ಸಾರಾಂಶ
ವಲಯದ ಹಲವು ಹಳ್ಳಿಗಳಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ, ಕೆಲವು ಜಾತಿ ಜನಾಂಗದವರು ಪರಿಶಿಷ್ಟ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ಪಡೆಯುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಕೆಂಭಾವಿ
ವಲಯದ ಹಲವು ಹಳ್ಳಿಗಳಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ, ಕೆಲವು ಜಾತಿ ಜನಾಂಗದವರು ಪರಿಶಿಷ್ಟ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ಪಡೆಯುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.ಈ ಕುರಿತು ಶನಿವಾರ ಪಟ್ಟಣದ ಉಪ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಸೇನೆಯ ವಲಯಾಧ್ಯಕ್ಷ ಪರಶುರಾಮ ಬೋನಾಳ, ಕೆಂಭಾವಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕೆಲವು ಜನಾಂಗದವರು ಖೊಟ್ಟಿ ದಾಖಲೆ ಸೃಷ್ಟಿಸಿ, ಪರಿಶಿಷ್ಟ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಕಂದಾಯ ಇಲಾಖೆಯ ಹಲವು ಅಧಿಕಾರಿಗಳೂ ಭಾಗಿಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಖೊಟ್ಟಿ ದಾಖಲೆ ಮೂಲಕ ಪಡೆದ ಪ್ರಮಾಣ ಪತ್ರವನ್ನು ರದ್ದು ಮಾಡಿ ಮುಂದೆ ಈ ರೀತಿ ಆಗದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಪರಶುರಾಮ ಕಟ್ಟಿಮನಿ, ರವಿ ಮಾಳಳ್ಳಿಕರ್, ರಾಮು ಯಾಳಗಿ, ಸಿದ್ದಪ್ಪ ಮಾಳಹಳ್ಳಿ, ಸಾಯಬಣ್ಣ ಕೊಡಗಾನೂರ, ಸಮೀರ, ಬಸವರಾಜ ಸೇರಿದಂತೆ ಹಲವರಿದ್ದರು.