ತಪಾಸಣೆ ಮಾಡಿಸಿಕೊಂಡರು. ಕೆಲವರಿಗೆ ಸ್ಥಳದಲ್ಲೇ ಕನ್ನಡಕ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎಸ್.ಆರ್.ಸಿದ್ದೇಗೌಡ, ಪತ್ರಕರ್ತ ಗಂಜಾಂ ಮಂಜು, ದೊಡ್ಡಯ್ಯ ಸೇರಿದಂತೆ ಇತರ ಭಕ್ತರು ಭಾಗವಹಿಸಿದ್ದರು. 20, 21, 23 ಬಸವ, ಭಗೀರಥ,

ಶಂಕರಾಚಾರ್ಯರ ಜಯಂತಿ

ಮಂಡ್ಯ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏ.20 ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶ್ರೀ ವಿಶ್ವಗುರು ಬಸವೇಶ್ವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಪಿಇಎಸ್ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಡಾ.ಎಂ.ಎಸ್.ಅನಿತಾ ಉಪನ್ಯಾಸವನ್ನು ಮಂಡಿಸಲಿದ್ದಾರೆ. ಗಣ್ಯರು ಭಾಗವಹಿಸಲಿದ್ದಾರೆ. ಏ.21 ರಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಗಣ್ಯರು ಭಾಗವಹಿಸಲಿದ್ದಾರೆ. ಏ.23 ರಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕರ್ನಾಟಕ ಸಂಘದದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮೈಸೂರು ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಪಿ.ಸಿದ್ದರಾಮು ಉಪನ್ಯಾಸ ನೀಡುವರು. ಗಣ್ಯರು ಭಾಗವಹಿಸಲಿದ್ದಾರೆ.